ಮಕರ ಸಂಕ್ರಾಂತಿ: ಧನಾತ್ಮಕ ಪರಿವರ್ತನೆಗೆ ನಾಂದಿ


Team Udayavani, Jan 14, 2022, 6:10 AM IST

Untitled-1

ಸಂಕ್ರಮಣ ಎಂದರೆ ಸೂರ್ಯ ದೇವರ ಹಬ್ಬ. ಒಂದು ರಾಶಿಯಿಂದ ಇನ್ನೊಂದು ರಾಶಿಯನ್ನು ಶ್ರೀ ಸೂರ್ಯ ದೇವರು ಪ್ರವೇಶಿಸುವ ಅಥವಾ ಹೆಜ್ಜೆ ಇಡುವ ಶುಭಾವಸರಕ್ಕೆ ಸಂಕ್ರಾತಿ ಅಥವಾ ಸಂಕ್ರಮಣ ಎನ್ನುತ್ತಾರೆ. ಸಂಸ್ಕೃತದಲ್ಲಿ ಕ್ರಮಣ ಎಂದರೆ ಹೆಜ್ಜೆ ಇಡುವಿಕೆ ಎಂದರ್ಥ, ಇದೇ ಸಂಕ್ರಮಣ.

ಹಿಂದೂ ಧರ್ಮದಲ್ಲಿ ಸೂರ್ಯೋಪಾಸನೆಗೆ ವಿಶಿಷ್ಟ ವಾದ ಸ್ಥಾನಮಾನವಿದೆ. ಶ್ರೀ ಸೂರ್ಯದೇವರು ಬ್ರಹ್ಮಾಂಡದ ಅಚಿಂತ್ಯಶಕ್ತಿಗಳ ಪ್ರಮುಖ ಸಂಚಾ ಲಕನಾಗಿ, ಇಡೀ ವಿಶ್ವವನ್ನೇ ಮುನ್ನಡೆಸುವವ. ಸೂರ್ಯ ನಿಲ್ಲದೆ ಈ ಜಗತ್ತು ಇಲ್ಲ. ಸೂರ್ಯ ಕಿರಣಗಳು ಎಲ್ಲ ಪ್ರಾಣಿಗಳ ಶಕ್ತಿಯಾಗಿದೆ. ಆದಿತ್ಯೋ ಬ್ರಹ್ಮ ಎಂದು ಛಾಂದೋಗ್ಯೋಪನಿಷತ್ತು ಸಾರುತ್ತದೆ. ಗಾಯತ್ರೀ ಮಂತ್ರ ಸೂರ್ಯದೇವರ ತೇಜಃ ಶಕ್ತಿಯಾಗಿದೆ.

ಇಂತಹ ಶ್ರೀ ಸೂರ್ಯ ದೇವರಿಂದ ಹೊರಸೂಸ ಲ್ಪಡುವ ಕಿರಣಗಳಿಗೆ ಔಷಧೀಯ ಗುಣಗಳಿವೆ. ಭಗವಂತನಿಗೆ ನಾವು ಮಾಡುವ ಹೋಮ-ಹವನಗಳಲ್ಲಿ ನೀಡುವ ಆಹುತಿಯನ್ನು ಪರಮಾತ್ಮನಿಗೆ ತಲುಪಿಸುವ ಕಾರ್ಯವನ್ನು ಶ್ರೀ ಸೂರ್ಯ ದೇವರು ಮಾಡುತ್ತಾರೆ.

ಇಂತಹ ಮಹಾ ಶಕ್ತಿ ಸ್ವರೂಪಿಯಾದ ಶ್ರೀ ಸೂರ್ಯ ನಾರಾಯಣನ ಚಲನೆಯ ಹಬ್ಬವೇ ಈ ಸಂಕ್ರಮಣ. ರಾಶಿಗಳು ಹನ್ನೆರಡು, ಸೌರಮಾಸಗಳೂ ಕೂಡ ಹನ್ನೆರಡು. ಹೀಗಾಗಿ ವರುಷಕ್ಕೆ ಹನ್ನೆರಡು ಸಂಕ್ರಾಂತಿಗಳು ಬರುತ್ತವೆ. ಆದರೆ ಈ ಹನ್ನೆರಡು ಸಂಕ್ರಾಂತಿಗಳಲ್ಲಿ ಎರಡು ಸಂಕ್ರಮಣಗಳಾದ ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಗೆ ಬಹಳ ಪ್ರಾಮುಖ್ಯವಿದೆ.

