ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್: ನಕ್ಕು ನಗಿಸುವ ರಾಜಕೀಯ ವಿಡಂಬನೆ
Team Udayavani, Jan 10, 2022, 10:22 AM IST
ವರ್ಷದ ಪ್ರಾರಂಭಕ್ಕೆ ಮೊದಲ ವೆಬ್ ಸರಣಿ ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್ (2022) ಹೇರಳ ಪಾಪ್ -ಸಂಸ್ಕೃತಿಯ ಉಲ್ಲೇಖಗಳಿದ್ದು ವಿಸ್ತಾರ ಶ್ರೇಣಿಯ ವೀಕ್ಷಕರಿಗೆ ಮೆಚ್ಚುಗೆಯಾಗುತ್ತದೆ.
ಕರ್ನಾಟಕ ರಾಜ್ಯವು ಚುನಾವಣೆ ಸಮಯದಲ್ಲಿದ್ದು ಪಕ್ಷಗಳು ತಮ್ಮ ಮತಗಳ ಪಾಲು ಪಡೆಯಲು ಶ್ರಮಿಸುತ್ತಿವೆ. ಒನ್ ಬಿಗ್ ಪಾರ್ಟಿ(ಒಬಿಪಿ) ರಾಜ್ಯದ 224 ವಿಧಾನಸಭಾ ಸ್ಥಾನಗಳಲ್ಲಿ ಕೇವಲ 36 ಗೆಲ್ಲಲು ಶಕ್ತವಾಗುತ್ತದೆ. ಅದು ಅವರ ವಿರೋಧಿಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿರುತ್ತದೆ. ಕೃಷ್ಣ ಗುಂಡುಬಾಲಾ ಅಲಿಯಾಸ್ ಕೆಜಿಬಿ ನೇತೃತ್ವದ ಮೋಸ್ಟ್ ಸೆಕ್ಯುಲರ್ ಪಾರ್ಟಿ(ಎಂಎಸ್‌ಪಿ) ಮತ್ತು ಫ್ಯಾಮಿಲಿ ರನ್ ಪಾರ್ಟಿ(ಎಫ್ಆರ್‌ಪಿ) ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಧಿಕಾರದ ನಿಯಂತ್ರಣ ಹೊಂದಿರುತ್ತದೆ. ತನ್ನನ್ನು ತಾನು “ಹಂಬಲ್ ಪೊಲಿಟಿಷಿಯನ್ ಎಂದು ಕರೆದುಕೊಳ್ಳುವ ನೊಗ್‌ರಾಜ್ ತನ್ನ ಪರ್ಸನಲ್ ಅಸಿಸ್ಟೆಂಟ್ ಮಂಜುನಾಥ್(ವಿಜಯ್ ಚೆಂಡೂರ್) ನೆರವಿನಿಂದ ಸಿಂಹಪಾಲು ಪಡೆದು ಮುಖ್ಯಮಂತ್ರಿಯ ಸ್ಥಾನದಲ್ಲಿ ಕೂರುತ್ತಾನೆ.
ಡ್ಯಾನಿಷ್ ಸೇಠ್ (ನೊಗ್‌ರಾಜ್ ಪಾತ್ರಧಾರಿ) ಅವರ ಒಂದು ನಿಮಿಷದ ವಿವಿಧ ವಿಷಯಗಳ ಮೇಲಿನ ಪದಗಳ ಹಾಸ್ಯ, ತಮಾಷೆ, ವಿಡಂಬನಾತ್ಮಕ ವಿನೋದಮಯ ವಿಡಿಯೋಗಳ ಮೂಲಕ ಪರಿಚಿತರಾದವರಿಗೆ ಒಂದು ಅತ್ಯುತ್ತಮವಾದ ಸರಣಿಯೊಂದಿಗೆ ಇವೆಲ್ಲವನ್ನೂ ಕಟ್ಟಿಕೊಡಲಾಗಿದೆ.
