ಮಕ್ಕಳ ಕಾಡುತ್ತಿರುವ ಶ್ವಾಸಕೋಶದ ಸೋಂಕು! ರೋಗ ಲಕ್ಷಣಗಳ ಕುರಿತು ಎಚ್ಚರಿಕೆ ವಹಿಸಿ

Team Udayavani, Jan 13, 2022, 1:31 PM IST

ಮಕ್ಕಳ ಕಾಡುತ್ತಿರುವ ಶ್ವಾಸಕೋಶದ ಸೋಂಕು! ರೋಗ ಲಕ್ಷಣಗಳ ಕುರಿತು ಎಚ್ಚರಿಕೆ ವಹಿಸಿ

ಬೆಂಗಳೂರು: ಕೊರೊನಾ ಮೂರನೇ ಅಲೆ ಮಕ್ಕಳಿಗೆ ಮಾರಕವಾಗಲಿದೆ ಎನ್ನುವ ಆತಂಕದ  ನಡುವೆ ಜಿಲ್ಲೆಯಲ್ಲಿ ಜ್ವರದ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವ
ಮಕ್ಕಳಲ್ಲಿ ಶ್ವಾಸಕೋಶದ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಭಾದಿಸುತ್ತಿರುವುದು ಹೆತ್ತವರಲ್ಲಿ ಆತಂಕ ಮೂಡಿಸುತ್ತಿದೆ.

ಹದಿನೈದು ದಿನಗಳಿಂದ ನಗರದಲ್ಲಿ 1-10 ವರ್ಷದೊಳಗಿನ ಮಕ್ಕಳು ಆರ್‌ವಿಎಸ್‌ ಸಂಬಂಧಿಸಿದ ಸೋಂಕು ಬಳಲುತ್ತಿರುವವರು ಶ್ವಾಸಕೋಶದ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ
ಮಕ್ಕಳಲ್ಲಿ ಜ್ವರ, ಕೆಮ್ಮು, ಶೀತ, ನೆಗಡಿಯ ರೂಪದಲ್ಲಿ ಇದು ಕಂಡು ಬರುತ್ತದೆ. ಸಾಮಾನ್ಯವಾಗಿ ಆರ್‌ವಿಎಸ್‌ ಈ ಸಮಯದಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕಾಯಿಲೆ ಉಲ್ಬಣಿಸಿದರೆ ವೈರಲ್‌ ನ್ಯುಮೋನಿಯಾಗೆ ತಿರುಗಲಿದೆ. ಪ್ರಸ್ತುತ ಬೆಂಗಳೂರು ನಗರಾದ್ಯಂತ ಕ್ಲಿನಿಕ್‌ ಹಾಗೂ ಆಸ್ಪತ್ರೆಗೆ ಬರುವ 10 ಮಕ್ಕಳಲ್ಲಿ 7 ಮಕ್ಕಳು ಆರ್‌ ವಿಎಸ್‌ ಸೋಂಕಿಗೆ ತುತ್ತಾಗುತ್ತಿದ್ದಾರೆ.

ನಗರದಲ್ಲಿ ಕೆಲ ಆರ್‌ಎಸ್‌ವಿ ಸಂಬಂಧಿತ ಬಹುತೇಕ ಮಕ್ಕಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದಾಗ ಆರ್‌ಟಿಪಿಸಿಆರ್‌ ವರದಿ ನೆಗೆಟಿವ್‌ ಬಂದಿದೆ. ಆದರೂ ಇದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಆರ್‌ಎಸ್‌ವಿನಲ್ಲಿ  ಉಸಿರಾಟ ಸಮಸ್ಯೆ ಹೆಚ್ಚಾದರೆ ಮಕ್ಕಳ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಹೆತ್ತವರು ಸಾಕಷ್ಟು ಜಾಗರೂಕರಾಗಿಬೇಕು.

ಆರ್‌ಎಸ್‌ವಿ ಲಕ್ಷಣಗಳಿರುವ ಮಗುವಿಗೆ ಕೂಡ ಚಿಕಿತ್ಸೆ ನೀಡಲು ಮುಂದಾಗ ಬೇಕು ಎಂದು ಮಕ್ಕಳ ತಜ್ಞರು ಮಾಹಿತಿ ನೀಡುತ್ತಾರೆ.

ಏನಿದು ಆರ್‌ಎಸ್‌ವಿ?: ಒಂದು ವರ್ಷ ಪ್ರಾಯದ ಮಕ್ಕಳಿಗೆ ಹೆಚ್ಚಾಗಿ ಬಾಧಿಸುವ Respiratory Syncytial Virus (ಆರ್‌ ಎಸ್‌ವಿ) ಸೋಂಕು. ಇದು ಉಸಿರಾಟದ ತೊಂದರೆಯಂತಹ ಲಕ್ಷಣಗಳನ್ನು ಹೊಂದಿದೆ. ಶ್ವಾಸಕೋಶದಲ್ಲಿ ಸಣ್ಣ ಶ್ವಾಸನಾಳದ ಉರಿಯೂತ ಹಾಗೂ ಮಕ್ಕಳಲ್ಲಿ ನ್ಯುಮೋನಿಯಾಕ್ಕೆ ಕಾರಣವಾಗುತ್ತದೆ. ಈ ಸೋಂಕಿನಿಂದ ಕಫ‌, ಶೀತ, ನೆಗಡಿ ಮಕ್ಕಳನ್ನು ಕಾಡುತ್ತದೆ. ಆಕ್ಸಿಜನ್‌ ಸಮಸ್ಯೆ ಉಂಟಾದರೆ ಮಕ್ಕಳ ಜೀವ ಹಾನಿ ಕೂಡ ಆಗಬಹುದು.

