ಕಾಲದ ಕಾವಿಗೆ ಕಪ್ಪಾಗುತ್ತಿವೆ! ಮುಚ್ಚುತ್ತಿರುವ ಮಂಗಳೂರು ಹೆಂಚಿನ ಕಾರ್ಖಾನೆಗಳು


Team Udayavani, Jan 8, 2022, 5:43 PM IST

ಕಾಲದ ಕಾವಿಗೆ ಕಪ್ಪಾಗುತ್ತಿವೆ! ಮುಚ್ಚುತ್ತಿರುವ ಮಂಗಳೂರು ಹೆಂಚಿನ ಕಾರ್ಖಾನೆಗಳು

1865ರಲ್ಲಿ ಮೊದಲ ಹೆಂಚು ಉದ್ಯಮ ಜರ್ಮನ್‌ ಮಿಶನರೀಸ್‌ ಎಂಬ ಸಂಸ್ಥೆಯು ಮಂಗಳೂರಿನ ಜಪ್ಪುವಿನ ನೇತ್ರಾವತಿ ನದಿ ತೀರದಲ್ಲಿ ಆರಂಭಿಸಿತ್ತು. 1875ರಿಂದ 1960ರ ನಡುವೆ ಹೆಂಚಿನ ಉದ್ಯಮದ ಸ್ವರ್ಣಯುಗ ಎಂದೇ ಉಲ್ಲೇಖೀಸಬಹುದು. ಬೋಳಾರ, ಜಪ್ಪು, ಬೋಳೂರು, ಕುತ್ತಾರ್‌, ಉಳ್ಳಾಲ, ಗುರುಪುರ, ಕುದ್ರೋಳಿ, ಬೊಕ್ಕಪಟ್ಟಣ, ಎಡಪದವು, ಗಂಜಿಮಠ, ಉಡುಪಿ ಜಿಲ್ಲೆಯ ಹೆಜಮಾಡಿ, ಮಣಿಪಾಲ, ಅಂಬಾಗಿಲು, ಕುಂದಾಪುರ ಹೀಗೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 30ಕ್ಕೂ ಅಧಿಕ ಹೆಂಚು ಕಾರ್ಖಾನೆಗಳಿದ್ದವು. ಇದರಲ್ಲಿ ಪ್ರತೀದಿನ ಲಕ್ಷಗಟ್ಟಲೆ ಹೆಂಚು ಉತ್ಪಾದನೆಯಾಗುತ್ತಿದ್ದ ಕಾಲವಿತ್ತು. ಜತೆಗೆ ಸಾವಿರಾರು ಕುಟುಂಬಗಳು ಇದನ್ನೇ ನಂಬಿಕೊಂಡಿತ್ತು. ಆದರೆ ಕಾಂಕ್ರೀಟ್‌ ಲೋಕದತ್ತ ಜನರು ವಾಲತೊಡಗಿದ ಪರಿಣಾಮ ಹೆಂಚು ಉದ್ಯಮಕ್ಕೆ ಹೊಡೆತ ಬೀಳಲು ಶುರುವಾಯಿತು ಎಂದು “ಮಂಗಳೂರು ದರ್ಶನ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಬೊಕ್ಕಪಟ್ಟಣ: ಒಂದು ಕಾಲದಲ್ಲಿ ಮಂಗಳೂರಿನ “ಟ್ರೇಡ್‌ ಮಾರ್ಕ್‌’ ಎನಿಸಿದ್ದ ವಿವಿಧ ಕಾರ್ಖಾ ನೆಗಳ “ಮಂಗಳೂರು ಹೆಂಚು’ ಇಂದು ಇತಿಹಾಸದ ಪುಟ ಸೇರುತ್ತಿದ್ದು, ನಗರದ ಒಂದೊಂದೇ ಹೆಂಚಿನ ಕಾರ್ಖಾನೆಗಳು ಸದ್ದಿಲ್ಲದೆ ಬಾಗಿಲು ಎಳೆದು ಕೊಳ್ಳುತ್ತಿವೆ!

