ಮನುಷ್ಯನಿಗೆ ಪ್ರಕೃತಿಯೇ ಪ್ರೇರಣೆ, ಸ್ಫೂರ್ತಿ

ಜೀವಜಗತ್ತಿನ ಸೋಜಿಗವೂ ರೋಚಕವೂ ಆಗಿದ್ದು ಬುದ್ಧಿಶಾಲಿ ಮನುಷ್ಯ ಹೆಕ್ಕಿಕೊಳ್ಳಬಹುದಾದ ತುಣುಕುಗಳಾಗಿವೆ.

Team Udayavani, Jan 6, 2022, 7:40 AM IST

ಮನುಷ್ಯನಿಗೆ ಪ್ರಕೃತಿಯೇ ಪ್ರೇರಣೆ, ಸ್ಫೂರ್ತಿ

ಭೂಪರಿಸರದ ಇತಿಹಾ ಸವೇ ಹಾಗೆ. ನೈಸರ್ಗಿಕ ವಿಕೋ ಪಗಳು, ಸಾಂಕ್ರಾಮಿಕ ರೋಗಗ ಳೆಲ್ಲವೂ ಇಲ್ಲಿ ನಿರಂತರವಾದ ಸಹಜ ವಿದ್ಯಮಾನಗಳು. ಇಲ್ಲಿ ಅವತರಿಸಿದ ಜೀವಚರಗಳ ಪ್ರತಿಯೊಂದು ಕ್ಷಣವೂ ಆತಂಕಮಯವೇ.. ಕಷ್ಟ ಯಾರನ್ನೂ ಬಿಟ್ಟಿಲ್ಲ. ಹಾಗೆ ನೋಡಿದರೆ ಮನುಷ್ಯರೇ ಹೆಚ್ಚು ಸುರಕ್ಷಿತ. ಬಹುತೇಕ ಇತರ ಜೀವಿಗಳು ತತ್ತಿಯ ಹಂತ ಅಥವಾ ಜನ್ಮವೆತ್ತುತ್ತಿದ್ದಂತೆ ಜೀವಭಯ, ಎದುರಾಗುವ ಅಳಿವು-ಉಳಿವಿನ ಹೋರಾಟದಲ್ಲಿ ಗೆದ್ದ ಜೀವಿಗಳಿಗಷ್ಟೇ ಉಳಿವು. ಸೂಕ್ಷ್ಮಾಣು ಬ್ಯಾಕ್ಟೀರಿಯಾದಿಂದ ಹಿಡಿದು ದೈತ್ಯ ನೀಲಿ ತಿಮಿಂಗಿಲದವರೆಗೆ ಪ್ರತೀ ಜೀವಿಯೂ ಸುತ್ತಲಿನ ಜೈವಿಕ ಮತ್ತು ಅಜೈವಿಕ ಬೆದರಿಕೆ-ಆಪತ್ತುಗಳನ್ನು ಎದುರಿ ಸುತ್ತಲೇ ಬದುಕು ಕಳೆಯುತ್ತವೆ. ಅಲ್ಲಿ ಬದುಕೆಂದರೆ ಅಕ್ಷರಶಃ ಹೋರಾಟ, ಹೊಂದಾಣಿಕೆ, ಮಾರ್ಪಾಟು. ಅಷ್ಟಿದ್ದೂ ಅವೆಂದಿಗೂ ರೋಗ, ಶತ್ರು, ಸಾವು-ನೋವುಗಳ ಬಗ್ಗೆ ನಮ್ಮಷ್ಟು ಭಯಭೀತರಾಗಿಲ್ಲ. ಯಾರನ್ನೂ ದೂರುತ್ತಾ ಕುಳಿ ತುಕೊಳ್ಳುವುದಿಲ್ಲ. ಅಲ್ಲೊಂದು ನಿಸ್ವಾರ್ಥ ಬದುಕಿನ ನಿರಂತರ ತುಡಿತವಿದೆ, ಹೋರಾಟವಿದೆ, ಸೈರಣೆಯ ತಣ್ತೀವಿದೆ.

