ಕೇಪ್‌ಟೌನ್ ಟೆಸ್ಟ್ : ಭಾರತ ಸಾಧಾರಣ ಮೊತ್ತ
ಭಾರತ 223 ಆಲೌಟ್ ಕೊಹ್ಲಿ 79 ರಬಾಡ, ಜಾನ್ಸೆನ್ ಜಬರ್ದಸ್ತ್ ಬೌಲಿಂಗ್
Team Udayavani, Jan 11, 2022, 11:15 PM IST
ಕೇಪ್‌ಟೌನ್: ಮತ್ತೆ ಟಾಸ್ ವಿನ್, ಪುನಃ ಮೊದಲು ಬ್ಯಾಟಿಂಗ್ ಆಯ್ಕೆ, ದಕ್ಷಿಣ ಆಫ್ರಿಕಾ ವೇಗಿಗಳ ಘಾತಕ ದಾಳಿ, ಭಾರತದಿಂದ ಅದೇ ಇನ್ನೂರರ ಗಡಿಯ ಸಾಮಾನ್ಯ ಮೊತ್ತ, ನಿಂತು ಆಡಿದ ವಿರಾಟ್ ಕೊಹ್ಲಿಯ ಜವಾಬ್ದಾರಿಯುತ ಇನ್ನಿಂಗ್ಸ್…
ಮಂಗಳವಾರ ಕೇಪ್‌ಟೌನ್‌ನ “ನ್ಯೂಲ್ಯಾಂಡ್ಸ್’ನಲ್ಲಿ ಆರಂಭ ಗೊಂಡ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಕಿರುನೋಟವಿದು.
ಈ ಸರಣಿ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸಿ ಆತಿಥೇಯರಿಗೆ ಸವಾಲೊಡ್ಡುವ ಭಾರತದ ಯೋಜನೆ ಮೊದಲ ದಿನವೇ ವಿಫಲಗೊಂಡಿದೆ. ಭಾರತ 77.3 ಓವರ್‌ಗಳಲ್ಲಿ 223 ರನ್ನಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಇದರಲ್ಲಿ ನಾಯಕ ವಿರಾಟ್ ಕೊಹ್ಲಿಯ ಪಾಲೇ 79 ರನ್. ಉಳಿದವರಲ್ಲಿ ಚೇತೇಶ್ವರ್ ಪೂಜಾರ ಒಂದಿಷ್ಟು ಹೋರಾಟ ನಡೆಸಿ 43 ರನ್ ಮಾಡಿದರು. ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡವರು ರಿಷಭ್ ಪಂತ್ (27). ಉಳಿದವರೆಲ್ಲರ ಬ್ಯಾಟಿಂಗ್ ವೈಫಲ್ಯ ಗಮನಿಸಿದಾಗ ವಿರಾಟ್ ಕೊಹ್ಲಿಯ ಪುನರಾಗಮನ ಟೀಮ್ ಇಂಡಿಯಾ ಪಾಲಿಗೆ ಅದೆಷ್ಟು ಪ್ರಯೋಜನಕಾರಿ ಆಯಿತು ಎಂಬುದು ತಿಳಿಯುತ್ತದೆ.
ದಕ್ಷಿಣ ಆಫ್ರಿಕಾ ಒಂದಕ್ಕೆ 17
ಭಾರತ ತಿರುಗೇಟು ನೀಡಲು ಸಜ್ಜಾಗಿದ್ದು, ಬಿಗ್ ವಿಕೆಟ್ ಒಂದನ್ನು ಬುಟ್ಟಿಗೆ ಹಾಕಿಕೊಂಡಿದೆ. ಅಪಾಯಕಾರಿ ಆಟಗಾರ, ನಾಯಕ ಡೀನ್ ಎಲ್ಗರ್ (3) ಅವರನ್ನು ಕಳೆದುಕೊಂಡಿರುವ ದಕ್ಷಿಣ ಆಫ್ರಿಕಾ 17 ರನ್ ಮಾಡಿದೆ. ಈ ವಿಕೆಟ್ ಬುಮ್ರಾ ಪಾಲಾಯಿತು. ಮಾರ್ಕ್‌ರಮ್ 8 ಮತ್ತು ನೈಟ್ ವಾಚ್‌ಮನ್ ಕೇಶವ್ ಮಹಾರಾಜ್ 6 ರನ್ ಮಾಡಿ ಆಡುತ್ತಿದ್ದಾರೆ. ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದರಷ್ಟೇ ಭಾರತಕ್ಕೆ ಇಲ್ಲಿ ಲಾಭವಾಗಲಿದೆ.
