ರವಿವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ
Team Udayavani, Jan 9, 2022, 7:29 AM IST
ಮೇಷ:
ದೈಹಿಕ ಹಾಗೂ ಮಾನಸಿಕ ಸುಖಕ್ಕೆ ಹೆಚ್ಚಿದ ಪರಿಶ್ರಮ. ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ಉತ್ತಮ ಅಭಿವೃದ್ಧಿದಾಯಕ ಧನಾರ್ಜನೆ. ವಾಕ್ಚತುರತೆಯಿಂದ ಜನಮನ್ನಣೆ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.
ವೃಷಭ:
ಆರೋಗ್ಯದಲ್ಲಿ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಸ್ಥಾನಮಾನ ಗೌರವ. ಆರ್ಥಿಕ ಧನಾರ್ಜನೆ. ಗೃಹದಲ್ಲಿ ಸಣ್ಣ ಬದಲಾವಣೆಗಳು ತೋರಿಬಂದಾವು. ಸಹೋದರಾದಿ ವರ್ಗದವರಿಂದ ನೆಮ್ಮದಿ ಸಂತೋಷ. ದಾಂಪತ್ಯದಲ್ಲಿ ಸಹಕಾರ.
ಮಿಥುನ:
ಸುದೃಢ ಆರೋಗ್ಯ. ಮಾನಸಿಕ ನೆಮ್ಮದಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಅಧಿಕಾರ ಗೌರವಾದಿ ಪ್ರಾಪ್ತಿ. ದೂರದ ಮಿತ್ರರ ಸಮಾಗಮ. ಪಾಲುದಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ವಿದ್ಯಾರ್ಥಿಗಳಿಗೆ ಗೌರವ.
ಕಟಕ:
ಹಲವು ಚಟುವಟಿಕೆಗಳಿಂದ ಕೂಡಿದ ದಿನ. ಸಣ್ಣ ಪ್ರಯಾಣ ಸಂಭವ. ಮನೆಯಲ್ಲಿ ಸಂತಸದ ವಾತಾವರಣ. ದೂರದ ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಸಂದರ್ಭಕ್ಕೆ ಸರಿಯಾದ ಆಲೋಚನೆಯಿಂದ ನಿರೀಕ್ಷಿತ ಸ್ಥಾನ .
ಸಿಂಹ:
ದೈಹಿಕ ಆರೋಗ್ಯ ವೃದ್ಧಿ ಹಾಗೂ ಮಾನಸಿಕ ಸಂತುಷ್ಟತೆ. ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ. ಬಂಧುಗಳಿಂದ ಸಹಕಾರ. ನಿರೀಕ್ಷೆಗೂ ಮೀರಿದ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ , ಮಾತಿನಲ್ಲಿ ತಾಳ್ಮೆ ಎಚ್ಚರಿಕೆಯಿಂದ ಯಶಸ್ಸು. ದಾಂಪತ್ಯದಲ್ಲಿ ಸುಖ ವೃದ್ಧಿ.
ಕನ್ಯಾ:
ಆರೋಗ್ಯವು ಸುಧಾರಣೆಯ ಹಾದಿಯಲ್ಲಿ. ಸರಿಯಾದ ಶಿಸ್ತು ಪಾಲನೆ ಅಗತ್ಯ. ಉದ್ಯೋಗ ವ್ಯವಹಾರಗಳಲ್ಲಿ ಮಾನಸಿಕ ನೆಮ್ಮದಿ ವೃದ್ಧಿ. ಸಂದರ್ಭಕ್ಕೆ ಸರಿಯಾದ ಆಲೋಚನೆಯಿಂದ ನಿರ್ವಹಿಸುವ ಚಟುವಟಿಕೆಗಳಲ್ಲಿ ಪ್ರಗತಿ. ಮಿತ್ರರಿಂದ ಹೆಚ್ಚಿನ ಸಹಕಾರ.
