ಪ್ರೊ ಕಬಡ್ಡಿ: ಜೈಪುರ, ಹರ್ಯಾಣ ಜಯಭೇರಿ
Team Udayavani, Jan 7, 2022, 10:45 PM IST
ಬೆಂಗಳೂರು: ಶುಕ್ರವಾರದ ಪ್ರೊ ಕಬಡ್ಡಿ ಪಂದ್ಯಗಳಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ ಮತ್ತು ಹರ್ಯಾಣ ಸ್ಟೀಲರ್ಸ್ ಗೆಲುವಿನ ಸಂಭ್ರಮ ಆಚರಿಸಿವೆ.
ಜೈಪುರ್ 31-26 ಅಂತರದಿಂದ ಪುನೇರಿಯನ್ನು ಕೆಡವಿತು. ರೈಡರ್ ಅರ್ಜುನ್ ದೇಶ್ವಾಲ್ 11 ಅಂಕಗಳೊಂದಿಗೆ ಜೈಪುರ್ ತಂಡದ ಹೀರೋ ಎನಿಸಿದರು. ನಾಯಕ ಸಂದೀಪ್ ಧುಲ್ ಮತ್ತು ಆಲ್ರೌಂಡರ್ ಸಾಹುಲ್ ಕುಮಾರ್ ತಲಾ 4 ಅಂಕ ಗಳಿಸಿದರು. ಇದು ಜೈಪುರ್ 7 ಪಂದ್ಯಗಳಲ್ಲಿ ಸಾಧಿಸಿದ 3ನೇ ಜಯ.
ಇನ್ನೊಂದೆಡೆ ಪುನೇರಿ ಇಷ್ಟೇ ಪಂದ್ಯಗಳಲ್ಲಿ 5ನೇ ಸೋಲನುಭವಿಸಿತು.
ಮೊದಲ ಮುಖಾಮುಖಿಯಲ್ಲಿ ಹರ್ಯಾಣ ಸ್ಟೀಲರ್ಸ್ 41-37 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಸೋಲಿಸಿತು.
ಪಂದ್ಯದ ಮೊದಲ 20 ನಿಮಿಷಗಳಲ್ಲಿ ಬೆಂಗಾಲ್ 18, ಹರ್ಯಾಣ 15 ಅಂಕ ಗಳಿಸಿದ್ದವು. ದ್ವಿತೀಯ 20 ನಿಮಿಷಗಳಲ್ಲಿ ಪರಿಸ್ಥಿತಿ ಬದಲಾಯಿತು. ಇಲ್ಲಿ ಹರ್ಯಾಣ ಮೇಲುಗೈ ಸಾಧಿಸಿತು.
ಇದನ್ನೂ ಓದಿ:ದೇಶದ ಜಿಡಿಪಿಗೆ ಶೇ.9.2ರ ನಿರೀಕ್ಷೆ; ಶರವೇಗದ ಅರ್ಥ ವ್ಯವಸ್ಥೆಯತ್ತ ದಾಪುಗಾಲು
ಹರ್ಯಾಣ ಪರ ಸಂಘಟಿತ ಆಟ ಕಂಡುಬಂತು. ಆಲ್ರೌಂಡರ್ ಮೀತು ದಾಳಿಯಲ್ಲಿ ಮಿಂಚಿದರು. 15 ಬಾರಿ ಎದುರಾಳಿ ಅಂಕಣಕ್ಕೆ ದಾಳಿ ಮಾಡಿ 10 ಅಂಕ ಸಂಪಾದಿಸಿದರು. ಆದರೆ ತಂಡ ರಕ್ಷಣೆಯಲ್ಲಿ ಮಿಂಚಲಿಲ್ಲ. ವಿಕಾಸ್ ಕಂಡೋಲ 16 ಬಾರಿ ದಾಳಿ ಮಾಡಿ 9 ಅಂಕ ಸಂಪಾದಿಸಿದರು. ರಕ್ಷಣೆಯಲ್ಲಿ ಮೋಹಿತ್ (4), ಸುರೇಂದರ್ ನಾಡಾ (3) ಉತ್ತಮ ಪ್ರದರ್ಶನ ನೀಡಿದರು.
ಬೆಂಗಾಲ್ ಪರ ಮಣಿಂದರ್ ಸಿಂಗ್ ಅಮೋಘ ದಾಳಿ ಸಂಘಟಿಸಿದರು. ಅವರು 25 ಬಾರಿ ಎದುರಾಳಿ ಅಂಕಣದೊಳಕ್ಕೆ ನುಗ್ಗಿ 14 ಅಂಕ ಸಂಪಾದಿಸಿದರು. ಮೊಹಮ್ಮದ್ 10 ಬಾರಿ ದಾಳಿ ನಡೆಸಿ 6 ಅಂಕ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2024: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.