ಅರಳುವ ಹೆಮ್ಮಾಡಿ ಸೇವಂತಿಗೆ ಕಮರುವ ಭೀತಿ!
ಜಾತ್ರೆಗಳಿಗೆ ನಿರ್ಬಂಧ: ಬೆಳೆಗಾರರಿಗೆ ಬರೆ; ಋತುವಿನ ಆರಂಭದಲ್ಲೇ ದೊಡ್ಡ ಹೊಡೆತ
Team Udayavani, Jan 9, 2022, 7:50 AM IST
ಕುಂದಾಪುರ: ಎರಡು ವರ್ಷಗಳಿಂದ ಲಾಕ್‌ಡೌನ್, ನೆರೆ, ಅತಿವೃಷ್ಟಿಯಿಂದ ಸಂಕಷ್ಟ ಅನುಭವಿಸಿದ್ದ ಹೆಮ್ಮಾಡಿಯ ಸೇವಂತಿಗೆ ಬೆಳೆಗಾರ ರಿಗೆ ಈ ಬಾರಿಯೂ ಕೊರೊನಾ ಗಾಯದ ಮೇಲೆ ಬರೆ ಎಳೆದಿದೆ.
ಕೊಯ್ಲು ಆರಂಭವಾಗುವಷ್ಟರಲ್ಲೇ ವಾರ್ಷಿಕ ಕೆಂಡ, ಉತ್ಸವಗಳಿಗೆ ನಿರ್ಬಂಧ ಹೇರಲಾಗಿದ್ದು, ಹೂಗಳನ್ನು ವಿಲೇವಾರಿ ಮಾಡಲಾರದೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.
ಹೆಮ್ಮಾಡಿ ಪರಿಸರದಲ್ಲಿ ಮಾತ್ರ ಬೆಳೆಯುವ ಸೇವಂತಿಗೆ ಬಹುಪಾಲು ವ್ಯಾಪಾರವಾಗುವುದು ಮಕರ ಸಂಕ್ರಾಂತಿ ಸಮಯದಲ್ಲಿ ನಡೆಯವ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರನ ಜಾತ್ರೆ ಯಲ್ಲಿ. ಈ ಬಾರಿ ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ವಿಧಿಸಲಾಗಿರುವುದರಿಂದ ಸರಳ ಆಚರಣೆ ನಡೆಯಲಿದೆ. ಇದರಿಂದಾಗಿ ಹೂವಿನ ವ್ಯಾಪಾರಕ್ಕೆ ಪೆಟ್ಟು ಬೀಳಲಿದೆ.
3 ತಿಂಗಳು ಮಾತ್ರ ವಹಿವಾಟು
ಹೆಮ್ಮಾಡಿ, ಕನ್ಯಾನ ಮತ್ತು ಕಟ್‌ಬೆಲೂ¤ರು ಗ್ರಾಮಗಳ 22 ಎಕರೆಯಲ್ಲಿ 60 ರೈತರು ಹೆಮ್ಮಾಡಿ ಸೇವಂತಿಗೆ ಬೆಳೆಯುತ್ತಾರೆ. ಪ್ರತೀ ವರ್ಷ ಜ. 3ರ ಬಸ್ರೂರು ದೇವಿ ದೇವಸ್ಥಾನದ ಹಬ್ಬದಿಂದ ಆರಂಭಗೊಂಡು ಮಾರ್ಚ್ ಕೊನೆಯ ಅಸೋಡು ಹಬ್ಬದವರೆಗೂ ದಿನಕ್ಕೆರಡು ಜಾತ್ರೆ, ಕೆಂಡೋತ್ಸವಗಳಿಗೆ ಸೇವಂತಿಗೆ ಹೂವಿಗೆ ಬೇಡಿಕೆ ಯಿರುತ್ತದೆ. ಈ ಬಾರಿ ಋತುವಿನ ಆರಂಭದಲ್ಲೇ ದೊಡ್ಡ ಹೊಡೆತ ಬಿದ್ದಿದೆ.
ಹೂವನ್ನು ಏನು ಮಾಡಲಿ?
