ಕೋವಿಡ್ – ಒಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆ: ಯಾವ ರಾಜ್ಯದಲ್ಲಿ ಏನೇನು ನಿರ್ಬಂಧ?
Team Udayavani, Jan 8, 2022, 7:05 AM IST
ನವದೆಹಲಿ: ಕರ್ನಾಟಕ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ, ವಾರಾಂತ್ಯದ ಲಾಕ್‌ಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳು ಮತ್ತೆ ಜಾರಿಯಾಗಿವೆ.
ಕೊರೊನಾ ಮತ್ತು ಒಮಿಕ್ರಾನ್ ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೈಗೊಂಡ ಕ್ರಮಗಳಿವು.
ಕರ್ನಾಟಕ
– ಶುಕ್ರವಾರದಿಂದ ವಾರಾಂತ್ಯ ಕರ್ಫ್ಯೂ ಶುರು.
– ರಾತ್ರಿ 10ರಿಂದ ಬೆಳಗ್ಗೆ 5 ಗಂಟೆ ವರೆಗೆ ನೈಟ್ ಕರ್ಫ್ಯೂ
– ಪಬ್, ಕ್ಲಬ್, ರೆಸ್ಟಾರೆಂಟ್‌ಗಳು, ಸಿನಿಮಾ ಹಾಲ್‌ಗಳು, ಹೋಟೆಲ್‌ಗಳಲ್ಲಿ ಶೇ.50ರ ಮಿತಿ
ದೆಹಲಿ
– ವಾರಾಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿ ಶುರುವಾಗಿ, ಸೋಮವಾರ ಬೆಳಗ್ಗೆ ಮುಕ್ತಾಯ.
– ವಾರದ ದಿನಗಳಲ್ಲಿ ಅಗತ್ಯ ಸೇವೆಗಳಲ್ಲಿರುವವರು ಹೊರತಾಗಿ ಉಳಿದವರಿಗೆ ವರ್ಕ್ ಫ್ರಂ ಹೋಮ್.
– ಖಾಸಗಿ ಕಚೇರಿಗಳಲ್ಲಿ ಶೇ.50 ಸಿಬ್ಬಂದಿ ಮಿತಿ
ಉತ್ತರ ಪ್ರದೇಶ
– ಜ.6ರಿಂದಲೇ ರಾತ್ರಿ ಕರ್ಫ್ಯೂ ಜಾರಿ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆ
– 10ನೇ ತರಗತಿ ವರೆಗೆ ಎಲ್ಲಾ ಶಾಲೆಗಳಿಗೆ ಜ.14ರ ವರೆಗೆ ರಜೆ.
– ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ 100ರ ಮಿತಿ
– ಜಿಮ್, ಸ್ಪಾ, ಸಿನಿಮಾ ಹಾಲ್‌ಗಳಲ್ಲಿ ಶೇ.50ರ ಮಿತಿ
ಬಿಹಾರ
– ಜ.21ರ ವರೆಗೆ ರಾ.10ರಿಂದ ಬೆ.5ರ ವರೆಗೆ ರಾತ್ರಿ ಕರ್ಫ್ಯೂ
– 8ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗಳಿಗೆ ರಜೆ. ಆನ್‌ಲೈನ್ ಕ್ಲಾಸ್‌ಗೆ ಅವಕಾಶ
– ಸರ್ಕಾರಿ, ಖಾಸಗಿ ಕಚೇರಿಗಳಿಗೆ ಶೇ.50ರ ಮಿತಿಯಲ್ಲಿ ಕರ್ತವ್ಯಕ್ಕೆ ಅವಕಾಶ
– ಜಿಮ್, ಸಿನಿಮಾ ಹಾಲ್, ಸ್ಟೇಡಿಯಂ, ಈಜುಕೊಳ ಬಂದ್. ರೆಸ್ಟಾರೆಂಟ್, ಧಾಬಾಗಳಿಗೆ ಶೇ.50ರ ಮಿತಿ
ಪಂಜಾಬ್
– ಬಾರ್, ಸಿನಿಮಾ ಹಾಲ್, ಮಾಲ್, ರೆಸ್ಟಾರೆಂಟ್, ಸ್ಪಾಗಳಲ್ಲಿ ಶೇ.50ರ ಮಿತಿ. ಅಲ್ಲಿನ ಸಿಬ್ಬಂದಿಗೆ ಲಸಿಕೆ ಪೂರ್ತಿ ಕಡ್ಡಾಯ
– ಈಜುಕೊಳ, ಜಿಮ್ ಮುಚ್ಚಲು ಆದೇಶ.
– ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಲಸಿಕೆ ಆದ ಸಿಬ್ಬಂದಿಗೆ ಕರ್ತವ್ಯಕ್ಕೆ ಅವಕಾಶ
– ಮಾಸ್ಕ್ ಇಲ್ಲದವರಿಗೆ ಕಚೇರಿಗಳಿಗೆ ಪ್ರವೇಶವಿಲ್ಲ.