ತುಲಾ:
ಆಸ್ತಿ ವಿಚಾರಗಳಲ್ಲಿ ತಲ್ಲೀನತೆ ಹಾಗೂ ನಿರೀಕ್ಷಿತ ಅಭಿವೃದ್ಧಿಯಿಂದ ಹೆಚ್ಚಿದ ಸಂತೋಷ. ಬಂಧುಮಿತ್ರರ ಮಾತೃ ಸಮಾನರಿಂದ ಸಹಕಾರ ಪ್ರೋತ್ಸಾಹ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಸರಕಾರಿ ಕಾರ್ಯಗಳಲ್ಲಿ ಮುನ್ನಡೆ.
ವೃಶ್ಚಿಕ:
ಆರೋಗ್ಯ ಗಮನಿಸಿ. ಹೆಚ್ಚಿದ ದೇಹಾಯಾಸ. ಗುರುಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಹಣಕಾಸಿನ ವಿಚಾರದಲ್ಲಿ ಗೊಂದಲವಾಗದಂತೆ ಗಮನಿಸಿ. ಅತಿ ಉದಾರತನದಿಂದ ಕಿರಿಕಿರಿ ಆದೀತು. ಸಾಂಸಾರಿಕ ಸುಖ ಮಧ್ಯಮ.
ಧನು:
ಅತಿಯಾದ ಆತ್ಮವಿಶ್ವಾಸದಿಂದ ಆರೋಗ್ಯದಲ್ಲಿ ಗಮನಹರಿಸದಿರುವುದರಿಂದ ಏರುಪೇರು ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಸ್ವಜನರೊಂದಿಗೆ ಪಾರದರ್ಶಕತೆಯಿಂದ ಕಾರ್ಯೋನ್ಮುಖರಾಗಿ. ನಿಷ್ಠುರ ಆಗದಂತೆ ಎಚ್ಚರ ವಹಿಸಿ. ನಿರೀಕ್ಷಿತ ಧನಲಾಭ.
ಮಕರ:
ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಸಂತೋಷ. ಭೂಮ್ಯಾದಿ ವಿಚಾರಗಳಲ್ಲಿ ಹೆಚ್ಚಿದ ಪರಿಶ್ರಮ. ಸಾಂಸಾರಿಕ ಸುಖ ಮಧ್ಯಮ. ಮಕ್ಕಳ ಅಭಿವೃದ್ಧಿಗಾಗಿ ಅಧಿಕ ಧನ ವ್ಯಯ. ಆರೋಗ್ಯ ವಿಚಾರದಲ್ಲಿ ನಿಗಾ ವಹಿಸಿ.
ಕುಂಭ:
ನಾಯಕತ್ವ ಗುಣ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಚರ್ಚೆಯಾದರೂ ಯಶಸ್ಸು ನಿಮ್ಮದಾಗುವ ಸಂಭವ. ಉತ್ತಮ ವರಮಾನ. ವಾಕ್ ಚತುರತೆ ಪ್ರದರ್ಶನ. ಗುರುಹಿರಿಯರ ಆರೋಗ್ಯ ಮಧ್ಯಮ .ಸಾಂಸಾರಿಕ ಸುಖಕ್ಕೆ ಹೆಚ್ಚು ಪರಿಶ್ರಮ ಸಂಭವ.
ಮೀನ:
ಸಣ್ಣ ಪ್ರಯಾಣದಿಂದ ಲಾಭ. ಉದ್ಯೋಗದಲ್ಲಿ ಪರಿಶ್ರಮಕ್ಕೆ ಸರಿಯಾಗಿ ಅಭಿವೃದ್ಧಿ. ಧನಾರ್ಜನೆ ತೃಪ್ತಿಕರ. ಅತಿಯಾದ ಉದಾರತೆ ಸಮಸ್ಯೆ ತಂದೀತು. ವಸ್ತುನಿಷ್ಠೆಗೆ ಆದ್ಯತೆ ನೀಡಿ ವ್ಯವಹರಿಸುವುದರಿಂದ ಸಫಲತೆ. ಸಾಂಸಾರಿಕ ಸುಖ ಮಧ್ಯಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.