ಅನೇಕ ವರ್ಷಗಳಿಂದ ಸೇವಂತಿಗೆ ಬೆಳೆಯು ತ್ತಿದ್ದು, ಜನವರಿ ಮೊದಲ ವಾರದಿಂದ ಕೊçಲು ಆರಂಭವಾಗಿ ಮಾರ್ಚ್‌ವರೆಗೆ ಇರುತ್ತದೆ.
ಮಾರಣಕಟ್ಟೆ ಹಬ್ಬದಲ್ಲಿ ಹೆಚ್ಚು ಹೂವು ಬೆಳೆದವರಿಗೆ ಕನಿಷ್ಠ 1 ಲಕ್ಷದಿಂದ 2.5. ಲಕ್ಷ ರೂ. ವರೆಗೂ ವ್ಯಾಪಾರ ಕುದುರುತ್ತದೆ. ಇನ್ನುಳಿದ ಜಾತ್ರೆ, ಕೆಂಡಗಳಲ್ಲಿ 10 ಸಾವಿರದಿಂದ 50 ಸಾವಿರ ರೂ. ವರೆಗೆ ನಿತ್ಯ ವಹಿವಾಟು ಆಗುತ್ತದೆ. ಕೊಯ್ಲು ವೇಳೆಗೇ ಸರಕಾರ ಹಬ್ಬಗಳಿಗೆ ನಿರ್ಬಂಧ ವಿಧಿಸಿದರೆ ಬೆಳೆದ ಹೂವನ್ನು ಏನು ಮಾಡುವುದು ಎಂದು ಬೆಳೆಗಾರ ಪ್ರಶಾಂತ್ ಭಂಡಾರಿ ಪ್ರಶ್ನಿಸಿದ್ದಾರೆ.
ಶಾಸಕರಿಗೆ ಮನವಿ
ಉತ್ಸವ, ಜಾತ್ರೆ ಇತ್ಯಾದಿಗಳಿಗೆ ವಿಧಿಸಿರುವ ನಿರ್ಬಂಧಗಳನ್ನು ಕರಾವಳಿ ಭಾಗಕ್ಕಾದರೂ ಸ್ವಲ್ಪ ಮಟ್ಟಿಗೆ ಸಡಿಲಿಸು ವಂತೆ ಸರಕಾರದ ಗಮನಕ್ಕೆ ತರುವುದಾಗಿ ಶುಕ್ರವಾರ ಬೆಳೆಗಾರರ ಸಂಘದ ವತಿಯಿಂದ ಮನವಿ ಸ್ವೀಕರಿಸಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಭರವಸೆ ನೀಡಿದರು.
ಕೈಗೆ ಬಂದ ತುತ್ತು..
ಈ ಬಾರಿ ಪೂರಕ ಹವಾಮಾನದಿಂದಾಗಿ ಸೇವಂತಿಗೆ ಇಳುವರಿ ಉತ್ತಮವಾಗಿದೆ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬ ಪರಿಸ್ಥಿತಿ ಬೆಳೆಗಾರರದ್ದು !
ಬದುಕೇ ನಾಶ
ಧಾರ್ಮಿಕ ಉತ್ಸವಗಳನ್ನೇ ನಂಬಿ ಸೇವಂತಿಗೆ ಬೆಳೆಯುವವರು ನಾವು. ಕೊಯ್ಲುನ ವೇಳೆಗೆ ನಿರ್ಬಂಧ ವಿಧಿಸುವುದೆಂದರೆ ವರ್ಷ ಪೂರ್ತಿ ಶ್ರಮಿಸಿ ಬೆಳೆದ ಹೂವು ಕಮರುವುದರೊಂದಿಗೆ ನಮ್ಮ ಬದುಕೇ ನಾಶವಾದಂತೆ. ಸರಕಾರ ನಮ್ಮ ಹಿತವನ್ನೂ ಗಮನಿಸಬೇಕು. ಇಲ್ಲದೇ ಹೋದರೆ ಕಾಯಬೇಕಾಗಿರುವ ಸರಕಾರವೇ ನಮ್ಮ ಬದುಕಿಗೆ ಕೊಳ್ಳಿ ಇಟ್ಟಂತೆ.
– ಮಹಾಬಲ ದೇವಾಡಿಗ, ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.