ಹೇಗೆ ಹರಡುತ್ತದೆ?: ಸೋಂಕಿತ ಮಗುವಿನ ಉಸಿರಾಟದ ಹನಿಗಳು ಗಾಳಿಯ ಮೂಲಕ ಸುಲಭವಾಗಿ ಹರಡಲು ಸಾಧ್ಯವಾಗುತ್ತದೆ. ಸೋಂಕಿತ ವ್ಯಕ್ತಿಯ ಕೈಗಳನ್ನು ಮುಟ್ಟುವ ಸಮಯ ನೇರ ಸಂಪರ್ಕದ ಮೂಲಕ ವೈರಸ್‌ ಇತರರಿಗೆ ಹರಡುತ್ತದೆ.

ಎಚ್ಚರಿಕೆ ಅಗತ್ಯ: ವಾತಾವರಣದ ಕಾರಣದಿಂದ ಕಂಡು ಬರುವ ಈ ರೋಗ ಲಕ್ಷಣಗಳ ಕುರಿತು ಎಚ್ಚರಿಕೆ ವಹಿಸಬೇಕು. ಈ ರೋಗ ಬಾರದಂತೆ ತಡೆಯುವುದು ಕಷ್ಟ. ಆದರೆ ಹೆಚ್ಚು ಜನನಿಬಿಡ ಪ್ರದೇಶಗಳಿಗೆ ಮಕ್ಕಳನ್ನು ಕರೆದೊಯ್ಯದಿರುವುದು, ಮಕ್ಕಳ ಜತೆಗೆ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುವುದು, ಕೋವಿಡ್‌ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಪಾಡು ವುದು, ಮಾಸ್ಕ್ ಧರಿಸುವುದು, ಕಾಯಿಸಿ ಆರಿಸಿದ ನೀರು ಕುಡಿಸುವುದು, ಲಘು ಕಷಾಯ, ವೈದ್ಯರ ಸಲಹೆಯಿಂದ ಮೂಗಿನ ಡ್ರಾಫ್ ಬಳಸುವುದು ಇವೆಲ್ಲವನ್ನೂ ಮುಂಜಾಗ್ರತ ಕ್ರಮದಿಂದ
ನಿರ್ವಹಿಸಬಹುದಾಗಿದೆ. ಮಕ್ಕಳಿಗೆ ಫ್ರಿಡ್ಜ್ ನಲ್ಲಿಟ್ಟಿರುವ ಆಹಾರ, ಜಂಕ್‌ ಫ‌ುಡ್‌ ಕೊಡಬೇಡಿ. ಬಿಸಿ ನೀರು, ತಾಜಾ, ಪೌಷ್ಟಿಕಾಂಶ ಆಹಾರ ನೀಡಿ. ಶೀತ, ಕಫ‌, ಜ್ವರ ಲಕ್ಷಣಗಳಿದ್ದರೆ ಕೂಡಲೇ
ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಪ್ರಸ್ತುತ ಆಸ್ಪತ್ರೆಗೆ ಬರುತ್ತಿರುವ ಮಕ್ಕಳಲ್ಲಿ ಆರ್‌ವಿಎಸ್‌ ಪ್ರಕರಣಗಳು ವರದಿಯಾ ಗುತ್ತಿದೆ. ಮಕ್ಕಳಲ್ಲಿ ಆಯಾಸ, ಎದೆ ನೋವು, ಸೌಮ್ಯವಾದ ಶೀತ ಹಾಗೂ ಜ್ವರ, ತಲೆನೋವು, ಸೀನುವಿಕೆ ಲಕ್ಷಣ ಕಂಡು ಬರುತ್ತಿದೆ. ಈ ಲಕ್ಷಣ ಕಂಡು ಬಂದರೆ ಪೋಷಕರು ಮಕ್ಕಳನ್ನು ತಜ್ಞ ವೈದರಿಗೆ ತೋರಿಸುವ ಮೂಲಕ ಚಿಕಿತ್ಸೆ ಪಡೆದುಕೊಳ್ಳ ಬೇಕು. ಆ ಮೂಲಕ ಮುಂದಾಗುವ
ಅನಾಹುತವನ್ನು ತಪ್ಪಿಸ ಬಹುದಾಗಿದೆ.
– ಡಾ.ದಿವ್ಯಾರಾಜ್‌ ಟಿ.ಜೆ., ಮಕ್ಕಳ- ನವಜಾತ ಶಾಸ್ತ್ರ ತಜ್ಞೆ, ಸ್ಪೆಷಲಿಸ್ಟ್‌ ಆಸ್ಪತ್ರೆ ಬೆಂಗಳೂರು.

ಟಾಪ್ ನ್ಯೂಸ್

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್‌ ಇದ್ರು: ಫೋಟೋ ಸಾಕ್ಷ್ಯ ಲಭ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.