ವೀರಶೈವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಣೆ
Team Udayavani, Jan 13, 2022, 7:33 PM IST
ಬಳ್ಳಾರಿ: ನಗರದ ವೀರಶೈವ ಕಾಲೇಜಿನಲ್ಲಿ ಸ್ವಾಮಿವಿವೇಕಾನಂದರ 159ನೇ ಜಯಂತಿ ಪ್ರಯುಕ್ತರಾಷ್ಟ್ರೀಯ ಯುವದಿನ ಕಾರ್ಯಕ್ರಮವನ್ನು ಬುಧವಾರಹಮ್ಮಿಕೊಳ್ಳಲಾಯಿತು.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಮತ್ತು ಯೂತ್ ರೆಡ್‌ಕ್ರಾಸ್ ಸಹಯೋಗದಲ್ಲಿಆಯೋಜಿಸಲಾಗಿದ್ದ ಯುವದಿನ ಕಾರ್ಯಕ್ರಮವನ್ನುಪಾಲಿಕೆ ಸದಸ್ಯರು, ಗಣ್ಯರು ಉದ್ಘಾಟಿಸಿದರು. ಬಳಿಕಮಾತನಾಡಿದ ಮುಖ್ಯಅತಿಥಿ ರಾಮಕೃಷ್ಣ ವಿವೇಕಾನಂದಆಶ್ರಮ ಸಮಿತಿ ಸದಸ್ಯ ರಾಜಶೇಖರ ಅವರು, ಸ್ವಾಮಿವಿವೇಕಾನಂದರು ಜೀವನದಲ್ಲಿ ಅಳವಡಿಸಿಕೊಂಡಿರುವಮೌಲ್ಯಗಳನ್ನು ಮತ್ತು ಸಮಾಜಕ್ಕೆ ಅವರ ಕೊಡುಗೆಗಳನ್ನುವಿವರಿಸಿದರು.
ಸ್ವಾಮಿ ವಿವೇಕಾನಂದರ ತೀಕ್ಷ್ಣವಾದಮಾತುಗಳು ಭಾರತದ ಯುವಕರ ಮನಮುಟ್ಟುವಂತೆಮಾಡಿದ ಕೆಲವು ಘಟನೆಗಳನ್ನು ವಿದ್ಯಾರ್ಥಿಗಳ ಜೊತೆಗೆಹಂಚಿಕೊಂಡರು.ಮತ್ತೂಬ್ಬ ಅತಿಥಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿನಿರ್ದೇಶಕ ಶಾಕಿಬ್ ಅಹ್ಮದ್, ಯುವ ರೆಡ್‌ಕ್ರಾಸ್‌ಸಂಸ್ಥೆಗಳ ಸ್ಥಾಪನೆ ಮತ್ತು ಉದ್ದೇಶಗಳನ್ನು ಈಡೇರಿಸಲುಎಲ್ಲ ಕಾಲೇಜುಗಳ ಕಾರ್ಯ ನಿರ್ವಹಣೆಯಲ್ಲಿಹೊಂದಾಣಿಕೆಯನ್ನು, ರೆಡ್‌ಕ್ರಾಸ್ ಸಂಸ್ಥೆ ಭಾವಿಸಿದಂತೆಇಂದಿನ ತೀವ್ರ ಮತ್ತು ತುರ್ತು ಅವಶ್ಯಕತೆಗಳಿಗಾಗಿಕಾಲೇಜು ವಿದ್ಯಾರ್ಥಿಗಳು ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯಅಧ್ಯಕ್ಷ ದರೂರ್ ಶಾಂತನಗೌಡ ಮಾತನಾಡಿ,ಸ್ವಾಮಿ ವಿವೇಕಾನಂದರ ಸಾರ್ಥಕ ಜೀವನದ ಬಗ್ಗೆಉದಾಹರಣೆಗಳೊಂದಿಗೆ ತಿಳಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿತುಂಬಿದರು. ಈ ಕಾರ್ಯಕ್ರಮಕ್ಕೆ ಬಳ್ಳಾರಿ ಮಹಾನಗರಪಾಲಿಕೆ ಸದಸ್ಯರಾದ ಡಾ| ಕೆ.ಎಸ್.ಅಶೋಕ್ ಕುಮಾರ್,ಹನುಮಂತ ಗುಡಿಗಂಟಿ, ಮುಲ್ಲಂಗಿ ನಂದೀಶ್, ಹಿರಿಯಉಪನ್ಯಾಸಕ ಡಬ್ಲೂ. ಶರಣಪ್ಪ, ಡಾ| ಡಿ. ನಾಗೇಶ ಶಾಸ್ತ್ರಿ,ಡಾ| ಜಿ. ಮನೋಹರ, ಜಿ.ಮಲ್ಲನಗೌಡ, ಡಾ| ಟಿ.ಆರ್.ರವಿಕುಮಾರ್ ನಾಯ್ಕ, ಕಾರ್ಯಕ್ರಮ ಅಧಿ ಕಾರಿಶರಣ್ ಕುಮಾರ್ ಇದ್ದರು. ಸುಜಾತ ಕಾರ್ಯಕ್ರಮನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.