ಹುಣಸೂರು: ಜನರ ಕಲ್ಲೇಟಿಗೆ ಸಿಲುಕಿ ನಾಲೆಯಲ್ಲಿ ಪರದಾಡಿದ ಕಾಡಾನೆಗಳು
Team Udayavani, Jan 10, 2022, 2:36 PM IST
ಹುಣಸೂರು: ಉದ್ಯಾನವನದಿಂದ ಕಾಡಾನೆಗಳು ದಿಕ್ಕುತಪ್ಪಿ ಕಾಡಿಗೆ ಹೋಗಲಾಗದೆ ಜನರ ಕಲ್ಲೇಟಿಗೆ ಹೆದರಿ ನಾಲೆಗೆ ಇಳಿದು ಮೇಲೆ ಹತ್ತಲಾಗದೆ ಅತ್ತಿಂದಿತ್ತ ಓಡಾಡಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಾಗರಹೊಳೆ ಉದ್ಯಾನವನದಿಂದ ಭಾನುವಾರ ರಾತ್ರಿ ಹೊರಬಂದಿದ್ದ ಆನೆಗಳ ಹಿಂಡು ಪೆಂಜಹಳ್ಳಿ, ಗುರುಪುರ, ಮಾಜಿ ಗುರುಪುರ ಗ್ರಾಮಗಳ ಜಮೀನುಗಳಲ್ಲಿ ರಾತ್ರಿ ವೇಳೆ ಮೇವು ಮೆಂದು ಮುಂಜಾನೆ ಕಾಡಿನತ್ತ ತೆರಳುತ್ತಿದ್ದ ವೇಳೆ ರೈತರು ಆನೆಗಳನ್ನು ಅಟ್ಟಾಡಿಸಿದ್ದು, ಈ ವೇಳೆ ಮುಖ್ಯ ನಾಲೆಗಿಳಿದಿದೆ.
ಬಳಿಕವೂ ಜನರು ನಾಲೆ ಸುತ್ತ ಜಮಾಯಿಸಿ, ಆನೆಗಳನ್ನು ಬೆದರಿಸಿದ್ದಾರೆ. ಯುವಕರು ಕಟ್ಟು ಹೊಡೆದು ಹೆದರಿಸಿದ್ದರಿಂದ ನಾಲೆ ಮೇಲೆ ಬರಲಾಗದೆ ಗಂಟೆಗಳ ಕಾಲ ಅತ್ತಿಂದಿತ್ತ ಓಡಾಡತೊಡಗಿದವು. ನಂತರ ಪೆಂಜಹಳ್ಳಿ ಭಾಗದಿಂದ ಉದ್ಯಾನವನದತ್ತ ತೆರಳಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.