ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡಿ
Team Udayavani, Jan 5, 2022, 9:02 PM IST
ಗುತ್ತಲ: ಬೇಡ ಜಂಗಮರಿಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ಸರಕಾರ ನೀಡಬೇಕು. ನಾವು ಈಗಾಗಲೇ ಬೇಡ ಜಂಗಮರು ಎನ್ನಲು ಹಲವಾರು ದಾಖಲೆಗಳು ಸರಕಾರದ ಮುಂದಿವೆ ಎಂದು ಗುದ್ದಲೀಶ್ವರ ಮಠದ ಗುದ್ದಲೀಶ್ವರ ಸ್ವಾಮೀಜಿ ಹೇಳಿದರು.
ಹೊಸರಿತ್ತಿ ಗ್ರಾಮದಲ್ಲಿ ಬೇಡ ಜಂಗಮ ಸಮಾಜ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಬೇಡ ಜಂಗಮರು ಯಾರ ಹಕ್ಕನ್ನೂ ಕಿತ್ತುಕೊಂಡಿಲ್ಲ. ಮತ್ತು ಕಿತ್ತುಕೊಳ್ಳುತ್ತಿಲ್ಲ. ಆದರೆ ತಮಗೆ ಸಂವಿಧಾನಾತ್ಮಕವಾಗಿ ಸಿಗಬೇಕಾಗಿರುವ ಹಕ್ಕನ್ನು ಪಡೆದುಕೊಳ್ಳಲು ಹೋರಾಟ ಮಾಡುವ ಸ್ಥಿತಿ ಬಂದಿದೆ. ಡಾ|ಅಂಬೇಡ್ಕರ್ ಅವರು ಜಂಗಮರನ್ನು ಸಂವಿಧಾನ ರಚನೆ ಮಾಡುವಾಗ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದಾರೆ ಎಂದರು.
ಜಿಲ್ಲಾ ಬೇಡ ಜಂಗಮ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಮಠದ ಮಾತನಾಡಿ, ರಾಜ್ಯದಲ್ಲಿ ಅತೀ ಹಿಂದುಳಿದ ಜಾತಿಗಳಲ್ಲಿ ಬೇಡ ಜಂಗಮ ಸಮಾಜವೂ ಒಂದು. ಆದ್ದರಿಂದ, ಕೇಂದ್ರ ಸರಕಾರ ಸಂವಿಧಾನದಲ್ಲಿ ಸ್ಪಷ್ಟವಾಗಿ ಬೇಡ ಜಂಗಮ ಜಾತಿಯ ಬಗ್ಗೆ ನಮೂದಿಸಿದೆ. ಅಲ್ಲದೇ, ಸೂರ್ಯನಾಥ ಕಾಮತ ವರದಿ ಮತ್ತು ಕೋರ್ಟ್ ಆದೇಶದಲ್ಲೂ ರಾಜ್ಯದ ವೀರಶೈವ ಜಂಗಮರೇ ಬೇಡ ಜಂಗಮರು ಎಂದು ಸ್ಪಷ್ಟವಾಗಿ ತಿಳಿಸಲಾಗದೆ.
ಆದರೂ. ಅಧಿ ಕಾರಿಗಳು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಆದ್ದ ರಿಂದ, ಜಂಗಮರೆಲ್ಲರೂ ಸಂಘಟನೆಯ ಮುಂಖಾ ತರ ನಮ್ಮ ಹಕ್ಕನ್ನು ಪಡೆಯಬೇಕಾಗಿದೆ ಎಂದರು. ರಾಣಿಬೆನ್ನೂರ ತಾಲೂಕು ಬೇಡ ಜಂಗಮ ಅಧ್ಯಕ್ಷ ಎಸ್.ಡಿ. ಹಿರೇಮಠ ಮಾತನಾಡಿ, ಸಂಘಟನೆಯ ಮುಂಖಾತರ ಹೋರಾಟ ಮಾಡಬೇಕಾಗಿದೆ. ಬೆಳಗಾವಿ ಅಧಿ ವೇಶನದಲ್ಲಿ ಬೇಡ ಜಂಗಮ ಸಮಾಜದ ಬಗ್ಗೆ ಸರಕಾರಕ್ಕೆ ತಪ್ಪು ಮಾಹಿತಿ ನೀಡಿರುವ ಶಾಸಕ ಪಿ. ರಾಜೀವ ಅವರು ಸಂವಿಧಾನವನ್ನು ಚನ್ನಾಗಿ ತಿಳಿದುಕೊಳ್ಳಬೇಕಾಗಿದೆ.
ಮತ್ತು ಅಂಬೇಡ್ಕರ್ ಅವರು 101ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬೇಡ ಜಂಗಮ ಸಮಾಜವನ್ನು ಸೇರಿಸಿದ್ದಾರೆ. ನಾವುಗಳು ಹೊಸದಾಗಿ ಸೇರಿಸಿ ಎನ್ನುತ್ತಿಲ್ಲ. ನಮಗೆ ನ್ಯಾಯಯುತವಾಗಿ ಸಿಗಬೇಕಾದ ಪ್ರಮಾಣ ಪತ್ರ ನೀಡಬೇಕು. ಮತ್ತು ಶಾಸಕ ಪಿ.ರಾಜೀವ ಬೇಡಜಂಗಮರ ಬಗ್ಗೆ ತಪ್ಪು ಮಾಹಿತಿ ನೀಡಿರುವ ಬಗ್ಗೆ ಬಹಿರಂಗ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು. ಬೆಳಗಾವಿ ಅ ಧಿವೇಶನದ ಸಮಯದಲ್ಲಿ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.