ಸಿಡ್ನಿ ಟೆಸ್ಟ್ : ಜಾನಿ ಬೇರ್‌ಸ್ಟೊ ಸೆಂಚುರಿ ಶೋ
Team Udayavani, Jan 8, 2022, 5:00 AM IST
ಸಿಡ್ನಿ: ಜಾನಿ ಬೇರ್‌ಸ್ಟೊ ಬಾರಿಸಿದ ಆಪತ್ಕಾಲದ ಅಜೇಯ ಶತಕ (103) ಹಾಗೂ ಬೆನ್ ಸ್ಟೋಕ್ಸ್ ಅವರ ಅರ್ಧ ಶತಕದ ನೆರವಿನಿಂದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಒಂದಿಷ್ಟು ಚೇತರಿಕೆ ಪಡೆದಿದೆ. ಆದರೆ ಆಸ್ಟ್ರೇಲಿಯದ ಮೊತ್ತಕ್ಕಿಂತ ಬಹಳ ಹಿಂದಿದೆ.
ಆಸ್ಟ್ರೇಲಿಯ 8 ವಿಕೆಟಿಗೆ 416 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತ್ತು. ಜವಾಬು ನೀಡತೊಡಗಿದ ಇಂಗ್ಲೆಂಡ್ 3ನೇ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 258 ರನ್ ಮಾಡಿದ್ದು, ಇನ್ನೂ 158 ರನ್ ಹಿನ್ನಡೆಯಲ್ಲಿದೆ.
ಇಂಗ್ಲೆಂಡ್ ಒಂದು ಹಂತದಲ್ಲಿ 34 ರನ್ನಿಗೆ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಹಮೀದ್ (6), ಕ್ರಾಲಿ (18), ಮಲಾನ್ (3) ಮತ್ತು ನಾಯಕ ರೂಟ್ (0) ಪೆವಿಲಿಯನ್ ಸೇರಿಯಾಗಿತ್ತು. ಈ ಹಂತದಲ್ಲಿ ಜತೆಗೂಡಿದ ಬೇರ್‌ಸ್ಟೊ-ಸ್ಟೋಕ್ಸ್ 5ನೇ ವಿಕೆಟಿಗೆ 128 ರನ್ ಪೇರಿಸಿ ತಂಡಕ್ಕೆ ರಕ್ಷಣೆ ಒದಗಿಸಿದರು.
ಇದನ್ನೂ ಓದಿ:ಪ್ರೊ ಕಬಡ್ಡಿ: ಜೈಪುರ, ಹರ್ಯಾಣ ಜಯಭೇರಿ
ಬೇರ್‌ಸ್ಟೊ 7ನೇ ಸೆಂಚುರಿ
ಇಬ್ಬರ ಆಟವೂ ಆಕ್ರಮಣಕಾರಿಯಾಗಿತ್ತು. ಜಾನಿ ಬೇರ್‌ಸ್ಟೊ 7ನೇ ಶತಕದ ಸಂಭ್ರಮಾಚರಣೆ ನಡೆಸಿದರು. ಅವರು 103 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 140 ಎಸೆತಗಳ ಈ ಅಮೋಘ ಆಟದ ವೇಳೆ 8 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿದಿವೆ. ಇದು ಈ ಸರಣಿಯಲ್ಲಿ ಇಂಗ್ಲೆಂಡ್ ಆಟಗಾರನಿಂದ ದಾಖಲಾದ ಮೊದಲ ಶತಕ. ಹಾಗೆಯೇ ಇದು 2018ರ ಬಳಿಕ ಬೇರ್‌ಸ್ಟೊ ಹೊಡೆದ ಮೊದಲ ಶತಕವೂ ಹೌದು. ಆ್ಯಶಸ್‌ನಲ್ಲಿ ದಾಖಲಾದ ಅವರ 2ನೇ ಸೆಂಚುರಿ. ಮೊದಲನೆಯದು 2017ರ ಪರ್ತ್ ಪಂದ್ಯದಲ್ಲಿ ಬಂದಿತ್ತು (119).
ಬೆನ್ ಸ್ಟೋಕ್ಸ್ 91 ಎಸೆತಗಳಿಂದ 66 ರನ್ ಬಾರಿಸಿದರು. ಇದರಲ್ಲಿ 9 ಫೋರ್ ಹಾಗೂ ಒಂದು ಸಿಕ್ಸರ್ ಸೇರಿದೆ. ಸ್ಟೋಕ್ಸ್ ವಿಕೆಟ್ ಉರುಳಿದ ಬೆನ್ನಲ್ಲೇ ಕೀಪರ್ ಜಾಸ್ ಬಟ್ಲರ್ ಖಾತೆ ತೆರೆಯದೆ ವಾಪಸಾದರು. ಆಗ ಬೇರ್‌ಸ್ಟೊ-ಮಾರ್ಕ್ ವುಡ್ (39) ಸೇರಿಕೊಂಡು 72 ರನ್ ಜತೆಯಾಟದ ಮೂಲಕ ತಂಡಕ್ಕೆ ಮತ್ತೂಂದು ಕಂತಿನ ರಕ್ಷಣೆ ಒದಗಿಸಿದರು. ಬೇರ್‌ಸ್ಟೊ ಜತೆಗೆ 4 ರನ್ ಮಾಡಿದ ಜಾಕ್ ಲೀಚ್ ಕ್ರೀಸಿನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-8 ವಿಕೆಟಿಗೆ 416 ಡಿಕ್ಲೇರ್. ಇಂಗ್ಲೆಂಡ್-7 ವಿಕೆಟಿಗೆ 258 (ಬೇರ್‌ಸ್ಟೊ ಬ್ಯಾಟಿಂಗ್ 103, ಸ್ಟೋಕ್ಸ್ 66, ವುಡ್ 39, ಬೋಲ್ಯಾಂಡ್ 25ಕ್ಕೆ 2, ಕಮಿನ್ಸ್ 68ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.