ಕೊಹ್ಲಿ ಎಚ್ಚರಿಕೆಯ ಆಟ
ಒಂದೆಡೆ ವಿಕೆಟ್ ಉರುಳುತ್ತಿದ್ದುರಿಂದ ಹಾಗೂ ಕೇಪ್‌ಟೌನ್ ಟ್ರ್ಯಾಕ್ ಬ್ಯಾಟಿಂಗಿಗೆ ಅಷ್ಟೇನೂ ಸಹಕರಿಸದಿದ್ದುದನ್ನು ಮನಗಂಡ ವಿರಾಟ್ ಕೊಹ್ಲಿ ಅತ್ಯಂತ ಎಚ್ಚರಿಕೆಯ ಬ್ಯಾಟಿಂಗಿಗೆ ಮುಂದಾದರು. ಭರ್ತಿ 201 ಎಸೆತಗಳನ್ನು ನಿಭಾಯಿಸಿ ತಮ್ಮ ನಾಯಕತ್ವದ ಇನ್ನಿಂಗ್ಸ್ ಕಟ್ಟಿದರು. ಇದರಲ್ಲಿ 12 ಫೋರ್ ಹಾಗೂ ಒಂದು ಸಿಕ್ಸರ್ ಸೇರಿತ್ತು.
ಕೆ.ಎಲ್. ರಾಹುಲ್ (12) ಮತ್ತು ಮಾಯಾಂಕ್ ಅಗರ್ವಾಲ್ (15) 33 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡಾಗ ಭಾರತದ ಮೇಲೆ ಒತ್ತಡ ಬಿತ್ತು. ಈ ಹಂತದಲ್ಲಿ ಪೂಜಾರ-ಕೊಹ್ಲಿ ಸೇರಿಕೊಂಡು ಲಂಚ್ ತನಕ ಇನ್ನಿಂಗ್ಸ್ ಆಧರಿಸಿ ನಿಂತರು. ಭಾರತದ ಸ್ಕೋರ್ 2ಕ್ಕೆ 75 ರನ್ ಆಗಿತ್ತು.
ರನ್ 95ಕ್ಕೆ ಏರಿದಾಗ ಪೂಜಾರ ವಿಕೆಟ್ ಉರುಳಿತು. 77 ಎಸೆತ ಎದುರಿಸಿದ ಅವರು 7 ಬೌಂಡರಿ ಹೊಡೆದರು. ಪೂಜಾರ-ಕೊಹ್ಲಿ 3ನೇ ವಿಕೆಟಿಗೆ 62 ರನ್ ಒಟ್ಟುಗೂಡಿಸಿದ್ದೇ ಅತೀ ದೊಡ್ಡ ಜತೆಯಾಟ. ಅಜಿಂಕ್ಯ ರಹಾನೆ ಮತ್ತೊಮ್ಮೆ ಕೈಕೊಟ್ಟರು. ಅವರ ಗಳಿಕೆ ಬರೀ 9 ರನ್. ಟೀ ವೇಳೆ ಭಾರತ 4ಕ್ಕೆ 141 ರನ್ ಮಾಡಿತ್ತು. ಆಗಲೂ ಕೊಹ್ಲಿ ಕ್ರೀಸಿಗೆ ಅಂಟಿಕೊಂಡು ನಿಂತಿದ್ದರು. ಜತೆಗೆ ಪಂತ್ ಇದ್ದರು.
56 ರನ್ನಿಗೆ ಬಿತ್ತು 6 ವಿಕೆಟ್
ಅಂತಿಮ ಅವಧಿಯಲ್ಲಿ ಆಫ್ರಿಕನ್ ಬೌಲರ್‌ಗಳ ಆಕ್ರಮಣ ಇನ್ನಷ್ಟು ತೀವ್ರಗೊಂಡಿತು. ಕೊಹ್ಲಿ ಸೇರಿದಂತೆ ಭಾರತದ ಉಳಿದ ಆರೂ ವಿಕೆಟ್ ಉರುಳಿತು. ಪಂತ್ 50 ಎಸೆತ ಎದುರಿಸಿ ನಿಂತರು. 4 ಬೌಂಡರಿ ನೆರವಿನಿಂದ 27 ರನ್ ಮಾಡಿದರು. ಅಶ್ವಿನ್ (2), ಠಾಕೂರ್ (12) ಬೇಗನೇ ವಾಪಸಾದರೆ, ಬುಮ್ರಾ ಖಾತೆಯನ್ನೇ ತೆರೆಯಲಿಲ್ಲ. ಕೊಹ್ಲಿ 9ನೇ ವಿಕೆಟ್ ರೂಪದಲ್ಲಿ ವಾಪಸಾ ದರು. 56 ರನ್ ಅಂತರದಲ್ಲಿ ಭಾರತದ ಕೊನೆಯ 6 ವಿಕೆಟ್ ಉರುಳಿತು.
