ಕೋವಿಡ್ ಆತಂಕದ ನಡುವೆ: ಶೀತ, ಜ್ವರ, ಗಂಟಲು ನೋವು ಭೀತಿ!
Team Udayavani, Jan 12, 2022, 5:24 PM IST
ಮಹಾನಗರ: ಕೊರೊನಾ ತೀವ್ರತೆ ಹೆಚ್ಚಾಗುತ್ತಿದ್ದಂತೆ ಇದೀಗ ನಗರ ದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಸಾರ್ವಜನಿಕರಲ್ಲಿ ಸದ್ಯ ಶೀತ, ಜ್ವರ, ಗಂಟಲ ನೋವು ಬಾಧೆ ಕಾಣಿಸಿಕೊಳ್ಳುತ್ತಿದ್ದು, ಈ ರೋಗದ ಕುರಿತು ವೈದ್ಯರ ಬಳಿ ಬರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ.
ಚಳಿ ಸಹಿತ ಹವಾಮಾನ ವೈಪರೀತ್ಯದ ಪರಿಣಾಮ ಜನವರಿ, ಫೆಬ್ರವರಿ ತಿಂಗಳಿನಲ್ಲಿ ಸಾಮಾನ್ಯವಾಗಿ ಈ ರೀತಿಯ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತದೆ. ಆದರೆ, ಈ ಬಾರಿ ಈ ರೋಗ ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತಿದೆ. ಶೀತ, ಜ್ವರ, ಗಂಟಲ ನೋವು ಸಹಿತ ಯಾವುದೇ ರೋಗಕ್ಕೆ ಒಳಗಾದರೆ ಸಾರ್ವಜನಿಕರು ಕೂಡಲೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಪಡೆದುಕೊಳ್ಳಬೇಕಿದೆ. ಯಾವುದೇ ಕಾರಣಕ್ಕೆ ಮನೆ ಮದ್ದು ಸಹಿತ ಔಷಧಕ್ಕೆಂದು ದಿನವ್ಯಯ ಮಾಡಿದರೆ ರೋಗ ಮತ್ತಷ್ಟು ಗಂಭೀರತೆ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.
ರೋಗದ ಲಕ್ಷಣ ಕಂಡುಬಂದ ತತ್‌ಕ್ಷಣ ವೈದ್ಯರ ಸಲಹೆ ಪಡೆದರೆ ರೋಗವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿದೆ. ನಿರ್ಲಕ್ಷé ಮಾಡದೇ ವೈದ್ಯರ ಸಲಹೆಯಂತೆ ಸೂಕ್ತ ಔಷಧ ಪಡೆದುಕೊಳ್ಳಬೇಕು. ಕೆಮ್ಮಿದಾಗ ಹಳದಿ ಕಫ ಹೋಗು ವುದು, ಶೀತದಿಂದ ಹಳದಿ ಸಿಂಬುಳ ಬಂದಲ್ಲಿ ಬ್ಯಾಕ್ಟೀರಿ ಯಲ್ ಇನೆ#ಕ್ಷನ್ ಖಚಿತ ವಾಗುತ್ತದೆ. ಆಗ ಆ್ಯಂಟಿ ಬಯೋಟಿಕ್ ಔಷಧ ಅಗತ್ಯ ವಾಗಿರುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಒಂದು ವೇಳೆ ಶೀತ-ಜ್ವರ ಬಂದರೆ ಅದು ಸಾಂಕ್ರಾಮಿಕ ರೋಗವೂ ಆಗಿರಬಹುದು ಅಥವಾ ಕೊರೊನಾವೂ ಇರಬಹುದು. ಹೀಗಿರುವಾಗ, ಇದೀಗ ಸಾಮಾನ್ಯವಾಗಿ ಕಾಣಿಸುವ ಶೀತ-ಜ್ವರ ಕೂಡ ಕೊರೊನಾ ನಿಯಂತ್ರಣಕ್ಕೆ ತರುವಲ್ಲಿ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜ್ವರ ಬಂದರೆ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಒಂದುವೇಳೆ ಯಾವುದೇ ಜ್ವರ ಬಂದರೂ ಮೆಡಿಕಲ್‌ಗಳಿಂದ ಮಾತ್ರೆ ತೆಗೆದುಕೊಳ್ಳದೆ ತತ್‌ಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ವೈದ್ಯರ ಸಲಹೆ ಮೇರೆಗೇ ಮುಂದುವರೆಯಬೇಕು.