ಸಸ್ಯಪ್ರಾಣಿಗಳೆಲ್ಲ ತಮ್ಮ ಜೀವರಕ್ಷಣೆಗಾಗಿ ವಿಶಿಷ್ಟ ತಂತ್ರೋಪಾಯಗಳನ್ನು ಅಳವಡಿಸಿಕೊಂಡಿರುತ್ತವೆ. ಸನ್ನಿ ವೇಶವನ್ನು ಅಗತ್ಯಗಳಿಗನುಗುಣವಾಗಿ ಪಳಗಿಸಲು, ಶತ್ರು ಗಳಿಂದ ಪಾರಾಗಲು, ರೋಗವನ್ನು ಹಿಮ್ಮೆಟ್ಟಿಸಲು ಜೀವಿ ಗಳ ಒಳಹೊರಗು ಏರ್ಪಡುವ ಮಾರ್ಪಾಟುಗಳೇ ಈ ರಕ್ಷಣ ತಂತ್ರಗಳು. ನಿರಂತರವಾಗಿ ಬದಲಾಗುವ ಪಾರಿಸರಿಕ ಒತ್ತಡಗಳನ್ನು ಸುದೃಢವಾಗಿ ಮೀರಿನಿಲ್ಲಲು ಅಗತ್ಯ ವಾದ ಶಾರೀರಿಕ, ಮಾನಸಿಕ, ಮತ್ತು ವರ್ತನೆಯಲ್ಲಿನ ಮಾರ್ಪಾ ಡುಗಳು ಪ್ರಮುಖವಾದವು. ಕೆಲವಂತೂ ಜೀವಜಗತ್ತಿನ ಸೋಜಿಗವೂ ರೋಚಕವೂ ಆಗಿದ್ದು ಬುದ್ಧಿಶಾಲಿ ಮನುಷ್ಯ ಹೆಕ್ಕಿಕೊಳ್ಳಬಹುದಾದ ತುಣುಕುಗಳಾಗಿವೆ.

ಶೀತವಲಯದಲ್ಲಿರುವ ಮರಗಪ್ಪೆಯು ದೇಹದಲ್ಲಿ ಶೀತನಿರೋಧಕ ವ್ಯವಸ್ಥೆಯನ್ನು ಹೊಂದಿದ್ದು, ಚಳಿಗಾಲದಲ್ಲಿ ಪ್ರಮುಖ ಅಂಗಗಳಾದ ಹೃದಯ ಮತ್ತು ಮೆದುಳಿನ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿರುತ್ತದೆ. ಘನೀಕರಣ ಪ್ರಕ್ರಿಯೆಯಲ್ಲಿ ಕೋಶಗಳು ಸ್ಫೋಟಗೊಳ್ಳುವುದನ್ನು ತಡೆ ಯಲು ಕೋಶಗಳಿಗೆ ಹೆಚ್ಚುವರಿ ಗ್ಲೂಕೋಸನ್ನು ಪಂಪ್‌ ಮಾಡುತ್ತದೆ. ಸಮುದ್ರಸೌತೆಯಂತೂ ಕರುಳಿನಂತಹ ಒಳಾಂಗಗಳನ್ನೇ ಗುದದ್ವಾರದ ಮೂಲಕ ಶತ್ರುವಿನತ್ತ ಎಸೆದು ಪಾರಾಗುವುದಲ್ಲದೆ, 6 ವಾರಗಳಲ್ಲಿ ಕಳೆದುಕೊಂಡ ಅಂಗಗಳನ್ನು ಪುನರುತ್ಪತ್ತಿ ಮಾಡಿಕೊಳ್ಳುತ್ತದೆ!. ಅಲ್ಲಿ ಸ್ರವಿಕೆಯಾಗುವ ಹೋಲೋಥುರಿನ್‌ ವಿಷದ್ರವ್ಯವು ಶತ್ರುವಿನ ಸಾವಿಗೆ ಕಾರಣವಾಗುತ್ತದೆ. ಇನ್ನು ಕಡಲಚಿಳ್ಳೆ (ಸೀಅನಿಮೋನ್‌) ಮತ್ತು ಬಾಕ್ಸರ್‌ ಏಡಿಗಳ ಕೂಡುಜೀವನ ವಿಧಾನದಲ್ಲಿ ಅನಿಮೋನ್‌ ಬಾಕ್ಸಿಂಗ್‌ ಕೈಚೀಲಗಳನ್ನೇ ರûಾಕ ವಚವನ್ನಾಗಿ ಬಳಸಿಕೊಳ್ಳುವುದಿದೆ. ಜೀವಭಕ್ಷಕಗಳಿಂದ ಪಾರಾಗಲು ಕಟ್ಲಫಿಷ್‌ ತನ್ನ ಬಣ್ಣ, ಆಕಾರ, ಗಾತ್ರಗಳನ್ನು ಬದಲಿಸಿಕೊಂಡು ಅವಿತುಕೂರುತ್ತವೆ.

