ಕ್ಷೇತ್ರ ಅಭಿವೃದ್ದಿಯೇ ಗುರಿ: ಶಾಸಕ ಗುತ್ತೇದಾರ
Team Udayavani, Jan 10, 2022, 3:25 PM IST
ಆಳಂದ: ಕ್ಷೇತ್ರದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆ, ಕುಡಿಯುವ ನೀರು, ಶಾಲೆ, ಕಟ್ಟಡ ಸೇರಿದಂತೆ ಮೂಲ ಸೌಲಭ್ಯ ಒದಗಿಸುವುದೇ ತಮ್ಮ ಮುಖ್ಯ ಗುರಿಯಾಗಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.
ತಾಲೂಕಿನ ಹಿರೋಳಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದ ಅಡಿಯಲ್ಲಿ 30 ಲಕ್ಷ ರೂ. ವೆಚ್ಚದ ಪ್ರಾಥಮಿಕ ಶಾಲೆಯ ಸುತ್ತುಗೋಡೆ, 10 ಲಕ್ಷ ರೂ. ವೆಚ್ಚದಲ್ಲಿ ಶವಾಗಾರ, 19 ಲಕ್ಷ ರೂ. ವೆಚ್ಚದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಸ ವಿಲೇವಾರಿ ಘಟಕ ಸೇರಿದಂತೆ ಒಟ್ಟು 70 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರಕ್ಕೆ 50 ಕೋಟಿ ರೂ. ಅನುದಾನ ನೀಡಲಾಗಿದ್ದು, ಇದರಡಿ ಕಾಮಗಾರಿ ಕೈಗೊಳ್ಳಲಾಗಿದೆ. ಹಿರೋಳಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.
ಬಿಜೆಪಿ ಯುವ ಮುಖಂಡ ಸಿದ್ಧು ಪಾಟೀಲ ಹಿರೋಳಿ, ಗ್ರಾಪಂ ಸದಸ್ಯ ಕಾಶಿನಾಥ ಎಸ್. ವಾಡೇದ್, ಗುರು ಉಡಗಿ, ಪ್ರದೀಪ ಶಿಂಧೆ, ಪಿಡಿಒ ರಾಮದಾಸ್, ಕಿರಿಯ ಅಭಿಯಂತರ ಶರಣಯ್ಯ ಹಿರೇಮಠ, ಶರಣಬಸಪ್ಪ ಡಮ್ಮ, ವೈಜನಾಥ ಪಾಟೀಲ, ಶಿವಲಿಂಗಪ್ಪ ಗಡ್ಡದ, ಶಿವಶರಣಪ್ಪ ಚೌಡೇಶ್ವರ ಮತ್ತಿತರರು ಇದ್ದರು.
ಸಾಲೇಗಾಂವ ರಸ್ತೆ ಕಾಮಗಾರಿ ಆರಂಭ
ತಾಲೂಕಿನ ಸಾಲೇಗಾಂವ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗೆ ಶಾಸಕ ಸುಭಾಷ ಗುತ್ತೇದಾರ ಚಾಲನೆ ನೀಡಿದರು. ಮಲ್ಲಿನಾಥ ಘಂಟೆ, ಶೇಖರ ವಾಡೆ, ಲಾಡಪ್ಪ ಬ್ಯಾಳೆ, ಮಹಿಬೂಬ ತೆಲಾಕುಣಿ, ಲೋಕೋಪಯೋಗಿ ಇಂಜಿನಿಯರ್ ಶರಣಯ್ಯ ಹಿರೇಮಠ ಇದ್ದರು.
ತೆಲಾಕುಣಿ ಗ್ರಾಮದಲ್ಲೂ ಬಸವೇಶ್ವರ ದೇವಸ್ಥಾನಕ್ಕೆ ತೆರಳುವ ಸಿಮೆಂಟ್ ರಸ್ತೆ ಕಾಮಗಾರಿಗೆ ಶಾಸಕರು ಪೂಜೆ ನೆರವೇರಿಸಿದರು. ಚಂದ್ರಶೇಖರಯ್ಯ ಹಿರೇಮಠ, ಗುರುಲಿಂಗಯ್ಯ ಸ್ವಾಮಿ, ಲಲಿತಾ ಮೋರೆ, ಸುರೇಶ, ಸುಭಾಷ ಪಾಟೀಲ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.