ಉಮೇಶ್‌ಗೆ ಅವಕಾಶ
ಗಾಯಾಳು ಮೊಹಮ್ಮದ್ ಸಿರಾಜ್ ಸ್ಥಾನಕ್ಕೆ ಇಶಾಂತ್ ಶರ್ಮ ಬರಬಹುದೆಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಈ ಸ್ಥಾನ ಉಮೇಶ್ ಯಾದವ್ ಪಾಲಾಯಿತು. ಹಾಗೆಯೇ ಕ್ಯಾಪ್ಟನ್ ಕೊಹ್ಲಿಗಾಗಿ ನಿರೀಕ್ಷೆಯಂತೆ ಹನುಮ ವಿಹಾರಿ ಜಾಗ ಬಿಟ್ಟರು. ದಕ್ಷಿಣ ಆಫ್ರಿಕಾ ತಂಡದಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.
ಇದನ್ನೂ ಓದಿ:ಗೂಗಲ್ ಸಂಸ್ಥೆಯ ಜಿ-ಮೇಲ್ ಆ್ಯಪ್ ಸಾವಿರ ಕೋಟಿ ಡೌನ್‌ಲೋಡ್!
ಸ್ಕೋರ್ ಪಟ್ಟಿ
ಭಾರತ
ಕೆ.ಎಲ್. ರಾಹುಲ್ ಸಿ ವೆರೇಯ್ನ ಬಿ ಒಲಿವರ್ 12
ಅಗರ್ವಾಲ್ ಸಿ ಮಾರ್ಕ್‌ರಮ್ ಬಿ ರಬಾಡ 15
ಚೇತೇಶ್ವರ್ ಪೂಜಾರ ಸಿ ವೆರೇಯ್ನ ಬಿ ಜಾನ್ಸೆನ್ 43
ವಿರಾಟ್ ಕೊಹ್ಲಿ ಸಿ ವೆರೇಯ್ನ ಬಿ ರಬಾಡ 79
ಅಜಿಂಕ್ಯ ರಹಾನೆ ಸಿ ವೆರೇಯ್ನ ಬಿ ರಬಾಡ 9
ರಿಷಭ್ ಪಂತ್ ಸಿ ಪೀಟರ್‌ಸನ್ ಬಿ ಜಾನ್ಸೆನ್ 27
ಆರ್. ಅಶ್ವಿನ್ ಸಿ ವೆರೇಯ್ನ ಬಿ ಜಾನ್ಸೆನ್ 2
ಶಾರ್ದೂಲ್ ಠಾಕೂರ್ ಸಿ ಪೀಟರ್‌ಸನ್ ಬಿ ಕೇಶವ್ ಬಿ 12
ಜಸ್‌ಪ್ರೀತ್ ಬುಮ್ರಾ ಸಿ ಎಲ್ಗರ್ ಬಿ ರಬಾಡ 0
ಉಮೇಶ್ ಯಾದವ್ ಔಟಾಗದೆ 4
ಮೊಹಮ್ಮದ್ ಶಮಿ ಸಿ ಬವುಮ ಬಿ ಎನ್‌ಗಿಡಿ 7
ಇತರ 13
ಒಟ್ಟು (ಆಲೌಟ್) 223
ವಿಕೆಟ್ ಪತನ:1-31, 2-33, 3-95, 4-116, 5-167, 6-175, 7-205, 8-210, 9-211.
ಬೌಲಿಂಗ್;
ಕಾಗಿಸೊ ರಬಾಡ 22-4-73-4
ಡ್ನೂನ್ ಒಲಿವರ್ 18-5-42-1
ಮಾರ್ಕೊ ಜಾನ್ಸೆನ್ 18-6-55-3
ಲುಂಗಿ ಎನ್‌ಗಿಡಿ 14.3-7-33-1
ಕೇಶವ್ ಮಹಾರಾಜ್ 5-2-14-1
ದಕ್ಷಿಣ ಆಫ್ರಿಕಾ
ಡೀನ್ ಎಲ್ಗರ್ ಸಿ ಪೂಜಾರ ಬಿ ಬುಮ್ರಾ 3
ಮಾರ್ಕ್‌ರಮ್ ಬ್ಯಾಟಿಂಗ್ 8
ಮಹಾರಾಜ್ ಬ್ಯಾಟಿಂಗ್ 6
ಇತರ 0
ಒಟ್ಟು (ಒಂದು ವಿಕೆಟಿಗೆ) 17
ವಿಕೆಟ್ ಪತನ:1-10.