ಮಲೇಷ್ಯನ್‌ ಸ್ಫೋಟಕ ಇರುವೆಯು ತನ್ನ ಕಾಲನಿ ಯನ್ನು ರಕ್ಷಿಸಲು ವೀರಯೋಧನಂತೆ ಸೆಣಸಾಡಿ ಹುತಾತ್ಮ ನಾಗುತ್ತದೆ!. ಎರಡು ವಿಷಗ್ರಂಥಿಗಳನ್ನು ಹೊಟ್ಟೆಯೊಡೆದು ಸ್ಫೋಟಿಸಿಕೊಂಡು ಪ್ರಾಣತ್ಯಾಗ ಮಾಡಿ ನುಸುಳುಕೋರರ ಮೇಲೆ ದಾಳಿ ನಡೆಸುವ ಮೂಲಕ ತನ್ನ ಬಳಗವನ್ನು ಸಂರಕ್ಷಿಸಿಕೊಳ್ಳುವ ಅಪೂರ್ವ ಮಾದರಿಯಿದೆ. ಕಾಡುಪಾಪ ತನ್ನ ತೋಳಿನ ವಿಷಗ್ರಂಥಿಯಿಂದ‌ ಮೈಗೆಲ್ಲ ವಿಷಲೇಪನ ಮಾಡಿ ಕೊಂಡು ಶತ್ರುಗಳಿಂದ ಬಚಾವಾಗುತ್ತದೆ.

ಘರ್ಷಣಾ ದುಂಬಿಯು ತನ್ನ ಗುದದಿಂದ ಹಾನಿಕಾರಕ ಹೈಡ್ರೋಕ್ವಿನೋನ್‌, ಹೈಡ್ರೋಜನ್‌ ಪರಾಕ್ಸೆ„ಡ್‌ ಮತ್ತು ಕಿಣ್ವಗಳ ಮಿಶ್ರಣದ ವಿಷಪದಾರ್ಥವನ್ನು ಚಿಮ್ಮಿಸುವ ಮೂಲಕ ಎದುರಾಳಿಗಳನ್ನು ಹಿಮ್ಮೆಟ್ಟಿಸುತ್ತದೆ. ಇನ್ನುಟೆಕ್ಸಾಸ್‌ ಕೋಡಿನ ಹಲ್ಲಿಯು ಭಯ-ಅಪಾಯದ ಸುಳಿವಿದ್ದಾಗ ಕಣ್ಣಲ್ಲಿ ವಿಷಸು#ರಿಸಿ ಬದುಕುಳಿಯುತ್ತದೆ. ಮೈಬಣ್ಣ ಬದಲಿಸುವುದು, ಎದೆಗೊಟ್ಟು ಹೋರಾಡುವುದೆಲ್ಲ ಆಗದಿದ್ದಾಗ ಕೊನೆಯ ಹೋರಾಟಾಸ್ತ್ರವಾಗಿ ಕಣ್ಣಿಂದ ರಕ್ತ ಕಾರುತ್ತದೆ!. ಐಬೀರಿಯನ್‌ ರಿಬ್ಬಡ್‌ ನೆವ್‌r ಎಂಬ ಉಭಯವಾಸಿಯು ತನ್ನ ಆಕಾರ ಬದಲಿಸಿಕೊಳ್ಳುವುದಲ್ಲದೆ ವಿಷದ್ರವ್ಯದೊಟ್ಟಿಗೆ ತನ್ನ ಪಕ್ಕೆಗಳನ್ನೇ ಈಟಿಯಂತೆ ಶತ್ರುವಿನತ್ತ ಎಸೆದು ಪಲಾಯನಗೈಯುತ್ತದೆ. ರೇಫಿಷ್‌ ತನ್ನ ಭಕ್ಷಕರೆಡೆಗೆ ಆಘಾತಕಾರಿ ಕರೆಂಟ್‌ ಶಾಕ್‌ ನೀಡಿದರೆ, ಹಲ್ಲಿ ತನ್ನ ಬಾಲವನ್ನೇ ಕಳಚಿಕೊಂಡು ಪರಾರಿಯಾಗುತ್ತದೆ. ಆಮೆ ಹೊರಡಿಸುವ ವಾಸನೆ, ಸುತ್ತಿಗೆತಲೆ ಮೀನಿನ ಬಲವಾದ ಹೊಡೆತಗಳು ಭಕ್ಷಕಗಳಿಂದ ಅವುಗಳನ್ನು ರಕ್ಷಿಸುತ್ತವೆ.