ಛತ್ತೀಸ್‌ಗಡ
– ರಾ.10ರಿಂದ ಬೆ.6ರ ವರೆಗೆ ರಾತ್ರಿ ಕರ್ಫ್ಯೂ.
– ಪ್ರತಿಭಟನೆ, ರ್ಯಾಲಿಗಳು, ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ನಿಷೇಧ.
– ರಾಜ್ಯಗಳ ಗಡಿ ಪ್ರದೇಶ ಮತ್ತು ರೈಲು- ಬಸ್ ನಿಲ್ದಾಣಗಳಲ್ಲಿ ಕೊರೊನಾ ಪರೀಕ್ಷೆ
– ಪಾಸಿಟಿವಿಟಿ ಪ್ರಮಾಣ ಹೆಚ್ಚು ಇರುವ ಜಿಲ್ಲೆಗಳಲ್ಲಿ ಶಾಲೆಗಳು, ಅಂಗನವಾಡಿ, ಗ್ರಂಥಾಲಯ, ಈಜುಕೊಳ್ಳ, ಮಾಲ್‌ಗಳು, ಸಿನಿಮಾ ಹಾಲ್‌ಗಳು, ರೆಸ್ಟಾರೆಂಟ್‌ಗಳು ಮುಚ್ಚಲು ಆದೇಶ
ಮಹಾರಾಷ್ಟ್ರ
– ಫೆ.15ರ ವರೆಗೆ ಎಲ್ಲಾ ಕಾಲೇಜು, ವಿವಿಗಳಲ್ಲಿ ಭೌತಿಕ ತರಗತಿಗಳು ರದ್ದು. ಫೆ.15ರ ವರೆಗೆ ಎಲ್ಲಾ ಪರೀಕ್ಷೆಗಳು ಆನ್‌ಲೈನ್‌ನಲ್ಲಿ.
– ಹೈರಿಸ್ಕ್ ದೇಶಗಳಿಂದ ಬರುವವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ.
– ಮದುವೆ, ಸಾಮಾಜಿಕ ಕಾರ್ಯಕ್ರಗಳಾದರೆ ಗರಿಷ್ಠ ಮಿತಿ 50 ಮಂದಿ.
– ಪ್ರವಾಸಿ ಸ್ಥಳಗಳು, ಬೀಚ್‌ಗಳಲ್ಲಿ ಸೆಕ್ಷನ್ 144
ಪುದುಚ್ಚೇರಿ
– ಮಾಸಾಂತ್ಯದ ವರೆಗೆ ರಾತ್ರಿ ಕಫ್ಯೂ.
– ಮಾಲ್‌ಗಳು, ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳಲ್ಲಿ ಶೇ.50ರ ಮಿತಿ
– ಜಿಲ್ಲೆಗಳ ನಡುವಿನ ಸಾರ್ವಜನಿಕ ಸಾರಿಗೆಯಲ್ಲಿ ಶೇ.50ರ ಮಿತಿ
ಪಶ್ಚಿಮ ಬಂಗಾಳ
– ದೆಹಲಿ, ಮುಂಬೈನಿಂದ ವಾರಕ್ಕೆ ಮೂರು ದಿನ ವಿಮಾನಕ್ಕೆ ಅವಕಾಶ
– ಶಿಕ್ಷಣ ಸಂಸ್ಥೆಗಳು, ಮನರಂಜನಾ ಕೇಂದ್ರಗಳು, ಈಜುಕೊಳ, ಝೂ ಬಂದ್.
– ರೆಸ್ಟಾರೆಂಟ್, ಬಾರ್, ಚಿತ್ರಮಂದಿರಗಳಿಗೆ ಶೇ.50ರ ಮಿತಿ.
– ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ.50 ಸಿಬ್ಬಂದಿ ಮಿತಿ
ಹರ್ಯಾಣ
– ಸಿನಿಮಾ ಹಾಲ್, ಕ್ರೀಡಾ ಕಾಂಪ್ಲೆಕ್ಸ್‌ಗಳು, ಈಜುಕೊಳ ಬಂದ್. ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ.50ರ ಹಾಜರಿ.
– ಮಾರುಕಟ್ಟೆ, ಮಾಲ್‌ಗಳು ಸಂಜೆ 5 ಗಂಟೆಗೆ ವರೆಗೆ ಕಾರ್ಯನಿರ್ವಹಣೆ.
