ಕೆರೆ ಹೆಸರು ಬದಲಾಯಿಸಲು ಗ್ರಾಮಸ್ಥ ರ ಒತ್ತಾಯ
The villager insists on changing the lake name
Team Udayavani, Jan 5, 2022, 9:39 PM IST
ಯಲಬುರ್ಗಾ: ತಾಲೂಕಿನ ತರಲಕಟ್ಟಿ ಗ್ರಾಮ ವ್ಯಾಪ್ತಿಯಲ್ಲಿರುವ ಕೆರೆಗೆ ನಿಲೋಗಲ್ ಕೆರೆ ಎಂಬ ಹೆಸರಿನಿಂದ ಕರೆಯುತ್ತಿರುವುದು ಸರಿಯಲ್ಲ. ಶೀಘ್ರದಲ್ಲೇ ಇದಕ್ಕೆ ತರಲಕಟ್ಟಿ ಕೆರೆ ಎಂದು ದಾಖಲೆಗಳಲ್ಲಿ ನಮೂದಿಸಲು ಮುಂದಾಗಬೇಕು ಎಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರಿಗೆ ರೈತ ಮುಖಂಡರು, ಗ್ರಾಮಸ್ಥರು ಮನವಿ ಸಲ್ಲಿಸಿದರು.
ರೈತ ಮುಖಂಡ ಶ್ರೀಕಾಂತಗೌಡ ಮಾಲಿಪಾಟೀಲ್ ಮಾತನಾಡಿ, ತರಲಕಟ್ಟಿ ಗ್ರಾಮದ ನೂರಾರು ಎಕರೆ ಜಮೀನು ಕೆರೆ ನಿರ್ಮಾಣಕ್ಕೆ ಸ್ವಾ ಧೀನಪಡಿಸಿಕೊಂಡಿದ್ದು ತರಲಕಟ್ಟಿ ಸೀಮಾದ ಭೂಮಿಯೇ ಹೊರತು ನೀಲೋಗಲ್ ಗ್ರಾಮದ ಒಂದು ಇಂಚು ಭೂಮಿ ಸಹ ಕೆರೆ ನಿರ್ಮಾಣಕ್ಕೆ ಬಳಸಿಲ್ಲ. ಅದಕ್ಕೆ ನೀಲೋಗಲ್ ಕೆರೆಯಂದು ಕರೆಯುವುದು ತಪ್ಪು, ತರಲಕಟ್ಟಿ ಕೆರೆಗೆ ನಿಲೋಗಲ್ ಕೆರೆಯಂದು ಕರೆಯುವುದನ್ನು ಬಿಡಬೇಕು. ಸರ್ಕಾರ 1983ರ ಸಂದರ್ಭದಲ್ಲಿ ರಾಯಚೂರು ಜಿಲ್ಲೆ ಇದ್ದ ವೇಳೆ ಯಲಬುರ್ಗಾ ತಾಲೂಕಿನ ತರಲಕಟ್ಟಿ ಭೂಮಿ ಸ್ವಾಧೀನಕ್ಕೆ ಮುಂದಾದಾಗ ಸುತ್ತೋಲೆಯಲ್ಲಿ ತರಲಕಟ್ಟಿ ಎಂದು ದಾಖಲೆಗಳಲ್ಲಿ ಇವೆ. ತರಲಕಟ್ಟಿ ಗ್ರಾಮದಲ್ಲಿ ಕೆರೆ ನಿರ್ಮಾಣ ಮಾಡುವುದರಿಂದ ನಿಲೋಗಲ್ ಜನತೆಗೆ ಅನುಕೂಲವಾಗಲಿದೆ ಎಂದು ದಾಖಲೆಗಳಲ್ಲಿದೇ ವಿನಃ ನಿಲೋಗಲ್ ಕೆರೆ ಎಂದು ಇಲ್ಲ.
ಆದ್ದರಿಂದ ಸಣ್ಣ ನೀರಾವರಿ ಇಲಾಖೆಯವರ ದಾಖಲಾತಿಯಲ್ಲಿ ನಿಲೋಗಲ್ಲ ಕೆರೆ ಎಂದು ನಾಮಕರಣ ಮಾಡಿದ್ದಾರೆ. ಈಗ ಇದನ್ನು ರದ್ದು ಪಡಿಸಿ ತರಲಕಟ್ಟಿ ಕೆರೆ ಎಂದು ನಾಮಕರಣ ಮಾಡಬೇಕು. ಒಂದು ವೇಳೆ ಹೆಸರು ಬದಲಾವಣೆ ಮಾಡದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ನೀಲೋಗಲ್ ಕೆರೆ ಎಂದು ಕರೆಯುವುದಾದರೆ ತರಲಕಟ್ಟಿಯಲ್ಲಿ ಕೆರೆ ಕಾಮಗಾರಿ ನಿರ್ವಹಿಸಲು ಬಿಡುವುದಿಲ್ಲ. ನಮ್ಮ ಭೂಮಿ ನಮ್ಮ ಕೆರೆ ಇದನ್ನು ಅಧಿ ಕಾರಿಗಳು, ಸಚಿವರು ಅರ್ಥ ಮಾಡಿಕೊಳ್ಳಬೇಕು. ಸಚಿವರು ಸಣ್ಣ ನೀರಾವರಿ ಇಲಾಖೆ ಅ ಧಿಕಾರಿಗಳಿಗೆ ತಿಳಿಸಿ ಹೆಸರು ಬದಲಾವಣೆ ಮಾಡಲು ಕ್ರಮ ಕೈಗೊಳ್ಳಬೇಕು ಮತ್ತು ಕೆರೆಗೆ ಭೂಮಿಗೆ ಕಳೆದುಕೊಂಡ ರೈತರಿಗೆ ಕೂಡಲೇ ಪರಿಹಾರ ನೀಡಲು ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮನವಿ ಸ್ವೀಕರಿಸಿ ಮಾತನಾಡಿ, ಶೀಘ್ರದಲ್ಲೇ ಪರಿಶೀಲನೆ ನಡೆಸಿ ಅಗತ್ಯ ಕ್ರಮಕ್ಕೆ ಮುಂದಾಗುತ್ತೇನೆ ಎಂಬ ಭರವಸೆ ನೀಡಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಗೌಡ ಮಾಲಿಪಾಟೀಲ್, ಚಂದ್ರಶೇಖರಗೌಡ ಮಾಲಿಪಾಟೀಲ್, ಶಂಕ್ರಪ್ಪ ವಜ್ರಬಂಡಿ, ಕರಿಯಪ್ಪ ನಂದಿಹಾಳ, ಮಲ್ಲೇಶ ಕೋನಸಾಗರ, ಹನುಮೇಶ ಬುಡಶೆಟ್ನಾಳ, ಹನುಮಂತಪ್ಪ ಚನ್ನದಾಸರ, ಹನುಮಂತಪ್ಪ ತಳವಾರ, ಗಂಗನಗೌಡ ಮಾಲಿಪಾಟೀಲ್, ಮಲ್ಲಪ್ಪ ಹಡಪದ ಸೇರಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.