81ನೇ ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಆ್ಯತ್ಲೆಟಿಕ್ಸ್‌ಗೆ ಅದ್ದೂರಿ ಚಾಲನೆ
Team Udayavani, Jan 5, 2022, 5:20 AM IST
ಮೂಡುಬಿದಿರೆ: ಮಂಗಳೂರು ವಿ.ವಿ. ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋ ಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್‌ನ ಸಹಭಾಗಿತ್ವದ 4 ದಿನಗಳ 81ನೇ ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಆ್ಯತ್ಲೆಟಿಕ್ ಕೂಟವನ್ನು ಕರ್ನಾಟಕ ಸರಕಾರ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣ ಗೌಡ ಉದ್ಘಾಟಿಸಿದರು.
ಒಲಿಂಪಿಕ್ಸ್‌ಗಾಗಿ ರಾಜ್ಯದ 75 ಮಂದಿ ಕ್ರೀಡಾಳುಗಳಿಗೆ ತರಬೇತಿ ನೀಡುವ ಯೋಜನೆ ಇದ್ದು, ಖೇಲೋ ಇಂಡಿಯಾ ಕೂಟಕ್ಕೆ ಕರ್ನಾಟಕದಲ್ಲಿ ಪೂರಕ ಸಿದ್ಧತೆಗಳಾಗುತ್ತಿವೆ ಎಂದರು.
ಸಾಧಕ ಕ್ರೀಡಾಳುಗಳಿಗೆ ಕ್ರೀಡಾ ಇಲಾಖಾ ಹುದ್ದೆಗಳಲ್ಲಿ 50 ಶೇ. ಹಾಗೂ ಇತರ ಇಲಾಖೆಗಳಲ್ಲಿ 2 ಶೇ. ಮೀಸಲು ಕಲ್ಪಿಸಲಾಗುವುದು ಎಂದು ಅವರು ಘೋಷಿಸಿದರು.
ಇಷ್ಟೊಂದು ವ್ಯವಸ್ಥಿತ, ವರ್ಣರಂಜಿತ, ಅದ್ಧೂರಿಯ ಕ್ರೀಡಾಕೂಟವನ್ನು ತಮ್ಮ ಅಧಿಕಾರಾವಧಿಯಲ್ಲಿ ಇದೇ ಮೊದಲಾಗಿ ವೀಕ್ಷಿಸುತ್ತಿದ್ದೇನೆ; ಸಂಘಟಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದ ಸಚಿವರು, ಕ್ರೀಡಾಕೂಟಕ್ಕೆ ಕೇಂದ್ರದಿಂದ 10 ಲಕ್ಷ ರೂ. ಲಭಿಸುವ ಜತೆಗೆ ರಾಜ್ಯದಿಂದ 5 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.
ಸಮಾರಂಭದಲ್ಲಿ ಒಲಿಂಪಿಯನ್ ಎಂ. ಆರ್. ಪೂವಮ್ಮ ಅವರಿಗೆ ರೂ. 25 ಸಾವಿರ ನಗದು ಸಹಿತ ಸಮ್ಮಾನಿಸಲಾಯಿತು.
ಮಂಗಳೂರು ವಿ.ವಿ. ಉಪಕುಲಪತಿ ಡಾ. ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಶಾಸಕ ಕೆ. ಉಮಾನಾಥ್ ಕೋಟ್ಯಾನ್ ಕ್ರೀಡಾಜ್ಯೋತಿ ಬೆಳಗಿಸಿದರು. ತೀರ್ಥೇಶ ಶೆಟ್ಟಿ ಪ್ರಮಾಣವಚನ ಬೋಧಿ ಸಿದರು. ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್‌ನ ಜಂಟಿ ಕಾರ್ಯದರ್ಶಿ ಡಾ. ಬಲ್ಜೀತ್ ಸಿಂಗ್ ಸೋಖನ್ ಧ್ವಜಾರೋಹಣ ನೆರವೇರಿಸಿದರು.