– ಬಾರ್ ಮತ್ತು ರೆಸ್ಟಾರೆಂಟ್‌ಗಳಲ್ಲಿ ಶೇ.50ರ ಮಿತಿ
– ಸಾರ್ವಜನಿಕ ಸ್ಥಳಗಳಿಗೆ ಪೂರ್ತಿ ಡೋಸ್ ಲಸಿಕೆ ಪಡೆದವರಿಗೆ ಪ್ರವೇಶ
ಜಾರ್ಖಂಡ್
– ಸ್ಟೇಡಿಯಂ, ಪಾರ್ಕ್‌ಗಳು, ಜಿಮ್, ಶಿಕ್ಷಣ ಸಂಸ್ಥೆಗಳು, ಪ್ರವಾಸಿ ಕೇಂದ್ರಗಳು ಬಂದ್.
– ಕಚೇರಿಗಳಲ್ಲಿ ಶೇ.50ರ ಮಿತಿ.
– ಮದುವೆ, ಅಂತ್ಯಸಂಸ್ಕಾರ ಮತ್ತು ಇತರ ಕಾರ್ಯಕ್ರಮಗಳಿಗೆ 100 ಮಂದಿ.
– ರಾತ್ರಿ 8ರ ಒಳಗಾಗಿ ಮಾರುಕಟ್ಟೆ ಬಂದ್. ಧಾರ್ಮಿಕ ಸ್ಥಳಗಳು, ಮೆಡಿಕಲ್ ಶಾಪ್‌ಗ್ಳು, ರೆಸ್ಟಾರೆಂಟ್‌ಗಳಿಗೆ ಅನುಮತಿ.
ಕೇರಳ
– ಮದುವೆ, ಅಂತ್ಯಕ್ರಿಯೆ, ರಾಜಕೀಯ ಕಾರ್ಯಕ್ರಮ, ಸಾಮಾಜಿಕ ಕಾರ್ಯಕ್ರಮಗಳಿಗೆ 75 ಮಂದಿ.
– ತೆರೆದ ಸ್ಥಳಗಳಲ್ಲಿ 150 ಮಂದಿಗೆ ಸೀಮಿತ.
ಒಡಿಶಾ
– 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ರಜೆ.
– ಬೆಳಗ್ಗೆ 5ರಿಂದ ರಾತ್ರಿ 9ರ ವರೆಗೆ ಎಲ್ಲಾ ಅಂಗಡಿ, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಬಂದ್
– ಈಜು ಕೊಳ, ಮನರಂಜನೆಯ ಸ್ಥಳಗಳು, ಥಿಯೇಟರ್‌ಗಳು ರಾತ್ರಿ 9 ಗಂಟೆಗೆ ಮುಚ್ಚಬೇಕು.
ಸಿಕ್ಕಿಂ
– ಪಬ್, ಡಿಸ್ಕೋ, ಸಿನಿಮಾ ಹಾಲ್‌ಗಳು, ಫಾಸ್ಟ್‌ಫುಡ್ ಕೇಂದ್ರಗಳು, ಬೇಕರಿ ಶೇ.50ರ ಮಿತಿಯಲ್ಲಿ ನಿರ್ವಹಣೆ
– ಹೊಟೇಲ್, ಹೋಮ್‌ಸ್ಟೇ, ಗೆಸ್ಟ್‌ಹೌಸ್‌ಗಳೂ ಶೇ.50ರ ಮಿತಿಯಲ್ಲಿ ನಿರ್ವಹಣೆ
– ಎಲ್ಲಾ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಪೂರ್ವಾನುಮತಿ ಬೇಕು
ಮಣಿಪುರ
– ರಾತ್ರಿ 9ರಿಂದ ಬೆಳಗ್ಗೆ 4 ಗಂಟೆಯ ವರೆಗೆ ನೈಟ್ ಕರ್ಫ್ಯೂ.
– ಮಾಸಾಂತ್ಯದ ವರೆಗೆ ಜಿಲ್ಲಾಧಿಕಾರಿಗಳಿಗೆ ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳಲು ಆದೇಶ
ರಾಜಸ್ಥಾನ
– ರಾತ್ರಿ ಕರ್ಫ್ಯೂ ಜಾರಿ. ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಲು ಆದ್ಯತೆ
– ಶಾಲೆ, ಕಾಲೇಜು, ಸಿನಿಮಾ ಹಾಲ್‌ಗಳಿಗೆ ಹೋಗುವವರಿಗೆ 2 ಡೋಸ್ ಲಸಿಕೆ ಕಡ್ಡಾಯ
ತಮಿಳುನಾಡು
– ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯ ವರೆಗೆ ನೈಟ್ ಕರ್ಫ್ಯೂ
– ಪ್ರತಿ ಭಾನುವಾರ ಲಾಕ್‌ಡೌನ್. ಈ ಅವಧಿಯಲ್ಲಿ ಹೊಟೇಲ್, ಮನರಂಜನಾ ಕೇಂದ್ರಗಳು, ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ.
– ಅಗತ್ಯ ವಸ್ತುಗಳಿಗೆ ವಿನಾಯಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.