ಜೋಹಾನ್ಸ್ ಬರ್ಗ್ ಟೆಸ್ಟ್: ರಬಾಡಾ, ಅಂಪೈರ್ ಗೆ ಕ್ಷಮೆ ಕೇಳಿದ ಕೆ.ಎಲ್.ರಾಹುಲ್
Team Udayavani, Jan 4, 2022, 9:41 AM IST
ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 202 ರನ್ ಗಳಿಗೆ ಆಟ ಮುಗಿಸಿದೆ. ಹಂಗಾಮಿ ನಾಯಕ ಕೆ.ಎಲ್ ರಾಹುಲ್ ಅರ್ಧಶತಕ ಮತ್ತು ರವಿಚಂದ್ರನ್ ಅಶ್ವಿನ್ ಅವರ ಬಹುಮೂಲ್ಯ 46 ರನ್ ಸಹಾಯದಿಂದ ಭಾರತ ತಂಡ ಇನ್ನೂರರ ಗಡಿ ದಾಟಿದೆ.
ಬೆನ್ನು ನೋವಿನ ಕಾರಣದಿಂದ ವಿರಾಟ್ ಕೊಹ್ಲಿ ಪಂದ್ಯದಿಂದ ಹೊರಗುಳಿದ ಕಾರಣ ಕೆ ಎಲ್ ರಾಹುಲ್ ನಾಯಕತ್ವ ವಹಿಸಿದರು. ಈ ಮೂಲಕ ಭಾರತದ 34 ನೇ ಟೆಸ್ಟ್ ನಾಯಕರಾದರು.
ಕಳೆದ ಪಂದ್ಯದ ಶತಕವೀರ ರಾಹುಲ್ ಈ ಪಂದ್ಯದಲ್ಲೂ ಉತ್ತಮ ಆರಂಭ ಒದಗಿಸಿದ್ದಾರೆ. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಕ್ರೀಸ್ ಕಚ್ಚಿ ನಿಂತ ರಾಹುಲ್ ಅರ್ಧಶತಕ ಬಾರಿಸಿದರು.
ಇದನ್ನೂ ಓದಿ:ಪ್ರೊ ಕಬಡ್ಡಿ 8ನೇ ಆವೃತ್ತಿ: ಬೆಂಗಾಲ್‌ಗೆ ಬೆದರಿದ ಪಿಂಕ್ ಪ್ಯಾಂಥರ್
ಭಾರತದ ಮೊದಲ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ರಾಹುಲ್ ಆಫ್ರಿಕಾ ಬೌಲರ್ ಕಗಿಸೋ ರಬಾಡಗೆ ಕ್ಷಮೆ ಕೇಳಿದ ಘಟನೆ ನಡೆಯಿತು. ಐದನೇ ಓವರ್ ನ ಮೂರನೇ ಎಸೆತ ಎಸೆಯಲು ರಬಾಡಾ ಓಡಿ ಬಂದರು. ಕೊನೆ ಕ್ಷಣದಲ್ಲಿ ಕೈ ಎತ್ತಿದ ರಾಹುಲ್, ರಬಾಡರನ್ನು ತಡೆದರು. ಕೂಡಲೇ ಎದುರು ಬಂದ ರಾಹುಲ್ ಅವರು, ಬೌಲರ್ ರಬಡಾ, ಸ್ಲಿಪ್ ಫೀಲ್ಡರ್ಸ್ ಮತ್ತು ಅಂಪೈರ್ ಗೆ ಕ್ಷಮೆ ಕೇಳಿದರು.
Marais is a sweet guy #INDvSA. As is the stand-in captain pic.twitter.com/KVQNqUPt06
— Benaam Baadshah (@BenaamBaadshah4) January 3, 2022
ಮಿಂಚಿದ ರಾಹುಲ್, ಅಶ್ವಿನ್: ಭಾರತದ ಸರದಿಯಲ್ಲಿ ಮಿಂಚಿದ ಇಬ್ಬರು ಆಟಗಾರರೆಂದರೆ ಕೆ.ಎಲ್.ರಾಹುಲ್ ಮತ್ತು ಆರ್.ಅಶ್ವಿನ್. ದಿಢೀರ್ ನಾಯಕತ್ವದ ಒತ್ತಡದ ನಡುವೆಯೂ ಗಟ್ಟಿಯಾಗಿ ನಿಂತ ರಾಹುಲ್ 133 ಎಸೆತಗಳನ್ನು ನಿಭಾಯಿಸಿ ಭರ್ತಿ 50 ರನ್ ಹೊಡೆದರು. ಸಿಡಿಸಿದ್ದು 9 ಬೌಂಡರಿ. ಇದು ಭಾರತದ ಸರದಿಯ ಏಕೈಕ ಅರ್ಧ ಶತಕವಾಗಿತ್ತು. ರಾಹುಲ್ 46ನೇ ಓವರ್‌ನಲ್ಲಿ 5ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು. ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯದ ಬಳಿಕ ತಂಡವನ್ನು ಆಧರಿಸಿ ನಿಂತ ಆರ್. ಅಶ್ವಿನ್ 50 ಎಸೆತ ಎದುರಿಸಿ ಬಹುಮೂಲ್ಯ 46 ರನ್ ಹೊಡೆದರು. ಇದರಲ್ಲಿ 6 ಬೌಂಡರಿ ಸೇರಿತ್ತು.
ಕೈಕೊಟ್ಟ ಪೂಜಾರ, ರಹಾನೆ: ಕೈಕೊಟ್ಟವರಲ್ಲಿ ಪ್ರಮುಖರೆಂದರೆ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ. ನಾಯಕ ವಿರಾಟ್ ಕೊಹ್ಲಿ ಗೈರಲ್ಲಿ ನಿಂತು ಆಡಬೇಕಿದ್ದ ಈ ಅನುಭವಿ ಆಟಗಾರರು ತೀರಾ ಬೇಜವಾಬ್ದಾರಿಯಿಂದ ಆಡಿ ತಮಗೆ ಲಭಿಸಿದ ಮತ್ತೂಂದು ಅವಕಾಶವನ್ನು ವ್ಯರ್ಥಗೊಳಿಸಿದರು. ಪೂಜಾರ 33 ಎಸೆತ ಎದುರಿಸಿದರೂ ಗಳಿಸಿದ್ದು ಮೂರೇ ರನ್. ರಹಾನೆ ಅವರದು “ಶೂನ್ಯ ಸಾಧನೆ’. ಇವರಿಬ್ಬರನ್ನು ಡ್ನೂನ್ ಒಲಿವರ್ ಸತತ ಎಸೆತಗಳಲ್ಲಿ ಕೆಡವಿ ದಕ್ಷಿಣ ಆಫ್ರಿಕಾಕ್ಕೆ ಮೇಲುಗೈ ಒದಗಿಸಿದರು. ಜತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಬೇಟೆಯನ್ನೂ ಪೂರ್ತಿಗೊಳಿಸಿದರು. ಇವರಂತೆ ಮತ್ತೂಂದು ಅವಕಾಶ ಪಡೆದ ಶಾರ್ದೂಲ್ ಠಾಕೂರ್ ಕೂಡ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.