ಜೆಇ ಮಂಜುನಾಥ್ ವರ್ಗಾವಣೆಗೆ ಅಸಮಾಧಾನ
Team Udayavani, Jan 11, 2022, 12:07 PM IST
ಕುದೂರು: ಸೋಲೂರು ಹೋಬಳಿ ಬೆಸ್ಕಾಂ ಜೆಇ ಮಂಜುನಾಥ್‌ರನ್ನು ವರ್ಗಾವಣೆಮಾಡಿದ್ದು ಮರು ನಿಯೋಜಿಸುವಂತೆ ಆಗ್ರಹಿಸಿ ಹೋಬಳಿ ವ್ಯಾಪ್ತಿಯ ರೈತರು ಸೋಲೂರುಪ್ರವಾಸಿ ಮಂದಿರದಲ್ಲಿ ಶಾಸಕ ಡಾ.ಶ್ರೀನಿವಾಸ್ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಯುವ ಮುಖಂಡ ಎಸ್‌ಸಿಬಿಎಸ್ ಮಂಜುನಾಥ್ ಮಾತನಾಡಿ, ತಾಲೂಕಿನ ಬಾಣವಾಡಿ ಗ್ರಾಪಂ ವ್ಯಾಪ್ತಿಯ ಶಿರಗನಹಳ್ಳಿ ಗ್ರಾಮದಲ್ಲಿ ಜ.5ರಂದು ಟಿಸಿ ಅಳವಡಿಸುವ ವೇಳೆ ಕಾರ್ಮಿಕಹೊನ್ನರಾಜು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದು ಇದಕ್ಕೆ ಜೆಇ ಮಂಜುನಾಥ್ ಅವರೇ ಕಾರಣ ಎಂದು ಮೃತರ ಸಂಬಂಧಿಕರು ಕುದೂರು ಠಾಣೆಯಲ್ಲಿ ದೂರು ದಾಖಲಿಸಿರುವುದುಸರಿಯಲ್ಲ. ಗುತ್ತಿಗೆ ಪಡೆದ ಗುತ್ತಿಗೆದಾರ ಬೆಸ್ಕಾಂನಿಯಾಮವಳಿ ಕೈಗೊಳ್ಳದಿದ್ದರಿಂದ ಕಾರ್ಮಿಕ ಹೊನ್ನರಾಜು ಮೃತಪಟ್ಟಿದ್ದಾರೆಂದರು.
ಸೋಲೂರು ಗ್ರಾಪಂ ವ್ಯಾಪ್ತಿಯಲ್ಲಿ ಹೊಸ ಲೈನ್ ಎಳೆಯುವ ಕಾಮಗಾರಿಗೆ ಸಂಬಂಧಪಟ್ಟಂತೆ 2 ಲಕ್ಷ ಕಾಮಗಾರಿ ನಡೆಸಿ 8 ಲಕ್ಷ ರೂ.ನಷ್ಟು ಬಿಲ್ಲುಗಳಿಗೆ ಸಹಿ ಹಾಕುವಂತೆ ಜೆಇಮಂಜುನಾಥ್‌ರ ಮೇಲೆ ಬೆಸ್ಕಾಂ ಗುತ್ತಿಗೆದಾರ ಕೆಇಬಿ ರಾಜಣ್ಣ ಒತ್ತಡ ಹೇರಿದ್ದು ಇದಕ್ಕೆಮಣಿಯದ ಮಂಜುನಾಥ್ ಸಹಿ ಹಾಕದಕಾರಣ ರಾಜಕಿಯ ಪ್ರಭಾವ ಬೆರೆಸಿ ಇಂಥಹಕೆಲಸಕ್ಕೆ ಕೈ ಹಾಕಿದ್ದಾರೆ. ಇದರಿಂದ ನಿಷ್ಠಾವಂತಅಧಿಕಾರಿಗಳು ಕಾರ್ಯನಿರ್ವಹಿಸಲು ಭಯ ಬೀಳುತ್ತಿದ್ದಾರೆ.
