ಚೀನಿಯರಿಂದ ಟಿಬೆಟ್‌ನಲ್ಲಿದ್ದ 99 ಅಡಿ ಎತ್ತರದ ಬುದ್ಧನ ಪ್ರತಿಮೆ ನಾಶ!
ಬೌದ್ಧ ಬಿಕ್ಕುಗಳ ಮುಂದೆಯೇ ಈ ದುಷ್ಕೃತ್ಯ
Team Udayavani, Jan 6, 2022, 9:30 PM IST
ಬೀಜಿಂಗ್ : ಟಿಬೆಟ್‌ನ ಸಿಚುವಾನ್ ಪ್ರದೇಶದಲ್ಲಿದ್ದ 99 ಅಡಿ ಎತ್ತರದ ಭಗವಾನ್ ಬುದ್ಧನ ಪ್ರತಿಮೆಯನ್ನು ತಾಲಿಬಾನಿಗಳ ಮಾದರಿಯಲ್ಲಿ ಚೀನಾ ಧ್ವಂಸಗೊಳಿಸಿದೆ. ಅಷ್ಟೇ ಅಲ್ಲದೆ, ಈ ಉದ್ಧಟತನದ ಕೃತ್ಯವನ್ನು ಟಿಬೆಟಿಯನ್ ಸನ್ಯಾಸಿಗಳು ಕಣ್ಣಾರೆ ನೋಡುವಂತೆ ಒತ್ತಡ ಹೇರಿರುವ ಘಟನೆಯೂ ನಡೆದಿದೆ.
“ಟಿಬೆಟಿಯನ್ನರಿಗೆ ಪಾಠ ಕಲಿಸಲೆಂದೇ’ ಈ ಕೃತ್ಯ ಎಸಗಲಾಗಿದೆ. ಡ್ರಾಕ್‌ಗೊà ಮೊನಾಸ್ಟ್ರಿಯ ಸಮೀಪದಲ್ಲಿ ಅಳವಡಿಸಲಾಗಿದ್ದ 45 ಬೃಹತ್ “ಪ್ರೇಯರ್ ವ್ಹೀಲ್’ಗಳನ್ನು ಕಿತ್ತೆಸೆದು, ಪ್ರಾರ್ಥನೆಯ ಧ್ವಜವನ್ನೂ ಸುಟ್ಟು ಹಾಕಲಾಗಿದೆ.
ವಾಣಿಜ್ಯ ಉಪಗ್ರಹದ ಚಿತ್ರಗಳನ್ನು ವಿಶ್ಲೇಷಿಸಿ, ಬುದ್ಧನ ಪ್ರತಿಮೆ ಧ್ವಂಸಗೊಳಿಸಿದ್ದನ್ನು ದೃಢಪಡಿಸಿರುವ ರೇಡಿಯೋ ಫ್ರೀ ಏಷ್ಯಾ, “ಪ್ರತಿಮೆಯನ್ನು ಬಹಳ ಎತ್ತರದಲ್ಲಿ ನಿರ್ಮಿಸಿದ ಕಾರಣಕ್ಕಾಗಿ ಚೀನೀಯರು ಅದನ್ನು ನಾಶಪಡಿಸಿದ್ದಾರೆ’ ಎಂದು ವರದಿ ಮಾಡಿದೆ. ಸ್ಥಳೀಯ ನಾಗರಿಕರು, ಬೌದ್ಧ ಬಿಕ್ಕುಗಳ ಸಮ್ಮುಖದಲ್ಲೇ ಈ ದುಷ್ಕೃತ್ಯವನ್ನು ನಡೆಸಲಾಗಿದೆ.
