ಕಳಪೆ ಗುಣಮಟ್ಟದ ಕೆಲಸಕ್ಕೆ ಕಠಿಣ ಕ್ರಮ
Team Udayavani, Jan 6, 2022, 10:41 AM IST
ಚಿಂಚೋಳಿ: ಪಟ್ಟಣದ ಸಾರ್ವಜನಿಕರಿಗೆ ಶುದ್ಧ ನೀರು ಪೂರೈಕೆಗಾಗಿ ಸರಕಾರದಿಂದ ನಗರೋತ್ಥಾನ ಯೋಜನೆ ಅಡಿಯಲ್ಲಿ 5.50 ಕೋಟಿ ರೂ. ನೀಡಲಾಗಿದೆ. ಕಾಮಗಾರಿಯ ಬಗ್ಗೆ ಪುರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳಪೆ ಗುಣಮಟ್ಟದ ಕೆಲಸ ಮಾಡುವುದು ಇಲಾಖೆ ಅಧಿಕಾರಿಗಳು ಕೆಟ್ಟ ಹೆಸರು ಬರುವುದು ಶಾಸಕರಿಗೆ. ಗುಣಮಟ್ಟದ ಕೆಲಸ ಮಾಡದಿದ್ದರೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಕೊಳ್ಳಲಾಗುವುದು ಎಂದು ಶಾಸಕ ಡಾ| ಅವಿನಾಶ ಜಾಧವ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ 5ನೇ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಿಂಚೋಳಿ ಮತಕ್ಷೇತ್ರದ ಶಾಸಕರಾದ ಬಳಿಕ ಮೊದಲ ಸಲ ಪುರಸಭೆ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ಹೆಸರಿಗಷ್ಟೆ ಸಾಮಾನ್ಯ ಸಭೆ ಆಗಬಾರದು ಎಂದು ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಪುರಸಭೆ ಉಪಾಧ್ಯಕ್ಷ ಶಬ್ಬೀರ್ ಅಹಮದ್, ಸದಸ್ಯರಾದ ಅನವರ ಖತೀಬ್, ಆನಂದ ಟೈಗರ ಮಾತನಾಡಿ, ಪುರಸಭೆ ಸಾಮಾನ್ಯ ಸಭೆಯಲ್ಲಿ ಅನೇಕ ಸಲ ನಡಾವಳಿ ಪತ್ರ ಕೊಡುವಂತೆ ಕೇಳಿದರೂ ಅಧಿಕಾರಿಗಳು ಸದಸ್ಯರಿಗೆ ಕೊಡುತ್ತಿಲ್ಲ. ಒಂದು ಸಾಮಾನ್ಯ ಸಭೆಯಲ್ಲಿ ಎರಡೆರಡು ನಡುವಳಿಕೆಗಳು ಬರೆಯಲಾಗುತ್ತಿದೆ. ಸದಸ್ಯರಿಗೆ ಮರೆಯಾಚಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಭೆಯಲ್ಲಿ ತಿಳಿಸಿದಾಗ ಶಾಸಕರು ಮಧ್ಯಪ್ರವೇಶಿಸಿ ಮಾತನಾಡಿ, ನಡಾವಳಿಗಳು ಎರಡೆರಡು ಬರೆಯುವ ಉದ್ದೇಶ ಏನು? ಹಿಂದೆ ನಡೆದ ಸಾಮಾನ್ಯ ಸಭೆಯ ನಡಾವಳಿಗಳು ಮುಂದೆ ನಡೆಯುವ ಸಭೆಯಲ್ಲಿ ಎಲ್ಲ ಸದಸ್ಯರಿಗೆ ನೀಡುವುದು ಸರಕಾರದ ನಿಯಮವಾಗಿದೆ. ಇನ್ನುಮುಂದೆ ಯಾವುದೇ ಬದಲಾವಣೆ ಮಾಡಬಾರದು ಎಂದು ಮುಖ್ಯಾ ಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಹೊರವಲಯದಲ್ಲಿ ನಿರ್ಮಿಸಿದ ಮನೆಗಳು ಕಳೆದ 12 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇಗ ಎಲ್ಲ ಮನೆಗಳು ವಾಸಕ್ಕೆ ಬಾರದೇ ದುಸ್ಥಿತಿಯಲ್ಲಿವೆ ಒಂದು ವೇಳೆ ಫಲಾನುಭವಿಗಳಿಗೆ ಕೊಟ್ಟರೆ ಜೀವಕ್ಕೆ ಅಪಾಯ ಇರುತ್ತದೆ ಅದಕ್ಕೆ ಯಾರು ಹೊಣೆ ಎಂದು ಸದಸ್ಯರಾದ ಅಬ್ದುಲ್ ಬಾಸೀತ, ಆನಂದ ಟೈಗರ ಸಭೆಯಲ್ಲಿ ಶಾಸಕರಿಗೆ ಮನವರಿಕೆ ಮಾಡಿದರು.
ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ ಮಾತನಾಡಿ, ಪಟ್ಟಣದ ಪಕ್ಕದಲ್ಲಿಯೇ ಮುಲ್ಲಾಮಾರಿ ನದಿ ವರ್ಷವಿಡಿ ಹರಿಯುತ್ತಿದೆ. ಅನೇಕ ವಾರ್ಡ್‌ಗಳಿಗೆ ಜನರಿಗೆ ನೀರು ಪೂರೈಕೆ ಆಗುತ್ತಿಲ್ಲ. ಮಹಿಳೆಯರು ನಮ್ಮ ಮನೆ ಮುಂದೆ ಖಾಲಿ ಕೊಡಗಳೊಂದಿಗೆ ಬರುತ್ತಾರೆ. ನೀರು ಸರಬರಾಜು ಮಂಡಳಿ ಅವರು ಕೆಲಸ ಸಂಪೂರ್ಣವಾಗಿ ಪೂರ್ಣಗೊಳಿಸಿಲ್ಲ. ಯಾಕೆ ನಮಗೆ ಮಹಿಳೆಯರು ಬೈಯುತ್ತಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅವರು ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.
ಪುರಸಭೆ ಕಂದಾಯ ಅಧಿಕಾರಿ ನಿಂಗಮ್ಮ ಬಿರಾದಾರ ಮಾತನಾಡಿ, ಸರಕಾರಿ ವಸತಿ ಗೃಹಗಳ ಮತ್ತು ಸರಕಾರಿ ಇಲಾಖೆಗಳಿಂದ ಒಟ್ಟು 59.55 ಲಕ್ಷ ರೂ. ತೆರಿಗೆ ಬರಬೇಕಾಗಿದೆ. ಆದರೆ ಇಲ್ಲಿಯವರೆಗೆ ಒಟ್ಟು 34ಲಕ್ಷರೂ ತೆರಿಗೆ ವಸೂಲಿ ಮಾಡಲಾಗಿದೆ. ಸಕ್ಕರೆ ಕಾರ್ಖಾನೆ ತೆರಿಗೆ 4.00 ಕೋಟಿ ರೂ. ಬಾಕಿ ಇರುವುದರಿಂದ ಅದರ ತೆರಿಗೆ ವಸೂಲಿ ಮಾಡಬೇಕಾಗಿದೆ ಎಂದರು.
ಪುರಸಭೆ ಸದಸ್ಯೆದಾರ ರೂಪಕಲಾ ಕಟ್ಟಿಮನಿ ಮತ್ತು ಸುಲೋಚನಾ ಕಟ್ಟಿ ಮಾತನಾಡಿ, ಹರಿಜನವಾಡದಲ್ಲಿ ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ಇದೆ. ನೀರು ಮತ್ತು ವಿದ್ಯುತ್ ದೀಪಗಳಿಲ್ಲ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಶಾಸಕರಿಗೆ ತಿಳಿಸಿದರು.
ಪುರಸಭೆ ವ್ಯಾಪ್ತಿಯ ಹರಿಜನವಾಡ, ಸುಂದರ ನಗರ, ಬೆಳ್ಳಿ ಬೆಳಕು ಮತ್ತು ಆಶ್ರಯ ಕಾಲೋನಿಗಳಲ್ಲಿ ಚರಂಡಿ, ರಸ್ತೆ, ಶೌಚಾಲಯಗಳು ಇಲ್ಲ ಅನೇಕ ಸಲ ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸದಸ್ಯರಾದ ಬಸವರಾಜ ಸಿರಸಿ, ನಾಗೇಂದ್ರಪ್ಪ ಗುರಂಪಳ್ಳಿ, ಸುಶೀಲಕುಮಾರ ಬೊಮ್ಮನಳ್ಳಿ ಶಾಸಕರ ಗಮನ ಸೆಳೆದರು.
ಸಭೆಯಲ್ಲಿ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ, ವೆಂಕಟೇಶ, ಪ್ರೊಬೆಶನರಿ ಅಧಿಕಾರಿ ಶೀಲಾ, ಸದಸ್ಯರಾದ ಭೀಮರಾವ್ ರಾಠೊಡ, ಕವಿತಾ ಕಡಬೂರ, ಶೇಷಾದ್ರಿ ಕಳಸ್ಕರ, ಶಿವಕುಮಾರ ಪೋಚಾಲಿ, ಸಂತೋಷ ಹುಲಿ, ಲಕ್ಷ್ಮೀಕಾಂತ ಜಾಬಶೆಟ್ಟಿ, ರಾಧಾಬಾಯಿ ವಲಗಿರಿ, ಎಇಇ ಮಹಮ್ಮದ್ ಅಹೆಮದ ಹುಸೇನ್, ಜೆಇ ಗಿರಿರಾಜ ಸಜ್ಜನಶೆಟ್ಟಿ, ಜೆಇ ರೇವಣಸಿದ್ದಪ್ಪ, ಬಿ.ಸಿ. ರಾಠೊಡ ಇನ್ನಿತರಿದ್ದರು. ಮುಖ್ಯಾಧಿಕಾರಿ ಕಾಶಿನಾಥ ಧನ್ನಿ ಸ್ವಾಗತಿಸಿದರು. ನಿಂಗಮ್ಮ ಬಿರಾದಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.