ಅಧಿಕಾರ ಹಿಡಿಯಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಅವರು ಅತ್ಯಂತ ನಕ್ಕು ನಗಿಸುವ ಸ್ಟಂಟ್‌ಗಳಾದ ರಾಜಕಾರಣಿಗಳನ್ನು ಜೋಕರ್, ಹಲ್ಕ್, ಮದರ್ ಥೆರೇಸಾ ಮತ್ತು ಡಾರ್ಥ್ ವೇಡರ್ ಅವರಂತೆ ಚಿತ್ರಿಸುವ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮ ಮುಂತಾದವು ಗಳನ್ನು ನಡೆಸುತ್ತವೆ. ಈ ಸರಣಿಯು ಒಂದು ಪಕ್ಷದ ವಂಶ ಪಾರಂಪರ್ಯದ ಆಡಳಿತದಂತಹ ನಿಜ ಜೀವನದ ರಾಜಕೀಯ ಸನ್ನಿವೇಶಗಳಿಂದ ಸ್ಫೂರ್ತಿ ಪಡೆದಿದೆ. ಈ “ಯೂಥ್ ಲೀಡರ್ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳಿಗಿಂತ ಸಾಮಾಜಿಕ ಮಾಧ್ಯಮದ ತುಣುಕುಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುವಂತೆ ಕಾಣುತ್ತಾನೆ, ಪ್ರಧಾನ ಮಂತ್ರಿಯು ದೇಶವನ್ನು ನಡೆಸುವುದಕ್ಕಿಂತ ಮುಖ್ಯವಾಗಿ ಅಮೆಜಾನ್‌ನಲ್ಲಿ ಮುಳುಗಿ ಹೋಗಿರುತ್ತಾನೆ.
ಇದನ್ನೂ ಓದಿ:ಕೆಕೆಆರ್ ನ ‘ಮಾಸ್ಟರ್ ಸ್ಟ್ರೋಕ್’ ಟ್ವೀಟ್ ಗೆ ವ್ಯಂಗ್ಯವಾಡಿದ ರವೀಂದ್ರ ಜಡೇಜಾ
1990ರ ಹಿಂದಿನ ಗೀತೆಗಳಿಂದ ಉಲ್ಲೇಖಗಳು ಅಲ್ಲದೆ ಹಿಂದಿ ಹಾಗೂ ಇಂಗ್ಲಿಷ್‌ನ ಲಿಬರಲ್ ಪೆಪ್ಪರಿಂಗ್ ಹೊಂದಿದ್ದು ಪ್ರತಿ ಶ್ರೀ ಸಾಮಾನ್ಯನಿಗೂ ಏನೋ ಒಂದನ್ನು ಹೊಂದಿದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವು ಪೇಯ್ಡ ಟಿ.ವಿ. ಚಾನೆಲ್‌ನೊಂದಿಗೆ ಕೈ ಜೋಡಿಸಿ ಅದರ ಟಿಆರ್‌ಪಿ ಹಸಿವಿನ ಹೋರಾಟಕ್ಕೆ ಆಜ್ಯ ನೀಡುತ್ತದೆ. ಹಂಬಲ್ ಪೊಲಿಟಿಷಿಯನ್ ನೊಗ್‌ರಾಜ್ ನಿಮ್ಮನ್ನು ರಾಜಕೀಯದ ಏಳು ಬೀಳುಗಳ ಮೂಲಕ ಕೊಂಡೊಯ್ಯುತ್ತದೆ, ಭ್ರಷ್ಟಾಚಾರದಿಂದ ಮಹತ್ವಾಕಾಂಕ್ಷೆಯ ಅನೈತಿಕತೆಯವೆರೆಗೆ ವಿಷಯಗಳನ್ನ ಹೊಂದಿದೆ.
ತಕ್ಕಷ್ಟು ಪ್ರಮಾಣದ ಹಾಸ್ಯ, ಆ್ಯಕ್ಷನ್ ಮತ್ತು ಸಾಹಸ ಹೊಂದಿರುವ ಈ ಸರಣಿ ನಿಜಕ್ಕೂ ಪಕ್ಕೆ ಹಿಡಿದು ನಗಿಸುವಂತಹ ಹಾಗೆಯೇ ಆಲೋಚನೆಗೆ ಹಚ್ಚುವಂತಹ ರಾಜಕೀಯ ವಿಡಂಬನೆಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.