ಬೌಲಿಂಗ್;
ಜಸ್‌ಪ್ರೀತ್ ಬುಮ್ರಾ 4-4-0-1
ಉಮೇಶ್ ಯಾದವ್ 2-0-10-0
ಮೊಹಮ್ಮದ್ ಶಮಿ 2-0-7-0
ಎಕ್ಸ್‌ಟ್ರಾ ಇನ್ನಿಂಗ್ಸ್
– ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ಅತ್ಯಧಿಕ ಟೆಸ್ಟ್ ರನ್ ಗಳಿಸಿದ ಭಾರತೀಯ ಆಟಗಾರರ ಯಾದಿಯಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದರು. 13 ರನ್ ಗಳಿಸಿದ ವೇಳೆ ಅವರು ರಾಹುಲ್ ದ್ರಾವಿಡ್ ಗಳಿಸಿದ 624 ರನ್ ದಾಖಲೆಯನ್ನು ಮೀರಿ ನಿಂತರು. ಇದು ದಕ್ಷಿಣ ಆಫ್ರಿಕಾದಲ್ಲಿ ಕೊಹ್ಲಿ ಆಡುತ್ತಿರುವ 7ನೇ ಟೆಸ್ಟ್. ದ್ರಾವಿಡ್ 11 ಪಂದ್ಯಗಳನ್ನಾಡಿದ್ದರು. 15 ಟೆಸ್ಟ್‌ಗಳಿಂದ 1,161 ರನ್ ಪೇರಿಸಿದ ಸಚಿನ್ ತೆಂಡುಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.
-ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 12 ಟೆಸ್ಟ್‌ಗಳಲ್ಲಿ 10 ಸಲ ಟಾಸ್ ಗೆದ್ದರು. ಉಳಿದ ವಿವಿಧ ತಂಡಗಳ ವಿರುದ್ಧ 56 ಟೆಸ್ rಗಳಲ್ಲಿ ಕೊಹ್ಲಿ ಟಾಸ್ ಜಯಿಸಿದ್ದು 21 ಸಲ ಮಾತ್ರ!
-ಕೊಹ್ಲಿ ಜನವರಿ 2020ರ ಬಳಿಕ 26 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 2ನೇ ಸಿಕ್ಸರ್ ಹೊಡೆದರು.
-ಕೊಹ್ಲಿ 158 ಎಸೆತಗಳಿಂದ ಅರ್ಧ ಶತಕ ಹೊಡೆದರು. ಇದು ಟೆಸ್ಟ್ ಪಂದ್ಯಗಳಲ್ಲಿ ಅವರ ನಿಧಾನ ಗತಿಯ 2ನೇ ಅರ್ಧ ಶತಕ. ಇಂಗ್ಲೆಂಡ್ ಎದುರಿನ 2012-13ರ ನಾಗ್ಪುರ ಟೆಸ್ಟ್‌ನಲ್ಲಿ 50 ರನ್ನಿಗೆ 171 ಎಸೆತ ಎದುರಿಸಿದ್ದರು.
-ಚೇತೇಶ್ವರ್ ಪೂಜಾರ ಟೆಸ್ಟ್ ಪಂದ್ಯಗಳ ಸತತ 13 “ಮೊದಲ ಇನ್ನಿಂಗ್ಸ್’ಗಳಲ್ಲಿ ಅರ್ಧ ಶತಕ ಹೊಡೆಯಲು ವಿಫಲರಾದರು.
-ವಿರಾಟ್ ಕೊಹ್ಲಿ 2020ರ ಡಿಸೆಂಬರ್‌ನಲ್ಲಿ ಆಡಲಾದ ಅಡಿಲೇಡ್ ಟೆಸ್ಟ್ ಬಳಿಕ ಸರ್ವಾಧಿಕ ವೈಯಕ್ತಿಕ ರನ್ ಹೊಡೆದರು. ಅಂದು 74 ರನ್ ಮಾಡಿದ್ದರು.
-ರಿಷಭ್ ಪಂತ್ ಅವರನ್ನು ಔಟ್ ಮಾಡಿದ ಕೇಶವ್ ಮಹಾರಾಜ್ ಈ ಸರಣಿಯಲ್ಲಿ ಮೊದಲ ವಿಕೆಟ್ ಕೆಡವಿದರು. ಇದು ಕಳೆದ 5 ತವರಿನ ಟೆಸ್ಟ್‌ಗಳಲ್ಲಿ ಅವರಿಗೆ ಒಲಿದ ಮೊದಲ ವಿಕೆಟ್ ಕೂಡ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.