ಸ್ವರ್ಣಯುಗದಲ್ಲಿದ್ದ ಮಂಗಳೂರು ಹೆಂಚಿನ ಸ್ಥಿತಿ ಈಗ ಅತಂತ್ರವಾಗಿದೆ. ಹೆಂಚು ಉದ್ಯಮದ ತವರೂರಾಗಿದ್ದ ಮಂಗಳೂರಿನಲ್ಲಿ ಒಂದೊಂದೇ ಹೆಂಚಿನ ಕಾರ್ಖಾನೆಗಳು ಬಾಗಿಲು ಹಾಕುತ್ತಿವೆ.

ನಗರದ ಬೋಳಾರ, ಜಪ್ಪು, ಬೋಳೂರು, ಕುದ್ರೋಳಿ ಭಾಗದಲ್ಲಿದ್ದ ಬಹುವರ್ಷಗಳ ಹಿಂದಿನ ಹೆಂಚು ಕಾರ್ಖಾನೆಗಳು ಒಂದೊಂದಾಗಿ ಬಂದ್‌ ಆಗಿದ್ದು, ಸದ್ಯ ಬೊಕ್ಕಪಟ್ಟಣದ ಬಹು ಪ್ರಸಿದ್ಧಿಯ ಕಾರ್ಖಾನೆ ಕೂಡ ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿ ಸಿದೆ. ಈ ಮೂಲಕ ನಗರದಲ್ಲಿದ್ದ ಬಹುತೇಕ ಹೆಂಚು ಕಾರ್ಖಾನೆಗಳೆಲ್ಲ ಬಾಗಿಲು ಹಾಕುವ ಪರಿಸ್ಥಿತಿಗೆ ಬಂದಿವೆ.

ದ.ಕ. ಜಿಲ್ಲೆಯಲ್ಲಿ 1970ರ ಸಂದರ್ಭ ಬರೋಬ್ಬರಿ 43 ಹೆಂಚಿನ ಉದ್ಯಮ ಗಳಿದ್ದವು. ಈ ಪೈಕಿ ಮಂಗಳೂರು ನಗರ ಪರಿಧಿಯಲ್ಲಿ 15ಕ್ಕೂ ಅಧಿಕವಿತ್ತು. ಆದರೆ ಈಗ ಮಂಗಳೂರಿನಲ್ಲಿ ಯಾವುದೇ ಹೆಂಚಿನ ಕಾರ್ಖಾನೆಯಿಲ್ಲ. ಸದ್ಯ ಗುರುಪುರ, ಕುಂದಾಪುರ ಸಹಿತ ಎರಡೂ ಜಿಲ್ಲೆಯ ಕೆಲವು ಭಾಗದಲ್ಲಿ ಮಾತ್ರ ಬೆರಳೆಣಿಕೆ ಹೆಂಚಿನ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ಕಾಲಕ್ಕೆ ಮಂಗಳೂರು ಹೆಂಚು ಇಲ್ಲಿನ ಜನರ ಜೀವನಾಡಿಯಾಗಿತ್ತು.

ಅದರಲ್ಲಿಯೂ ಸ್ವಾತಂತ್ರ್ಯ ಪೂರ್ವ
ದಲ್ಲಿ ಅವಿಭಜಿತ ದ.ಕ. ಜಿಲ್ಲೆಯು ಹೆಂಚು ಉದ್ಯಮಕ್ಕೆ ಹೆಸರುವಾಸಿಯಾಗಿತ್ತು. ದೇಶಾದ್ಯಂತ ಮಾತ್ರವಲ್ಲದೆ ಯುರೋಪ್‌, ಆಫ್ರಿಕಾ ಖಂಡಗಳಿಗೆ ಇಲ್ಲಿಂದಲೇ ಹೆಂಚುಗಳು ರಫ್ತಾಗುತ್ತಿದ್ದವು. ಸಾವಿರಾರು ಕುಟುಂಬಗಳು ಈ ಉದ್ಯಮವನ್ನು ಆಶ್ರಯಿ ಸಿದ್ದವು. ಆದರೆ ಬರಬರುತ್ತಾ ಹೆಂಚಿನ ಮನೆ, ಅಂಗಡಿಗಳು ಕಾಂಕ್ರೀಟ್‌ಮಯವಾಗ ತೊಡಗಿತು.ಫೈಬರ್‌, ಸಿಮೆಂಟ್‌ ಶೀಟು ಗಳೂಹೆಂಚಿನ ಸ್ಥಳವನ್ನು ಆಕ್ರಮಿಸಿದೆ! ಆವೆ ಮಣ್ಣು ಸಹಿತ ಕಚ್ಚಾವಸ್ತುಗಳ ಕೊರತೆ, ಇತರ ವಸ್ತುಗಳ ಬೆಲೆ ಏರಿಕೆ ಏಟಿನಿಂದ ಕಾರ್ಖಾನೆಗಳಿಗೆ ಹೊಡೆತ ಬೀಳಲು ಶುರುವಾಗಿತ್ತು.

