ಕೋವಿಡ್: ಆಸ್ಪತ್ರೆ ದಾಖಲಾತಿ ಕಡಿಮೆ ! ಹೋಂ ಐಸೋಲೇಶನ್‌ನಲ್ಲಿ ಶೇ. 93 ಸೋಂಕಿತರು
Team Udayavani, Jan 13, 2022, 7:40 AM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದರೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಮಾತ್ರ ಅತ್ಯಂತ ಕಡಿಮೆ ಎಂಬುದು ಸಮಾಧಾನಕರ ಅಂಶ!
ಮೂರನೇ ಅಲೆಯಲ್ಲಿ ಸೌಮ್ಯ ಮತ್ತು ಲಕ್ಷಣ ರಹಿತ ಪ್ರಕರಣಗಳೇ ಹೆಚ್ಚಾಗಿರುವುದರಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಶೇ. 93ರಷ್ಟಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 6 ಸಾವಿರ (ಜ.11ರ ವರೆಗೆ) ಮಾತ್ರ ಇದೆ.
ರಾಜ್ಯದಲ್ಲಿ 2021ರ ಡಿ. 31ರಿಂದ 2022ರ ಜ. 11ರ ವರೆಗೆ ಒಟ್ಟು 62,691 ಮಂದಿಗೆ ಕೊರೊನಾ ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇ. 10.30ಕ್ಕೆ ಏರಿದೆ. ಮರಣ ಪ್ರಮಾಣ ಶೇ. 0.3ರಷ್ಟಿದೆ. ರಾಜ್ಯಾದ್ಯಂತ 4,301 ಮಂದಿಗೆ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಅಂಕಿಅಂಶಗಳು ಮೂರನೇ ಅಲೆಯ ತೀವ್ರತೆ ಕಡಿಮೆ ಎನ್ನುತ್ತಿವೆ.
ಇದನ್ನೂ ಓದಿ:ಪಾದಯಾತ್ರೆ: ಹೈಕೋರ್ಟ್ ಆದೇಶದಂತೆ ನಡೆದುಕೊಳ್ಳುತ್ತೇವೆ: ಸಿದ್ದರಾಮಯ್ಯ
58,390 ಹೋಂ ಐಸೋಲೇಶನ್
ಕಳೆದ 12 ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕು 8 ಪಟ್ಟು ವೇಗದಲ್ಲಿ ಏರಿಕೆಯಾಗುತ್ತಿದೆ. ಆದರೆ ಸೋಂಕಿನಿಂದ ಆರೋಗ್ಯದ ಮೇಲೆ ದುಷ್ಪರಿಣಾಮದ ಪ್ರಮಾಣ ತುಂಬಾ ಕಡಿಮೆ.
2021ರ ಡಿ. 31ರಿಂದ ಜ. 11ರ ವರೆಗೆ ಶೇ. 93ರಷ್ಟು ಮಂದಿ ಹೋಂ ಐಸೋಲೇಶನ್, ಶೇ. 6ರಷ್ಟು ಆಸ್ಪತ್ರೆ, ಶೇ. 1ರಷ್ಟು ಮಂದಿ ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 62,691 ಸಕ್ರಿಯ ಪ್ರಕರಣಗಳಲ್ಲಿ 58,390 ಮಂದಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಸುಮಾರು 5 ಸಾವಿರ ಮಂದಿ ಆಸ್ಪತ್ರೆಯಲ್ಲಿ ಮತ್ತು ಸುಮಾರು 1,000 ಮಂದಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.