ಒಂದನೆಯದಾಗಿ ಸೂರ್ಯದೇವರು ಮಿಥುನ ರಾಶಿಯನ್ನು ಬಿಟ್ಟು ಕರ್ಕಾಟಕ ರಾಶಿಯ ಪ್ರವೇಶವನ್ನು ಕರ್ಕಾಟಕ ಸಂಕ್ರಮಣ ಎಂದೂ ಎರಡನೆಯದಾಗಿ ಸೂರ್ಯ ದೇವರು ಧನುರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸುವುದಕ್ಕೆ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಕರ್ಕಾಟಕ ಸಂಕ್ರಾಂತಿ ದಕ್ಷಿಣಾಯನ ಸೂಚಿಸುತ್ತದೆ. ಈ ದಕ್ಷಿಣಾಯನವನ್ನು ಪಿತೃಯಾನ ಎನ್ನುತ್ತಾರೆ. ಅದೇ ಮಕರ ಸಂಕ್ರಾಂತಿ ಉತ್ತರಾಯಣವನ್ನು ಸೂಚಿಸುವುದು. ಹಾಗೆಯೇ ಈ ಉತ್ತರಾಯಣವನ್ನು ದೇವಯಾನ ಎನ್ನಲಾಗುತ್ತದೆ.

ವೇದಗಳು, ಭಗವದ್ಗೀತೆ ಹಾಗೂ ಮಹಾಭಾರತ ಗಳಲ್ಲಿ ದೇವಯಾನವನ್ನು ವಿಶೇಷವಾಗಿ ಕೊಂಡಾಡ ಲಾಗಿದೆ. ಈ ಮಕರ ಸಂಕ್ರಾಂತಿಯ ಪರ್ವಕಾಲದ ಉತ್ತರಾಯಣ ಪುಣ್ಯ ಕಾಲದಲ್ಲಿ ಸ್ವರ್ಗದ ಬಾಗಿಲು ತೆರೆಯುವುದು ವಿಶೇಷ. ಹಾಗಾಗಿಯೇ ಮಾನವರು ತಮ್ಮ ಬದುಕನ್ನು ಸುಂದರಗೊಳಿಸಿಕೊಂಡು, ಭಗವಂತ ನಲ್ಲಿ ಲೀನಗೊಳಿಸಲು ಇದು ಸರ್ವ ಶ್ರೇಷ್ಠ ಕಾಲವಾಗಿದೆ. ಭೀಷ್ಮಾಚಾರ್ಯರು ಶರಶಯೆÂಯಲ್ಲಿ ಮಲಗಿರುವಾಗ ದೇಹತ್ಯಾಗ ಮಾಡಲು ಉತ್ತರಾಯಣ ಕಾಲವನ್ನು ಆಯ್ಕೆ ಮಾಡಿಕೊಂಡು ಈ ಕಾಲದಲ್ಲಿಯೇ ದೇಹವನ್ನು ತ್ಯಾಗ ಮಾಡಿ ಸ್ವರ್ಗ ಸೇರಿದರು. ಉತ್ತರಾಯಣ ಕಾಲದಲ್ಲಿ ಮರಣ ಹೊಂದಿದವರು ಸ್ವರ್ಗ ಸೇರುತ್ತಾರೆ ಎನ್ನುವುದು ಜ್ಞಾನಿಗಳ ನುಡಿ.

ಸಂಕ್ರಮಣದ ವಿಶೇಷಗಳು :

ಹಿಂದೂಗಳ ಪರಮಪವಿತ್ರ ಹೊಸ ವರುಷ ಯುಗಾದಿ ಬೇವು-ಬೆಲ್ಲದ ಹಬ್ಬವಾದರೆ, ಸಂಕ್ರಮಣ ಎಳ್ಳು-ಬೆಲ್ಲದ ಹಬ್ಬ ಆಗಿರುವುದು ವಿಶೇಷ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು,ದೇಹದ ಎಲ್ಲ ಭಾಗಗಳಿಗೂ ಎಳ್ಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು. ತದನಂತರ ಶುದ್ಧವಾದ ಮಡಿಯಿಂದ, ದೇವರಿಗೆ ಎಳ್ಳೆಣ್ಣೆ ದೀಪ ಬೆಳಗಿಸಿ, ನಿತ್ಯಾನುಷ್ಠಾನ ಪೂರೈಸಿ, ಹೊಸ ಬಟ್ಟೆಗಳನ್ನು ಧರಿಸಿ, ಗುರು-ಹಿರಿಯರಿಗೆ ವಂದಿಸಬೇಕು. ಎಳ್ಳಿನ ಹೋಮ(ತಿಲ ಹೋಮ)ಮಾಡಿಸಿ, ಎಳ್ಳುದಾನ ನೀಡುವುದು ಈ ಹಬ್ಬದ ವಿಶೇಷತೆಯಾಗಿದೆ. ಎಳ್ಳು ಪಾಪನಾಶಕವಾದ್ದರಿಂದ ತಿಲ ಹೋಮ, ತಿಲ ದಾನ ಮಾನವನ ಇಹದ ಪಾಪ ನಾಶವಾಗಿ, ಪರದಲ್ಲಿ  ಮುಕ್ತಿ ಲಭಿಸಲಿದೆ. ದೇಹ ಬಲ ವೃದ್ಧಿಯಾಗಿ, ಆಯುರಾರೋಗ್ಯ ಲಭಿಸುತ್ತದೆ ಎಂಬ ನಂಬಿಕೆ.