ಟಿಬೆಟಿಯನ್ನರು ಪೂಜಿಸುವ ಬೃಹತ್ ಪ್ರತಿಮೆ ಇದಾಗಿದ್ದು, ಡಿ.12ರಿಂದ ಸತತ 9 ದಿನಗಳ ಕಾಲ ಪ್ರತಿಮೆ ನಾಶಪಡಿಸುವ ಕೆಲಸವನ್ನು ಮಾಡಲಾಗಿದೆ. ಬಿಳಿ ಬಣ್ಣದ ದೊಡ್ಡದಾದ ಮೇಲಾವರಣದ ಮೇಲೆ ಈ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಈಗ ಅಲ್ಲಿ ಕೇವಲ ಅವಶೇಷಗಳಷ್ಟೇ ಕಾಣುತ್ತಿವೆ. ಈ ಘಟನೆಯು ಈ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಚೀನಾದ ಆಡಳಿತದಿಂದ ನಡೆಯುತ್ತಿರುವ ಕ್ರೌರ್ಯವನ್ನು ಬಿಂಬಿಸಿದೆ.
ಟಿಬೆಟ್ ಸಂಸ್ಥೆಗಳು ಹೇಳುವುದೇನು?:
ಸ್ಥಳೀಯ ಚೀನೀ ಅಧಿಕಾರಿಗಳ ಅನುಮತಿ ಪಡೆದೇ 2015ರಲ್ಲಿ ಈ ಪ್ರತಿಮೆಯನ್ನು ನಿರ್ಮಿಸಲಾಗಿತ್ತು. ಆದರೆ, ಇದಾದ 6 ವರ್ಷಗಳ ಬಳಿಕ ಏಕಾಏಕಿ ಆ ಅನುಮತಿಗೆ ಮಾನ್ಯತೆ ಇಲ್ಲ ಎಂದೂ ಅಷ್ಟೊಂದು ಎತ್ತರದ ಪ್ರತಿಮೆಯನ್ನು ಈ ಪ್ರದೇಶದಲ್ಲಿ ನಿರ್ಮಿಸುವಂತಿಲ್ಲ ಎಂದೂ ಹೇಳಲಾಯಿತು. ಇದೊಂದು ರೀತಿಯಲ್ಲಿ 1966-76ರ ಅವಧಿಯಲ್ಲಿ ನಡೆದ ಕರಾಳ “ಸಾಂಸ್ಕೃತಿಕ ಕ್ರಾಂತಿ’ಯನ್ನು ನೆನಪಿಸುತ್ತದೆ. ಆಗ ಚೀನೀ ಸರ್ಕಾರವು ಟಿಬೆಟ್‌ನಲ್ಲಿ ಪ್ರಾಚೀನವಾಗಿದ್ದ ಎಲ್ಲವನ್ನೂ ನಾಶ ಮಾಡಿತ್ತು ಎಂದು ಟಿಬೆಟ್‌ನ ಸಂಘಸಂಸ್ಥೆಗಳು ಆರೋಪಿಸಿವೆ.
ತಾಲಿಬಾನ್ ಮಾದರಿ
ಅಫ್ಘಾನಿಸ್ತಾನದಲ್ಲಿ ಅಮೆರಿಕದ ಪ್ರವೇಶಕ್ಕೂ ಮುನ್ನ ತಾಲಿಬಾನ್ ಆಡಳಿತ ಶುರುವಾದಾಗ, ಅಲ್ಲಿದ್ದ ಅಸಂಖ್ಯಾತ ಧಾರ್ಮಿಕ ಕಲಾಕೃತಿ, ಪ್ರತಿಮೆಗಳನ್ನು ತಾಲಿಬಾನ್ ಉಗ್ರರು ನಾಶ ಮಾಡಿದ್ದರು. 6ನೇ ಶತಮಾನದಲ್ಲಿ ಬಾಮಿಯಾನ್‌ನಲ್ಲಿ ನಿರ್ಮಿಸಲಾಗಿದ್ದ ಎರಡು ಬೃಹತ್ ಬುದ್ಧನ ಪ್ರತಿಮೆಗಳೂ ತಾಲಿಬಾನಿಗರ ಅಟ್ಟಹಾಸಕ್ಕೆ ಗುರಿಯಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.