ನೋ ಬಾಲ್ ಅಲ್ಲ, ಆದರೂ ಒಂದೇ ಎಸೆತಕ್ಕೆ 7 ರನ್..: ವಿಡಿಯೋ ನೋಡಿ
Team Udayavani, Jan 9, 2022, 2:33 PM IST
ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಆಟಗಾರ ವಿಲ್ ಯಂಗ್ ಒಂದೇ ಎಸೆತಕ್ಕೆ ಏಳು ರನ್ ಗಳಿಸಿದ್ದಾರೆ. ಬಾಂಗ್ಲಾ ಬೌಲರ್ ಗಳ ಫೀಲ್ಡಿಂಗ್ ತಪ್ಪಿನಿಂದಾಗಿ ಏಳು ರನ್ ಬಂದಿದೆ.
ಇಬಾದತ್ ಹುಸೇನ್ ಬೌಲಿಂಗ್ ನಲ್ಲಿ ವಿಲ್ ಯಂಗ್ ಹೊಡೆದ ಶಾಟ್ ಎಡ್ಜ್ ಆಗಿ ಎರಡನೇ ಸ್ಲಿಪ್ ಗೆ ಹೋಯಿತು. ಆದರೆ ಸ್ಲಿಪ್ ಫೀಲ್ಡರ್ ಕ್ಯಾಚ್ ಬಿಟ್ಟು ಚೆಂಡು ಬೌಂಡರಿ ಕಡೆಗೆ ಹೋಗಿತು. ಕ್ರೀಸ್ ನಲ್ಲಿದ್ದ ಯಂಗ್ ಮತ್ತು ಟಾಮ್ ಲ್ಯಾಥಂ ಮೂರು ರನ್ ಓಡಿದರು. ಆದರೆ ಫೀಲ್ಡರ್ ಎಸೆದ ಚೆಂಡು ಮಿಸ್ ಫೀಲ್ಡ್ ಆಗಿ ಲಾಂಗಾನ್ ಬೌಂಡರಿ ಸೇರಿತು. ಓಡಿದ ಮೂರು ರನ್ ಮತ್ತು ಹೆಚ್ಚುವರಿ ಬೌಂಡರಿ ಸೇರಿ ಏಳು ರನ್ ಕಿವೀಸ್ ಪಾಲಾಯಿತು.
ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಅಲ್ಲ, ರಶ್ಮಿಕಾ ಮಡೋನಾ.. ಇದು ಪುಷ್ಪ ತಂಡದ ಎಡವಟ್ಟು!
ಮೊದಲ ಟೆಸ್ಟ್ ನಲ್ಲಿ ಸೋಲನುಭವಿಸಿ ಅವಮಾನ ಅನುಭವಿಸಿದ್ದ ನ್ಯೂಜಿಲ್ಯಾಂಡ್ ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದೆ. ನಾಯಕ ಟಾಮ್ ಲ್ಯಾಥಂ ಅಜೇಯ ಶತಕ ಬಾರಿಸಿದ್ದು, ಡೆವೋನ್ ಕಾನ್ವೆ ಅಜೇಯ 99 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಮೊದಲ ದಿನದ ಅಂತ್ಯದಲ್ಲಿ ಒಂದು ವಿಕೆಟ್ ಅಂತ್ಯಕ್ಕೆ 349 ರನ್ ಗಳಿಸಿದೆ.
Meanwhile, across the Tasman Sea… ⛴️
Chaos in the field for Bangladesh as Will Young scores a seven (yes, you read that correctly!) ?#NZvBAN | BT Sport 3 HD pic.twitter.com/fvrD1xmNDd
— Cricket on BT Sport (@btsportcricket) January 9, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.