ಹೆಂಚಿನಿಂದ
ಮನೆ ತಂಪು!
ಹೆಂಚಿನ ಛಾವಣಿ ಹಾಕಿರುವ ಮನೆಗಳು ತಂಪಾಗಿರುತ್ತವೆ. ಈಗಲೂ ಮಂಗಳೂರು ನಗರ ಸೇರಿದಂತೆ ಗ್ರಾಮಾಂತರ ಭಾಗದ ಹಲವು ಕಡೆಗಳಲ್ಲಿ ಹೆಂಚಿನ ಮನೆಗಳನ್ನೇ ಕಾಣಬಹುದು. ಇದು ಪರಿಸರ ಸ್ನೇಹಿಯೂ ಹೌದು. ಒಂದು ಹೆಂಚಿಗೆ ಹಾನಿಯಾದರೆ ಸುಲಭವಾಗಿ ಬದಲಾಯಿಸಬಹುದು. ಕಾಂಕ್ರೀಟ್‌ ಕಟ್ಟಡಗಳಿಗೆ ಹೋಲಿಸಿದರೆ ತಂಪು ಮಾತ್ರವಲ್ಲದೆ ಆರೋಗ್ಯದ ಹಿತದೃಷ್ಟಿಯಿಂದಲೂ ಬಹು ಉಪಯೋಗಿ. ಜತೆಗೆ ವಿವಿಧ ವಿನ್ಯಾಸದ ಕಲಾತ್ಮಕ ಹೆಂಚುಗಳು ಲಭ್ಯವಿದೆ.

ಕಾಲ ಬದಲಾದಂತೆ ಹೆಂಚು ಉದ್ಯಮಕ್ಕೆ ಸಮಸ್ಯೆ
ಮಂಗಳೂರು ಹೆಂಚು ಜಗತøಸಿದ್ಧವಾಗಿತ್ತು. ಸಾವಿರಾರು ಮಂದಿ ಇದೇ ಉದ್ಯಮವನ್ನೇ ನಂಬಿಕೊಂಡಿದ್ದರು. ಆದರೆ ಕಾಲ ಬದಲಾದಂತೆ ಹೆಂಚು ಉದ್ಯಮಕ್ಕೆ ಸಮಸ್ಯೆ ಎದುರಾಯಿತು. ಪರಿಣಾಮವಾಗಿ ಒಂದೊಂದೇ ಕಾರ್ಖಾನೆಗಳು ಬಾಗಿಲು ಹಾಕಿಕೊಂಡಿತು. ಸದ್ಯ ಮಂಗಳೂರಿನಲ್ಲಿ ಎಲ್ಲ ಹೆಂಚು ಕಾರ್ಖಾನೆಗಳು ಬಾಗಿಲು ಹಾಕಿದಂತಾಗಿದೆ. ಬೆರಳೆಣಿಕೆ ಕಾರ್ಖಾನೆಗಳು ಸದ್ಯ ಗುರುಪುರ ಕುಂದಾಪುರ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವುದಷ್ಟೇ ಆಶಾದಾಯಕ ಸಂಗತಿ..
– ವಸಂತ ಕುಕ್ಯಾನ್‌,
ಕಾರ್ಮಿಕ ಮುಖಂಡರು, ಹೆಂಚು ಉದ್ಯಮ ವಲಯ

- ದಿನೇಶ್‌ ಇರಾ

 

ಟಾಪ್ ನ್ಯೂಸ್

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

Ullala-Balepuni

Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ

Kishor-Kodgi-Campco

Mangaluru: ಅಡಿಕೆ ಕ್ಯಾನ್ಸರ್‌ ಕಾರಕ ಎಂಬ ಡಬ್ಲ್ಯುಎಚ್‌ಒ ವಾದಕ್ಕೆ ಕ್ಯಾಂಪ್ಕೊ ಆಕ್ಷೇಪ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.