ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ರದ್ದು ?
Team Udayavani, Jan 8, 2022, 8:00 AM IST
ಉಡುಪಿ: ಪಡಿತರ ವ್ಯವಸ್ಥೆಯಲ್ಲಿ ನೀಡುವ ಆಹಾರ ಸಾಮಗ್ರಿಗಳ ನಿರ್ದಿಷ್ಟ ಮಾಹಿತಿ ಹಾಗೂ ಕುಟುಂಬ ಸದಸ್ಯರ ಸಂಖ್ಯೆಯನ್ನು ಖಚಿತ ಪಡಿಸಿಕೊಳ್ಳಲು ರಾಜ್ಯ ಸರಕಾರ ಒಂದೂವರೆ ವರ್ಷಕ್ಕೂ ಹಿಂದೆಯೇ ಇ-ಕೆವೈಸಿ ಮಾಡಿಸುವ ಪ್ರಕ್ರಿಯೆ ಆರಂಭಿಸಿದ್ದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.03 ಲಕ್ಷಕ್ಕೂ ಅಧಿಕ ಪಡಿತರ ಚೀಟಿದಾರರು ಮಾಡಿಕೊಂಡಿಲ್ಲ.
ಬಿಪಿಎಲ್, ಅಂತ್ಯೋದಯ ಪಡಿತರಚೀಟಿಯ ಕುಟುಂಬದ ಸದಸ್ಯರು ಆದ್ಯತೆ ಮೇಲೆ ನ್ಯಾಯಬೆಲೆ ಅಂಗಡಿಯಲ್ಲಿ
ಬೆರಳಚ್ಚು ನೀಡಿ, ಇ-ಕೆವೈಸಿ ಮಾಡಿಸಿಕೊಳ್ಳಲು 2021ರ ಡಿಸೆಂಬರ್ ಅಂತ್ಯದ ವರೆಗೂ ಅವಕಾಶ ನೀಡಲಾಗಿತ್ತು. ಈಗ ಅಂತಿಮವಾಗಿ ಜ. 10ರ ವರೆಗೆ ಅವಕಾಶ ನೀಡಿದ್ದು ಆಗಲೂ ಮಾಡಿಸಿಕೊಳ್ಳದೇ ಇದ್ದರೆ ಪಡಿತರ ಚೀಟಿ ರದ್ದಾಗಲಿದೆ.
ದ.ಕ. ಜಿಲ್ಲೆಯಲ್ಲಿ 2,71,134 ಪಡಿತರ ಚೀಟಿಗಳಿದ್ದು, 11,00,722 ಸದಸ್ಯರಿದ್ದಾರೆ. ಇದರಲ್ಲಿ ಕ್ರಮವಾಗಿ 2.19 ಲಕ್ಷ ಕಾರ್ಡ್‌ಗಳು, 10,07,892 ಸದಸ್ಯರು ಇ-ಕೆವೈಸಿ ಪೂರ್ಣಗೊಳಿಸಿಕೊಂಡಿದ್ದಾರೆ. 92,832 ಸದಸ್ಯರು ಹಾಗೂ 51,162 ಕಾರ್ಡ್‌ಗಳು ಇ-ಕೆವೈಸಿಗೆ ಬಾಕಿಯಿವೆ. ಉಡುಪಿ ಜಿಲ್ಲೆಯಲ್ಲಿ 1,89,993 ಪಡಿತರ ಚೀಟಿಗಳಿದ್ದು, 7,94,856 ಸದಸ್ಯ ರಿದ್ದಾರೆ. ಇದರಲ್ಲಿ ಕ್ರಮವಾಗಿ 1.37 ಲಕ್ಷ ಕಾರ್ಡ್‌ಗಳು, 6.94 ಲಕ್ಷ ಸದಸ್ಯರ ಇ-ಕೆವೈಸಿ ಪೂರ್ಣಗೊಂಡಿದೆ. ಒಂದು ಲಕ್ಷ ಸದಸ್ಯರು ಹಾಗೂ 52,240 ಕಾರ್ಡ್‌ಗಳು ಇ-ಕೆವೈಸಿ ಇನ್ನೂ ಮಾಡಿಸಿಕೊಂಡಿಲ್ಲ.
ಈ ತಿಂಗಳಿಂದಲೇ ರದ್ದು?
ಕಾರ್ಡ್‌ನಲ್ಲಿರುವ ಸದಸ್ಯರು ಕುಟುಂಬದ ಜತೆ ಇಲ್ಲದೇ ಇದ್ದರೂ ಅವರ ಹೆಸರಿನಲ್ಲಿ ಪಡಿತರ ಪಡೆಯಲಾಗುತ್ತಿತ್ತು. ಇದರಿಂದ ಸರಕಾರಕ್ಕೂ ಹೆಚ್ಚುವರಿ ಹೊರೆಯಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಇ-ಕೆವೈಸಿ ಕಡ್ಡಾಯ ಮಾಡಲಾಗಿದೆ ಮತ್ತು ಸಾಕಷ್ಟು ಕಾಲಾವಕಾಶವನ್ನು ನೀಡಲಾಗಿದೆ. ಇನ್ನೂ ಮಾಡಿಸದಿರುವವರಿಗೆ ಪಡಿತರ ರದ್ದಾಗುವ ಸಾಧ್ಯತೆಯಿದೆ.
ಸರ್ವರ್ ಸಮಸ್ಯೆಯಾಗಿತ್ತು
ಇ-ಕೆವೈಸಿ ಮಾಡಿಸಲು ಆರಂಭಿಸಿದ ದಿನಗಳಲ್ಲಿ ಸ್ವಲ್ಪಮಟ್ಟಿನ ಸರ್ವರ್ ಸಮಸ್ಯೆ ಎದುರಾಗಿತ್ತು. ಈಗ ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಯಿಲ್ಲ. ಸರ್ವರ್ ಸಮಸ್ಯೆಯ ದೂರು ಬಂದ ಕೂಡಲೇ ಸರಿಪಡಿಸುತ್ತಿದ್ದೇವೆ. ಸದ್ಯ ಇ-ಕೆವೈಸಿ ಮಾಡಿಸದೆ ಇರುವುದು ಸರ್ವರ್ ಸಮಸ್ಯೆಯಿಂದಲ್ಲ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಇ-ಕೆವೈಸಿಗೆ ಜ. 10ರ ತನಕ ಅವಕಾಶ ನೀಡಲಾಗಿದೆ. ಸರಕಾರ ಸೂಚನೆ ನೀಡಿದರೆ ಬಾಕಿ ಇರುವವರ ಕಾರ್ಡ್ ರದ್ದಾಗುವ ಸಾಧ್ಯತೆ ಇರುತ್ತದೆ. ದ.ಕ. ಜಿಲ್ಲೆಯಲ್ಲಿ ಶೇ. 81.13ರಷ್ಟು ಕಾರ್ಡ್ ಹಾಗೂ ಶೇ.91.57ರಷ್ಟು ಸದಸ್ಯರು ಇ-ಕೆವೈಸಿ ಮಾಡಿಸಿಕೊಂಡಿ ದ್ದಾರೆ.
– ಮೊಹಮ್ಮದ್ ಇಸಾಕ್ ಮತ್ತು
ಕೆ.ಪಿ. ಮಧುಸೂದನ್
ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವ ಹಾರ ಇಲಾಖೆ, ಉಡುಪಿ, ದ.ಕ. ಜಿಲ್ಲೆ
- ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.