ಇನ್‌ಸ್ಟಾಗ್ರಾಂನಲ್ಲಿ ಗಳಿಕೆ ಹೇಗೆ? ಎನ್ನುವುದಕ್ಕೆ ಇಲ್ಲಿದೆ ಉತ್ತರ!
ಇನ್‌ಸ್ಟಾಗ್ರಾಂ ಲೈವ್ ವೀಡಿಯೋಗಳಲ್ಲಿ ನೀವು ಪ್ರತಿಭೆ ತೋರ್ಪಡಿಸಬಹುದು.
Team Udayavani, Jan 10, 2022, 1:00 PM IST
ಯುವಜನತೆಯ ಅಚ್ಚುಮೆಚ್ಚಿನ ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಂ. ಟೈಂ ವೇಸ್ಟ್ ಎಂದು ದೊಡ್ಡವರು ಹೇಳುವ ಇದೇ ಸೋಶಿಯಲ್ ಮೀಡಿಯಾದಿಂದ ಸಾವಿರ, ಲಕ್ಷ, ಕೋಟಿ ರೂ. ದುಡಿಯುತ್ತಿರುವವರೂ ಇದ್ದಾರೆ. ಅದು ಹೇಗೆ ಸಾಧ್ಯ? ಎನ್ನುವುದಕ್ಕೆ ಇಲ್ಲಿದೆ ಉತ್ತರ.
ಸ್ಪಾನ್ಸರ್ ದೇವೋ ಭವ: ಇನ್‌ಸ್ಟಾಗ್ರಾಂನಲ್ಲಿ ಹಣ ಗಳಿಸಲು ಇರುವ ಸುಲಭದ ಹಾದಿ ಸ್ಪಾನ್ಸರ್. ಈಗೀಗ ಆರಂಭವಾಗಿರುವ ಸ್ಟಾರ್ಟ್ ಅಪ್‌ಗಳಿಂದ ಹಿಡಿದು, ದೊಡ್ಡ ದೊಡ್ಡ ಉದ್ಯಮದವರೂ ಸ್ಪಾನ್ಸರ್‌ಗಳಾಗಿದ್ದಾರೆ. ಅವರ ಉದ್ಯಮವನ್ನು ಇನ್‌ಸ್ಟಾ ಇನ್‌ಫ್ಲೂಯೆನ್ಸರ್‌ಗಳಿಂದ ಪ್ರಚಾರ ಮಾಡಿಸು ತ್ತಿದ್ದಾರೆ. ಅದಕ್ಕೆಂದು ಬೊಕ್ಕಸ ತುಂಬ ಹಣವನ್ನೂ ಕೊಡುತ್ತಿದ್ದಾರೆ.
ವ್ಯವಹಾರ ಹೆಚ್ಚಿಸಲು ಬೆಸ್ಟ್: ಸ್ಟಾರ್ಟ್ ಅಪ್‌ಗಳನ್ನು ಹೊಂದಿರುವವರಿಗೆ ತಮ್ಮ ಬ್ರ್ಯಾಂಡ್‌ನ್ನು ಪ್ರಚಾರ ಮಾಡಿಕೊಳ್ಳುವುದಕ್ಕೆ, ಗ್ರಾಹಕರನ್ನು ಸೆಳೆಯುವುದಕ್ಕೆ ಇನ್‌ಸ್ಟಾಗ್ರಾಂ ಸೂಕ್ತ ವೇದಿಕೆ. ಉತ್ಪನ್ನಗಳ ಫೋಟೋ, ವೀಡಿಯೋ ಇನ್‌ಸ್ಟಾಗ್ರಾಂನಲ್ಲಿ ಹಾಕಬಹುದು. ಆ ಫೋಟೋದಲ್ಲೇ ನಿಮ್ಮ ಉತ್ಪನ್ನ ಖರೀದಿಸುವುದಕ್ಕೆ ಇರುವ ಸೈಟ್‌ಗೆ ಹೋಗಲು ನೇರ ಸಂಪರ್ಕವನ್ನೂ ಮಾಡಿಕೊಡಬಹುದು.