ಸುಮಾರು ಮುನ್ನೂರು ಕೋಟಿ ವರ್ಷಗಳಷ್ಟು ಪುರಾ ತನ ಜೀವಂತ ಪಳೆಯುಳಿಕೆಯೆನಿಸಿರುವ ಹ್ಯಾಗ್‌ಫಿಷ್‌ ತನ್ನ ಶತ್ರುವಿನ ಕಿವಿರುಗಳ ಮೇಲೆ ಅಂಟುದ್ರವವನ್ನು ಸ್ರವಿಸುವ ಮೂಲಕ ಶತ್ರುವಿನ ಕಿವಿರುಗಳನ್ನು ತೆರೆಯದಂತೆ ಉಸಿರುಗಟ್ಟಿಸುತ್ತದೆ. ಮೊನಾರ್ಕ್‌ ಚಿಟ್ಟೆಯ ದೇಹವೇ ಕಹಿಯಾಗಿ ಬದಲಾದ್ದರಿಂದ ಕೊಂದುತಿನ್ನುವ ಹಕ್ಕಿಗಳಿಂದ ಅದು ತಿರಸ್ಕೃತ!. ಸೈಬೀರಿಯಾದ ಕೊಕ್ಕರೆ, ಆರ್ಕ್‌ಟಿಕ್‌ ಟರ್ನ್, ಸಾಲ್ಮೋನಾ ಮೀನುಗಳಂತಹ ಹಲವಾರು ಪಶುಪಕ್ಷಿಗಳು ಆತಂಕಮಯ ಪರಿಸರದಿಂದ ಸುರಕ್ಷಾತಾಣಕ್ಕೆ ತಾತ್ಕಾಲಿಕ ವಲಸೆ ಕೈಗೊಳ್ಳುತ್ತವೆ.

ಏಕಕೋಶಜೀವಿ, ಬ್ಯಾಕ್ಟೀರಿಯಾ, ಶೈವಲಗಳೆಲ್ಲ ಅನಾನು ಕೂಲ ವಾತಾವರಣವಿರುವಾಗ ಮುದುರುವಿಕೆಯ ಮೊರೆ ಹೋಗುತ್ತವೆ. ಕಪ್ಪೆ, ಹಲ್ಲಿ, ಅಳಿಲು, ಕರಡಿ, ಬಾವಲಿ ಗಳ ಸಹಿತ ಬಹುತೇಕ ಶೀತರಕ್ತ ಪ್ರಾಣಿಗಳು ಚಳಿನಿದ್ದೆ ಯಂತಹ ಸ್ತಬ್ಧ ಪ್ರಕ್ರಿಯೆಗೆ ಜಾರಿದರೆ, ಕೆಲವು ಮೃದ್ವಂಗಿ, ಮೀನುಗಳು ವೈಶಾಖನಿದ್ದೆಯಲ್ಲಿ ಅಡಗಿಕೊಂಡು ಜೈವಿಕ ಚಟುವಟಿಕೆಗಳನ್ನು ಅಮಾನತಿನಲ್ಲಿಟ್ಟಿರುತ್ತವೆ. ಆತಂಕ ಕಳೆದು ಅನುಕೂಲ ವಾತಾವರಣ ಮರಳುತ್ತಿದ್ದಂತೆ ಮತ್ತೆ ಸಕ್ರಿಯವಾಗುತ್ತವೆ. ಎಕ್ಕೆಗಿಡದ ರಸದಲ್ಲಿರುವ ರಾಸಾ ಯನಿಕಗಳು ಮೇಯುವ ಜಾನುವಾರುಗಳ ನಾಲಗೆ, ಕರುಳಲ್ಲಿ ಉರಿತವಾಗಿ ಕಾಡುತ್ತದೆ. ಕೆಲವು ಸಸ್ಯಗಳನ್ನು ಆವರಿಸಿರುವ ಮುಳ್ಳು, ಕೂದಲುಗಳೂ ಕೂಡ ಸ್ವರಕ್ಷಣ ತಂತ್ರದ ಭಾಗವಾಗಿರುತ್ತವೆ.

ನಿಜ, ಪ್ರಕೃತಿಯ ಪಾಠದಲ್ಲಿ ಮನುಷ್ಯ ಕಲಿಯಬೇಕಾದ್ದು ಬಹಳಷ್ಟಿದೆ. ತಮ್ಮತಮ್ಮ ಪ್ರಾಣ ಉಳಿಸಿಕೊಳ್ಳಲು ಜೀವಿಗಳು ತೋರುವ ವಿಶಿಷ್ಟ ಸಿದ್ಧತೆ, ಮಾರ್ಪಾಡು, ಹೋರಾಟ, ಆತ್ಮಸೈರಣೆ ಅಥವಾ ಪಲಾಯನ ತಂತ್ರಗಳಿಂದ ನಾವೂ ಪ್ರೇರಣೆ-ಸ್ಫೂರ್ತಿಯನ್ನು ಪಡೆಯಬಹುದಾಗಿದೆ. ಬುದ್ಧಿ ಶಾಲಿಗಳಾದ ನಾವು ಕೊರೊನಾದ ಸಂದಿಗ್ಧತೆಯನ್ನು ಮೀರು ವಲ್ಲಿ ಧೃತಿಗೆಡದೆ ರಕ್ಷಣ ತಂತ್ರಗಳಿಗೆ ಮೊರೆಹೋಗಿಯೇ ವೈರಾಣುಶತ್ರುವನ್ನು ಜೈಸಬೇಕಿದೆ.

– ಸತೀಶ್‌ ಜಿ.ಕೆ. ತೀರ್ಥಹಳ್ಳಿ

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.