ನೋಕಿಯಾದಿಂದ ಹೊಸ ಇಯರ್ ಬಡ್ ಬಿಡುಗಡೆ : ಬೆಲೆ ಎಷ್ಟು ಗೊತ್ತಾ?
Team Udayavani, Jan 12, 2022, 7:56 PM IST
ನವದೆಹಲಿ: ನೋಕಿಯಾ ಫೋನ್ ತಯಾರಿಕಾ ಕಂಪೆನಿ ಎಚ್‌ಎಂಡಿ ಗ್ಲೋಬಲ್, ಭಾರತದಲ್ಲಿ ತನ್ನ ಆಡಿಯೋ ಶ್ರೇಣಿಯನ್ನು ಬಲಪಡಿಸಲು ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಎಚ್-205 ಮತ್ತು ವೈರ್ಡ್ ಸಹಿತವಾದ ಬಡ್ಸ್ ಡಬ್ಲ್ಯುಬಿ-101 ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಪ್ರೀಮಿಯಂ ವಿನ್ಯಾಸದ ನೋಕಿಯಾ ಲೈಟ್ ಇಯರ್‌ಬಡ್ಸ್ ಮತ್ತು ವೈರ್ಡ್ ಇಯರ್ ಬಡ್‍ಗಳೂ ನೋಕಿಯಾ ಡಾಟ್‌ಕಾಂ, ರಿಟೇಲ್ ಮಳಿಗೆಗಳು ಇ-ಕಾಮರ್ಸ್ ತಾಣಗಳಲ್ಲಿ ದೊರಕುತ್ತವೆ.
ಎಚ್‌ಎಂಡಿ ಗ್ಲೋಬಲ್‌ನ ಉಪಾಧ್ಯಕ್ಷ ಸನ್ಮೀತ್ ಸಿಂಗ್ ಕೊಚ್ಚರ್ ಮಾತನಾಡಿ, ನೋಕಿಯಾ ಉತ್ಪನ್ನಗಳನ್ನು ವಿವಿಧ ವಿಭಾಗಗಳಲ್ಲಿ ಬಲಪಡಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಆಡಿಯೋ ಮಾರುಕಟ್ಟೆ ಬೆಳೆಯುತ್ತಿದೆ. ಭಾರತವು ಈಗಾಗಲೇ ಟಿಡಬ್ಲ್ಯುಎಸ್ ಆಡಿಯೋದಲ್ಲಿ ಜಗತ್ತಿನ 5 ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. 2022ರಲ್ಲಿ ಈ ವಿಭಾಗದಲ್ಲಿ ಸಾಕಷ್ಟು ಬೆಳವಣಿಗೆಗಳನ್ನು ನಾವು ನಿರೀಕ್ಷಿಸುತ್ತೇವೆ. ಕಳೆದ ವರ್ಷ ನಾವು ಭಾರತದಲ್ಲಿ ಬಿಡುಗಡೆ ಮಾಡಿದ ಆಡಿಯೊ ಪರಿಕರಗಳಿಗೆ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ಈ ವಿಭಾಗದಲ್ಲಿನ ನಮ್ಮ ಕೊಡುಗೆಗಳನ್ನು ಮತ್ತಷ್ಟು ಹೆಚ್ಚಿಸಲು ಈ ಎರಡು ಹೊಸ ಉತ್ಪನ್ನಗಳನ್ನು ಪರಿಚಯಿಸುವುದರೊಂದಿಗೆ ನಾವು ಹೊಸ ವರ್ಷವನ್ನು ಪ್ರಾರಂಭಿಸುತ್ತಿದ್ದೇವೆ. ವರ್ಕ್ ಫ್ರಂ ಹೋಂ, ಇ-ಕಲಿಕೆ ಮತ್ತು ಒಟಿಟಿ ವೀಕ್ಷಣೆಯ ಪ್ರಮುಖ ಪ್ರವೃತ್ತಿಗಳು ವೈಯಕ್ತಿಕ ಶ್ರವಣ ಸಾಧನಗಳ ಬೇಡಿಕೆಯನ್ನು ಹೆಚ್ಚಿಸಿವೆ. ನಮ್ಮ ವಿಶಾಲ ಶ್ರೇಣಿಯ ಶ್ರವಣ ಪರಿಕರಗಳೊಂದಿಗೆ ಈ ಬೇಡಿಕೆಯನ್ನು ಪೂರೈಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದರು.
ನೋಕಿಯಾ ಲೈಟ್ ಇಯರ್ ಬಡ್ಸ್ ಬಿಎಚ್-205 ಈ ವಿಭಾಗದಲ್ಲಿನ ಮೊದಲ ಕೈಗೆಟುಕುವ ಪ್ರೀಮಿಯಂ ಇಯರ್‌ಬಡ್‌ಗಳಾಗಿವೆ. ಇವು 6 ಎಂಎಂ ಆಡಿಯೊ ಡ್ರೆವರ್‌ಗಳ ನೆರವಿನಿಂದ ಸ್ಟುಡಿಯೊ-ಟ್ಯೂನ್ ಮಾಡಿದ ಧ್ವನಿಯ ಗುಣಮಟ್ಟವನ್ನು ನೀಡುತ್ತವೆ. ಇದು ಪ್ರತಿ ಬಡ್‌ನಲ್ಲಿ ಎರಡು 40 ಎಂಎಎಚ್ ಬ್ಯಾಟರಿಗಳ ನೆರವಿನಿಂದ 36 ಗಂಟೆಗಳ ಪ್ಲೇಟೈಮ್ ಅನ್ನು ಒದಗಿಸುತ್ತದೆ (ಒಂದು ಬಾರಿಯ ಚಾರ್ಜ್‌ನಲ್ಲಿ 6 ಗಂಟೆಗಳ ಕಾಲ ಬಳಕೆ) ಮತ್ತು ಚಾರ್ಜಿಂಗ್ ಕೇಸ್‌ನಲ್ಲಿ 400 ಎಂಎಎಚ್ ಬ್ಯಾಟರಿಯೊಂದಿಗೆ ಹೆಚ್ಚುವರಿ 30 ಗಂಟೆಗಳ ಕಾಲ ಬಳಸಬಹುದಾಗಿದೆ.
ಇದನ್ನೂ ಓದಿ : ಮಲೈಕಾ ಜತೆಗಿನ ಬ್ರೇಕ್ ಅಪ್ ವದಂತಿ ತಳ್ಳಿಹಾಕಿದ ಅರ್ಜುನ್ ಕಪೂರ್
ಬೆಲೆ ಮತ್ತು ಲಭ್ಯತೆ
ನೋಕಿಯಾ ಲೈಟ್ ಇಯರ್‌ಬಡ್ಸ್ ಕಪ್ಪು ಬಣ್ಣದಲ್ಲಿ ಲಭ್ಯವಿರುತ್ತದೆ. ಇದರ ಬೆಲೆ ರೂ 2,799.
ನೋಕಿಯಾ ವೈರ್ಡ್ ಬಡ್ಸ್ – ಕಪ್ಪು, ಬಿಳಿ, ನೀಲಿ ಮತ್ತು ಕೆಂಪು ಸೇರಿದಂತೆ ನಾಲ್ಕು ಬಣ್ಣಗಳಲ್ಲಿ ಲಭ್ಯವಿದ್ದು, ಇದರ ಬೆಲೆ ರೂ. 299
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.