ಕ್ರೀಸ್ ಕಚ್ಚಿ ನಿಂತ ಆ್ಯಂಡರ್ಸನ್..: ಕೊನೆಗೂ ಸೋಲು ತಪ್ಪಿಸಿಕೊಂಡ ರೂಟ್ ಪಡೆ
Team Udayavani, Jan 9, 2022, 3:39 PM IST
ಸಿಡ್ನಿ: ಹಲವು ವಿಶೇಷತೆಗಳಿಗೆ ಸಾಕ್ಷಿಯಾದ ಸಿಡ್ನಿ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಸೋಲು ತಪ್ಪಿಸುವ ಇಂಗ್ಲೆಂಡ್ ನ ಪ್ರಯತ್ನ ಮತ್ತು ಗೆಲುವು ಕಾಣುವ ಆಸ್ಟ್ರೇಲಿಯಾದ ಪ್ರಯತ್ನದಲ್ಲಿ ಕೊನೆಗೆ ಇಂಗ್ಲೆಂಡ್ ನ ಪ್ರಯತ್ನಕ್ಕೆ ಗೆಲುವಾಗಿದೆ.
ಇಂಗ್ಲೆಂಡ್ 270 ರನ್ ಗೆ 9 ವಿಕೆಟ್ ಕಳೆದುಕೊಂಡಿತ್ತು. ಗೆಲುವು ಬಹುದೂರ. ಆದರೆ ಸೋಲು ತಪ್ಪಿಸಿ ಪಂದ್ಯ ಡ್ರಾ ಮಾಡಲು ಒಂದು ಓವರ್ ಆಡಬೇಕಿತ್ತು, ಇರುವುದು ಒಂದೇ ವಿಕೆಟ್. ಕ್ರೀಸ್ ನಲ್ಲಿದ್ದಿದು ಆ್ಯಂಡರ್ಸನ್ ಮತ್ತು ಬ್ರಾಡ್. ಸ್ಟೀವ್ ಸ್ಮಿತ್ ಎಸೆದ ಕೊನೆಯ ಓವರ್ ನ್ನು ಆ್ಯಂಡರ್ಸನ್ ಎದುರಿಸಿದರು. ಆ್ಯಂಡರ್ಸನ್ ಸುತ್ತ ಎಂಟು ಮಂದಿ ಫೀಲ್ಡರ್ ಗಳು ಚಕ್ರವ್ಯೂಹವನ್ನೇ ರಚಿಸಿದ್ದರು. ಆದರೆ ಎದೆಗುಂದದ ಆ್ಯಂಡರ್ಸನ್ ಪೂರ್ತಿ ಓವರ್ ನ್ನು ರಕ್ಷಣಾತ್ಮಕವಾಗಿ ಆಡಿ ಪಂದ್ಯಕ್ಕೆ ಡ್ರಾ ಮುದ್ರೆ ಒತ್ತಿದರು.
ಸತತ ನಾಲ್ಕನೇ ಜಯ ಸಾಧಿಸುವ ಆಸೀಸ್ ಕನಸು ನನಸಾಗಲಿಲ್ಲ. ಸರಣಿಯ ಮೊದಲ ಮೂರು ಪಂದ್ಯಗಳನ್ನು ಆಸ್ಟ್ರೆಲಿಯಾ ತಂಡ ಗೆದ್ದುಕೊಂಡಿದೆ.
ಪಂದ್ಯ ಜಯಿಸಲು ಇಂಗ್ಲೆಂಡ್ 388 ರನ್ ಗಳಿಸಬೇಕಿತ್ತು. ಆದರೆ ಜ್ಯಾಕ್ ಕ್ರಾವ್ಲಿ ಹೊರತುಪಡಿಸಿ ಟಾಪ್ ಆರ್ಡರ್ ಬ್ಯಾಟರ್ ಗಳ ಸಹಾಯ ಇಂಗ್ಲೆಂಡ್ ಗೆ ಸಿಗಲಿಲ್ಲ. ಕ್ರಾವ್ಲಿ 77 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬೆನ್ ಸ್ಟೋಕ್ಸ್ 60 ರನ್ ಮತ್ತು ಮೊದಲ ಇನ್ನಿಂಗ್ಸ್ ನ ಶತಕವೀರ ಜಾನಿ ಬೆರಿಸ್ಟೋ 41 ರನ್ ಗಳಿಸಿದರು.
ಇದನ್ನೂ ಓದಿ:ನೋ ಬಾಲ್ ಅಲ್ಲ, ಆದರೂ ಒಂದೇ ಎಸೆತಕ್ಕೆ 7 ರನ್..: ವಿಡಿಯೋ ನೋಡಿ
ಆಸೀಸ್ ಪರ ಬೊಲಾಂಡ್ ಮೂರು ವಿಕೆಟ್ ಕಿತ್ತರೆ, ಕಮಿನ್ಸ್ ಮತ್ತು ಲಯಾನ್ ತಲಾ ಎರಡು ವಿಕೆಟ್ ಕಿತ್ತರು. ತಲಾ ಒಂದು ವಿಕೆಟ್ ಗ್ರೀನ್ ಮತ್ತು ಸ್ಮಿತ್ ಪಾಲಾಯಿತು.
ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದ ಉಸ್ಮಾನ್ ಖವಾಜಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆ್ಯಶಸ್ ಸರಣಿಯ ಐದನೇ ಮತ್ತು ಅಂತಿಮ ಪಂದ್ಯ ಜನವರಿ 14ರಿಂದ ಹೋಬಾರ್ಟ್ ನಲ್ಲಿ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
IPL Mega Auction: ಹರಾಜು ಆರಂಭ; ಭರ್ಜರಿ ಬಿಡ್ ಗಳಿಸಿದ ವೇಗಿ ಅರ್ಶದೀಪ್ ಸಿಂಗ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.