![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 9, 2022, 3:30 PM IST
ಸೈದಾಪುರ: ಪಟ್ಟಣದ ಪಿಪಿಟಿ ಫ್ಯಾಶನ್ ಕ್ಲಬ್ ವತಿಯಿಂದ ಬಡ ಹಾಗೂ ಅನಾಥ ಮಕ್ಕಳಿಗೆ ಬಟ್ಟೆ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.
ಈ ವೇಳೆ ಜೆಡಿಎಸ್ ಯುವ ಮುಖಂಡ ಶರಣಗೌಡ ಕಂದಕೂರ ಮಾತನಾಡಿ, ನಾವು ಮಾಡುವ ಕಾರ್ಯ ಶ್ರದ್ಧೆ, ಪರಿಶ್ರಮದೊಂದಿಗೆ ಕೈಗೊಂಡರೆ ಉತ್ತಮ ಸಾಧನೆ ಸಾಧ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಹಕರ ಬೇಡಿಕೆಗಳ ತಕ್ಕಂತೆ ಸೇವೆ ಮಾಡಿದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದರು.
ಪಿಪಿಟಿ ಫ್ಯಾಶನ್ ಕ್ಲಬ್ ಮಾಲೀಕ ಪ್ರಸಾದ ತೋರತ ಮಾತನಾಡಿದರು. ಡಾ| ಈಶ್ವರಲಾಲ್ ಅಲಿಝಾರ್, ಚಂದ್ರುಗೌಡ, ಶರಣಗೌಡ ಕ್ಯಾತ್ನಾಳ, ಮುಕುಂದಕಮಾರ ಅಲಿಝಾರ್, ಕೆ.ಬಿ. ಗೋವರ್ಧನ, ರಾಜೇಶ ಉಡುಪಿ, ಗ್ರಾಪಂ ಸದಸ್ಯ ರಾಕೇಶ ಕೋರೆ, ಅರ್ಜುನ ಚೌವ್ಹಾಣ, ತಿಮ್ಮರೆಡ್ಡಿ, ಆನಂದ ಮಿರಿಯಾಲ, ದೇವು ಘಂಟಿ, ಲಕ್ಷ್ಮಣ ನಾಯಕ, ಅಲ್ಲಾವುದ್ದೀನ್ ನೀಲಹಳ್ಳಿ, ಷಣ್ಮೂಖ, ಪ್ರಶಾಂತ ತೋರತ್ ಸೇರಿದಂತೆ ಇತರರಿದ್ದರು.
You seem to have an Ad Blocker on.
To continue reading, please turn it off or whitelist Udayavani.