ಇದನ್ನೂ ಓದಿ:ಠಾಕೂರ್ ಸೂಪರ್ ಬೌಲಿಂಗ್; ಭಾರತ ತಿರುಗೇಟು
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕನ್ನಡ ಹಾಗೂ ಸಂಸ್ಕೃತಿ ಇಲಾಖಾ ಸಚಿವ ವಿ. ಸುನಿಲ್ ಕುಮಾರ್, ಮಾಜಿ ಕ್ರೀಡಾ ಸಚಿವರಾದ ಅಭಯಚಂದ್ರ, ಪ್ರಮೋದ್ ಮಧ್ವರಾಜ್, ವಿಶೇಷ ಆಹ್ವಾನಿತರಾಗಿ ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟಿಯ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ಬಿನು ಜಾರ್ಜ್ ವರ್ಗೀಸ್, ಅದಾನಿ ಗ್ರೂಪ್ಸ್ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿ ರವೀಂದ್ರ ಆಳ್ವ, ಶಶಿಧರ್ ಶೆಟ್ಟಿ, ಎಂಸಿಎಸ್ ಸಂಘದ ಸಿಇಒ ಚಂದ್ರಶೇಖರ್ ಎಂ., ಕಾರ್ಡೊಲೆ„ಟ್ ಜಿ.ಎಂ. ದಿವಾಕರ್ ಕದ್ರಿ, ಕೆ. ಶ್ರೀಪತಿ ಭಟ್ ಉಪಸ್ಥಿತರಿದ್ದರು.
ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ
5ನೇ ಬಾರಿಗೆ ಆಳ್ವಾಸ್ ಅತಿಥ್ಯದಲ್ಲಿ ಜರಗುತ್ತಿರುವ ಕ್ರೀಡಾಕೂಟದ ಉದ್ಘಾಟನೆಯ ಮುನ್ನ 248 ವಿ.ವಿ.ಗಳ ಆ್ಯತ್ಲೀಟ್‌ಗಳು ಆಕರ್ಷಕ ಪಥಸಂಚಲನ ನೆರವೇರಿಸಿದರು. ಪಥಸಂಚಲನದ ಬಳಿಕ ಅದ್ದೂರಿಯಾದ ಸಾಂಸ್ಕೃತಿಕ ಮೆರವಣಿಗೆಯಲ್ಲಿ, ರಾಷ್ಟ್ರದ ವಿವಿಧ ಕಲೆ-ಸಂಸ್ಕೃತಿಗಳನ್ನು ಬಿಂಬಿಸುವ 150ಕ್ಕೂ ಹೆಚ್ಚು ಕಲಾತಂಡಗಳು ಭಾಗವ ಹಿಸಿದ್ದು ಸುಡುಮದ್ದು ಪ್ರದರ್ಶನಏರ್ಪಡಿಸಲಾಗಿತ್ತು.
ಮಂ.ವಿ. ವಿ. ದೈ.ಶಿ. ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ ಸ್ವಾಗತಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅತಿಥಿಗಳನ್ನು ಗೌರವಿಸಿದರು. ರಾಜೇಶ್ ಡಿ’ಸೋಜ ಮತ್ತು ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.
10 ಸಾವಿರ ಮೀ. ಓಟ: ಆಳ್ವಾಸ್‌ನ ಆದೇಶ್ ದಾಖಲೆ
ಕೂಟದ ಮೊದಲ ಸ್ಪರ್ಧೆಯಾದ 10,000 ಮೀ. ಓಟದಲ್ಲಿ ಮಂಗಳೂರು ವಿ.ವಿ.ಯ ಆದೇಶ್ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ (29 ನಿ. 15.46 ಸೆ.). ಆದೇಶ್ ಆತಿಥೇಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ.
2021ರ 80ನೇ ಅಖಿಲ ಭಾರತ ಅಂತರ್ ವಿ.ವಿ. ಆ್ಯತ್ಲೆಟಿಕ್ಸ್‌ನಲ್ಲಿ ನಿರ್ಮಾಣಗೊಂಡ ಆಳ್ವಾಸ್‌ನ ನರೇಂದ್ರ ಪ್ರತಾಪ್ ಸಿಂಗ್ (29 ನಿ. 42.19 ಸೆ.) ಅವರ ದಾಖಲೆಯನ್ನು ಆದೇಶ್ ಮುರಿದರು. ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಆರಿಫ್ ಹಾಗೂ ರಾಮ್ ವಿನೋದ್ ಕೂಡ ಹಿಂದಿನ ದಾಖಲೆಯನ್ನು ಉತ್ತಮಪಡಿಸಿದರು.
ಕೂಟದ ದಾಖಲೆಗಾಗಿ ಆದೇಶ್ ಅವರಿಗೆ ಆಳ್ವಾಸ್ ಪ್ರತಿಷ್ಠಾನದ ವತಿಯಿಂದ 25,000 ರೂ. ಹಾಗೂ ಚಿನ್ನದ ಪದಕ ಗೆದ್ದ ಸಾಧನೆಗೆ 25,000 ರೂ. ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.