ತಾಲ್ಲೂಕಿನಲ್ಲಿ ಗುತ್ತಿಗೆದಾರಕೆಇಬಿ ರಾಜಣ್ಣ ಸಾಕಷ್ಟು ಅಕ್ರಮ ನಡೆಸಿದ್ದು ಈಬಗ್ಗೆ ಸಮಗ್ರ ತನಿಖೆ ನೆಡೆಸುವಂತೆ ಇಂಧನಸಚಿವರಲ್ಲಿ ಮನವಿ ಮಾಡುವುದಾಗಿ ತಿಳಿಸಿದರು. ನೆಲಮಂಗಲ ಶಾಸಕ ಡಾ.ಶ್ರೀನಿವಾಸ್‌ಮೂರ್ತಿ ಮಾತನಾಡಿ, ಬೆಸ್ಕಾಂ ಜೆಇ ಮಂಜು ನಾಥ್ ಸೋಲೂರು ಹೋಬಳಿಯಲ್ಲಿ ಉತ್ತಮ ಕೆಲಸ ನಿರ್ವಹಿಸಿರುವ ಬಗ್ಗೆ ಜನಭಿಪ್ರಾಯಸಂಗ್ರಹಿಸಿದ್ದೇನೆ. ಕೆಲವರ ಷಡ್ಯಂತ್ರದಿಂದಕನಕಪುರ ಅರಳಮಾವನಹಳ್ಳಿ ಬೆಸ್ಕಾಂ ಕಚೇರಿಗೆ ವರ್ಗಾವಣೆ ಮಾಡಿರುವುದು ಸರಿಯಲ್ಲ. ಇನ್ನೊಂದು ತಿಂಗಳ ಒಳಗೆ ಮೊದಲಿದ್ದ ಸ್ಥಳಕ್ಕೆ ಮರು ನಿಯೋಜಿಸಲಾಗುವುದು. ಕೆಲ ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡದೆಬಿಲ್ಲು ಪಡೆದಿರುವ ಬಗ್ಗೆ ಸಾಕಷ್ಟು ಉದಾಹರಣೆಇದ್ದು ಈ ಬಗ್ಗೆ ತನಿಖೆ ನೆಡೆಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.
ಸೂಕ್ತ ಕ್ರಮ: ಮಾಗಡಿ ಬೆಸ್ಕಾಂ ಇಇ ಮಂಜುನಾಥ್ ಪ್ರತಿಕ್ರಿಯಿಸಿ, ಶಿರಗನಹಳ್ಳಿ ಗ್ರಾಮ ದಲ್ಲಿ ಜ.5 ರಂದು ಟಿಸಿ ಅಳವಡಿಸುವ ವೇಳೆಕಾರ್ಮಿಕ ಹೊನ್ನರಾಜು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಬಗ್ಗೆ ಕೂಡಲೇ ತನಿಖೆ ನಡೆಸಿಹೋಬಳಿ ಜನರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಎಸ್.ಸಿ.ಬಿ.ಎಸ್.ಶಿವರುದ್ರಯ್ಯ,ನಾಜಿಯಾಖಾನಂ, ಜವಾಹರ್ ತಾಪಂ ಮಾಜಿಸದಸ್ಯ ಸುಗುಣ ಕಾಮರಾಜು, ಮೃತ್ಯಂಜಯ,ಎಪಿಎಂಸಿ ಜಿಲ್ಲಾ ಉಪಾಧ್ಯಕ್ಷ ಗೋಪಾಲ್, ಸದಸ್ಯ ಎಚ್.ಪಿ.ರಾಘವೇಂದ್ರ, ಗಂಗರಾಜು, ಮಾಜಿ ಅಧ್ಯಕ್ಷ ಚನ್ನಗಂಗಯ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.