ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಉಲ್ಬಣ : 340 ಮಂದಿಗೆ ಪಾಸಿಟಿವ್; ಶೇ.3.86 ಪಾಸಿಟಿವಿಟಿ ದರ
Team Udayavani, Jan 9, 2022, 9:30 PM IST
ಉಡುಪಿ : ವಾರಾಂತ್ಯ ಕರ್ಫ್ಯೂ ನಡುವೆ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಮತ್ತೆ ಉಲ್ಬಣ ಕಂಡಿದೆ. ರವಿವಾರ ಒಟ್ಟು 340 ಮಂದಿಗೆ ಸೋಂಕು ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ.3.86 ಆಗಿದೆ.
ಉಡುಪಿಯಲ್ಲಿ 262, ಕುಂದಾಪುರದಲ್ಲಿ 29, ಕಾರ್ಕಳದಲ್ಲಿ 49 ಮಂದಿಗೆ ಸೋಂಕು ಕಂಡುಬಂದಿದೆ. ಉಡುಪಿಯಲ್ಲಿ ಶೇ. 4.88, ಕುಂದಾಪುರದಲ್ಲಿ ಶೇ.1.90, ಕಾರ್ಕಳದಲ್ಲಿ ಶೇ.2.56 ಪಾಸಿಟಿವಿಟಿ ದರ ಕಂಡು ಬಂದಿದೆ. ಉಡುಪಿಯಲ್ಲಿ 5,373, ಕುಂದಾಪುರದಲ್ಲಿ 1,530, ಕಾರ್ಕಳದಲ್ಲಿ 1,916 ಸಹಿತ ಒಟ್ಟು 8,819 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕು ಲಕ್ಷಣ ಕಂಡುಬಂದ 279 ಮಂದಿಯನ್ನು ಹೋಂ ಐಸೊಲೇಶನ್ಗೆ, 52 ಮಂದಿಯನ್ನು ಕೋವಿಡ್ ಕೇರ್ ಸೆಂಟರ್ಗೆ, 9 ಮಂದಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. 77 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 979 ಪ್ರಕರಣಗಳು ಸಕ್ರಿಯವಾಗಿವೆ.
ಬೆಡ್ ವಿವರ
ಕೋವಿಡ್ ಆರೈಕೆಗೆ ಮುನ್ನೆಚ್ಚರಿಕೆ ಕ್ರಮವಾಗಿ 30 ಸಾಮಾನ್ಯ ಬೆಡ್ಗಳು, 4 ಹೈ ಡಿಪೆಂಡೆನ್ಸಿ ಯುನಿಟ್, ವೆಂಟಿಲೇಟರ್ ಇಲ್ಲದ 6 ಐಸಿಯು ಬೆಡ್ಗಳು, ವೆಂಟಿಲೇಟರ್ ಇರುವ ಒಂದು ಬೆಡ್ ಸಹಿತ ಒಟ್ಟು 41 ಬೆಡ್ಗಳನ್ನು ಮೀಸಲಿರಿಸಲಾಗಿದೆ.
ಇದನ್ನೂ ಓದಿ : ನಾಟಿ ಖರ್ಚು ಕಡಿವಾಣಕ್ಕೆ ಡ್ರಮ್ ಸೀಡರ್ : ಖರ್ಚು ಕಡಿಮೆ ಮಾಡಲು ಕೃಷಿ ವಿವಿ ಸಂಶೋಧನೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.