ಲೈವ್ ವೀಡಿಯೋದಿಂದಲೂ ದುಡ್ಡು: ಇನ್‌ಸ್ಟಾಗ್ರಾಂ ಲೈವ್ ವೀಡಿಯೋಗಳಲ್ಲಿ ನೀವು ಪ್ರತಿಭೆ ತೋರ್ಪಡಿಸಬಹುದು. ಅದನ್ನು ನೋಡುವವರಿಗೆ ಬ್ಯಾಡ್ಜ್ ಕೊಡುವ ಆಯ್ಕೆಯಿರುತ್ತದೆ. ಬ್ಯಾಡ್ಜ್ ಎಂದರೆ ಟಿಪ್ಸ್. ನಿಮ್ಮ ಪ್ರತಿಭೆಯನ್ನು ಮೆಚ್ಚಿ ಅವರು ಎಷ್ಟು ಬೇಕಾದರೂ ಬ್ಯಾಡ್ಜ್ ಕೊಡಬಹುದು. ಅದಕ್ಕೆ ಅವರು ಹಣ ವ್ಯಯಿಸಬೇಕಾಗುತ್ತದೆ. ಆ ಹಣ ಟಿಪ್ಸ್ ರೂಪದಲ್ಲಿ ನಿಮ್ಮ ಪಾಲಾಗುತ್ತದೆ.
ಇದನ್ನೂ ಓದಿ:ಹಿಮವರ್ಷ : ರಾಜ್ಯದ 400ಕ್ಕೂ ಅಧಿಕ ಪ್ರಮುಖ ರಸ್ತೆಗಳು ಬಂದ್
ವೀಡಿಯೋ ಮೊನೆಟೈಸ್ ಆಯ್ಕೆ: ಇನ್‌ಸ್ಟಾಗ್ರಾಂ ವೀಡಿಯೋಗೆ ಜಾಹೀರಾತು ಬರುವಂತೆ ಮಾಡಿಕೊಳ್ಳಬಹುದು. ಅದಕ್ಕೆ ಮೊದಲು ನೀವು ನಿಮ್ಮ ಇನ್‌ಸ್ಟಾ ಖಾತೆಯ ಸೆಟ್ಟಿಂಗ್‌ನಲ್ಲಿ ಮೊನೆಟೈಸೇಶನ್ ಎನೇಬಲ್ ಮಾಡಿಕೊಳ್ಳಬೇಕು. ನಿಮ್ಮ ವೀಡಿಯೋಗಳು ನಿರ್ದಿಷ್ಟ ಸಂಖ್ಯೆಯ ವೀಕ್ಷಣೆ ಪಡೆದ ಅನಂತರ ವೀಡಿಯೋಗಳ ಮಧ್ಯೆ ಜಾಹೀರಾತು ಆರಂಭವಾಗುತ್ತದೆ. ನೆನಪಿರಲಿ, ಇದು ರೀಲ್ ವೀಡಿಯೋಗಳಿಗೆ ಅನ್ವಯವಾಗುವು ದಿಲ್ಲ. ನಿಮ್ಮ ವೀಡಿಯೋಗಳು ಕನಿಷ್ಠ 2 ನಿಮಿಷದಷ್ಟು ದೊಡ್ಡದಿದ್ದರೆ ಹಾಗೂ ಸಂಸ್ಥೆ ಮೊದಲೇ ನಿಗದಿ ಪಡಿಸಿದ ವೀಕ್ಷಣೆ ಪಡೆದರೆ ಮಾತ್ರ ಈ ಆಯ್ಕೆ ಅನ್ವಯವಾಗುತ್ತದೆ.
ಬಳಸಿ ಬಿಟ್ಟದನ್ನೂ ಮಾರಿ
ಇನ್‌ಸ್ಟಾಗ್ರಾಂನಲ್ಲಿ ನೂತನ ಉತ್ಪನ್ನಗಳನ್ನೇ ಮಾರಾಟ ಮಾಡಬೇಕೆಂದೇನಿಲ್ಲ. ನೀವು ಬಳಸಿ, ಬೇಜಾರಾಗಿರುವ (ಉತ್ತಮ ಸ್ಥಿತಿಯಲ್ಲಿರುವ) ವಸ್ತುಗಳನ್ನೂ ಮಾರಾಟ ಮಾಡಬಹುದು. ಎಲೆಕ್ಟ್ರಾನಿಕ್ ಉತ್ಪನ್ನ, ಬಟ್ಟೆ, ಆಭರಣ ಸೇರಿ ಹಲವು ರೀತಿಯ ವಸ್ತುಗಳ ಫೋಟೋ, ವೀಡಿಯೋ ಹಾಕಿ ಮಾರಾಟ ಮಾಡಬಹುದು. ತೀರಾ ವಿಚಿತ್ರ ಎನಿಸುವ ಉತ್ಪನ್ನಗಳನ್ನೂ ಮಾರಾಟ ಮಾಡುವ ಇನ್‌ಫೂÉಯೆನ್ಸರ್‌ಗಳು ಇನ್‌ಸ್ಟಾದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.