ಮುನ್ನೆಚ್ಚರಿಕೆ ಅಗತ್ಯ
ಸಾರ್ವಜನಿಕರು ಕುದಿಸಿ ಆರಿಸಿದ ಉಗುರು ಬೆಚ್ಚಗಿನ ನೀರನ್ನೇ ಕುಡಿಯಬೇಕು. ಜ್ವರ ಬಾಧಿಸಿದ ಯಾರೂ ಕೂಡ ತಣ್ಣೀರನ್ನು ಕುಡಿಯಲೇಬಾರದು. ಜ್ವರ ಕಡಿಮೆಯಾಗುವವರೆಗೆ ತಲೆ ಸ್ನಾನ ಮಾಡದಿರುವುದೇ ಉತ್ತಮ. ನಿತ್ರಾಣ ಇಲ್ಲದಂತಾಗಲು ಸರಿಯಾದ ರೀತಿಯಲ್ಲಿ ಆಹಾರ ತೆಗೆದುಕೊಳ್ಳಬೇಕು. ತಂಪು ಪಾನೀಯ ಸೇವಿಸದಿರುವುದೇ ಉತ್ತಮ ಎನ್ನುತ್ತಾರೆ ವೈದ್ಯರು.
ನಿರ್ಲಕ್ಷಿಸಬೇಡಿ
ಕೆಲ ದಿನಗಳಿಂದ ಹೆಚ್ಚಿನ ಮಂದಿ ಶೀತ, ಜ್ವರ, ಗಂಟಲು ನೋವು ಸಮ ಸ್ಯೆಗೆ ತುತ್ತಾಗುತ್ತಿದೆ. ಚಳಿಗಾಲದಲ್ಲಿ ಸಾಮಾನ್ಯ ವಾಗಿ ಬ್ಯಾಕ್ಟೀರಿಯ ತೀವ್ರತೆ ಹೆಚ್ಚಾಗಿ ಈ ರೀತಿಯ ಕಾಯಿಲೆಗೆ ತುತ್ತಾಗುತ್ತಾರೆ. ಆದರೆ ಈ ಬಾರಿ ಸಾಂಕ್ರಾಮಿಕ ರೋಗದ ತೀವ್ರತೆ ಹೆಚ್ಚಿದೆ. ಜನ ಸಾಮಾನ್ಯರು ಯಾವುದೇ ರೋಗವನ್ನು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಬೇಕು..
-ಡಾ| ಸುರೇಶ್ ನೆಗಳಗುಳಿ,
ಆಯುರ್ವೇದ, ಅಲೋಪತಿ ತಜ್ಞರು
ಸ್ವಯಂ ಪಾಲನೆಯಿಂದ ನಿಯಂತ್ರಣ
ಮಲೇರಿಯಾ, ಡೆಂಗ್ಯೂ ಸಹಿತ ಸಾಂಕ್ರಾಮಿಕ ರೋಗಗಳ ಬಗ್ಗೆ ಪ್ರತಿಯೊಬ್ಬರು ಜಾಗರೂಕರಾಗಬೇಕಾದ ಆವಶ್ಯಕತೆ ಇದೆ. 2020ಕ್ಕೆ ಹೋಲಿಸಿದರೆ 2021ರಲ್ಲಿ ಮಲೇರಿಯಾ ಪ್ರಮಾಣ ಕಡಿಮೆಯಾಗಿದೆ. ಆದರೂ, ಜಾಗರೂಕತೆ ಅಗತ್ಯ. ಡೆಂಗ್ಯೂ ಹರಡುವ ಲಾರ್ವಾ ಉತ್ಪತ್ತಿಯಾಗುವುದೇ ನಿಂತಿರುವ ಶುದ್ಧ ನೀರಿನಲ್ಲಿ. ಮನೆ ಸುತ್ತಮುತ್ತ ನೀರು ನಿಲ್ಲಿಸದಂತೆ ಆರೋಗ್ಯ ಇಲಾಖೆ ಆಗಾಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಲೇ ಇದೆ. ಜನ ಸ್ವಯಂ ಎಚ್ಚರಿಕೆ ವಹಿಸಿಕೊಂಡು ಇದನ್ನು ಪಾಲನೆ ಮಾಡಬೇಕು. ಹಾಗಿದ್ದರೆ ಮಾತ್ರ ರೋಗ ನಿಯಂತ್ರಣ ಸಾಧ್ಯವಾಗುತ್ತದೆ.
-ಡಾ| ನವೀನ್‌ಚಂದ್ರ ಕುಲಾಲ್,
ಜಿಲ್ಲಾ ರೋಹವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.