ಮಕರ ಸಂಕ್ರಾಂತಿಯ ವೈಶಿಷ್ಟ್ಯಗಳು :

ಮಕರ  ಸಂಕ್ರಮಣದ ದಿನದಂದು  ಮನೆ-ಮನೆಗಳಿಗೆ ಹೋಗಿ ಎಳ್ಳು-ಬೆಲ್ಲ ನೀಡುವ ಸಂಪ್ರದಾಯವಿದೆ. ಇದನ್ನು ಎಳ್ಳು ಬೀರುವುದು ಎನ್ನುತ್ತಾರೆ. ಎಳ್ಳು- ಬೆಲ್ಲದ ಜತೆ ಒಣಕೊಬ್ಬರಿ, ಹುರಿಗಡಲೆ, ಕಬ್ಬಿನ ತುಂಡು,  ಸಕ್ಕರೆಯ ವೈವಿಧ್ಯಮಯ ಅಚ್ಚುಗಳು, ಹಣ್ಣುಗಳನ್ನು ನೀಡುತ್ತಾ ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತು ಗಳನ್ನಾಡೋಣ ಎಂದು ಪರಸ್ಪರ ಹೇಳಿಕೊಳ್ಳುವ ವಿಶಿಷ್ಟವಾದ ಪದ್ಧತಿ ಇದೆ. ಮಕರ ಸಂಕ್ರಾಂತಿಯಂದು ನದಿ ಸ್ನಾನ, ದೇವತೆಗಳು, ಪಿತೃಗಳಿಗೆ ತರ್ಪಣ, ಹೋಮ-ಹವನ, ದಾನ-ಧರ್ಮಗಳಿಗೆ ಅತ್ಯಂತ ಪುಣ್ಯ, ಪವಿತ್ರವಾದ ದಿನವಾಗಿದೆ. ಮಕರ ಸಂಕ್ರಾಂತಿ ಪರ್ವ ಕಾಲ ಅಂದರೆ ಈ ಉತ್ತರಾಯಣ ಕಾಲ ದೇವಾ ಲಯಗಳಲ್ಲಿ ದೇವರ ಪುನರ್‌ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶ, ನಾಗಾಲಯಗಳ ಪ್ರತಿಷ್ಠೆಯಂತಹ ಪೂಜೆ ಪುನಸ್ಕಾರಗಳು, ಉಪನಯನದಂತಹ ಶುಭ ಕಾರ್ಯಗಳಿಗೆ ಪ್ರಶಸ್ತವಾದುದಾಗಿದೆ. ಈ ಕಾಲ ದಲ್ಲಿ ಸೂರ್ಯ ದೇವರು ತನ್ನ ಪಥವನ್ನು ಉತ್ತರ ದಿಕ್ಕಿಗೆ ಬದಲಿಸುತ್ತಾರೆ. ಈ ಸುಂದರ ಕಾಲವನ್ನು ವಸಂತಮಾಸದ ಕಾಲ ಎನ್ನುತ್ತಾರೆ.

ವಿಶ್ವದ ಕಣ್ಣಾಗಿರುವ ಶ್ರೀ ಸೂರ್ಯದೇವರ ಕೃಪೆಗಾಗಿ ಸಮುದ್ರ ಸ್ನಾನ, ನದಿ, ಸರೋವರಗಳಲ್ಲಿ ಸ್ನಾನ ಮಾಡಿ ಸೂರ್ಯ ದೇವರಿಗೆ ತರ್ಪಣ ನೀಡಬೇಕು. ಆದಿತ್ಯ ಹೃದಯ ಹೋಮ, ಪಾರಾಯಣ ಮಾಡಿಸಿ, ಹಿರಣ್ಯದಾನ, ತಿಲ ದಾನ, ಗೋದಾನ ಇತ್ಯಾದಿ ದಾನ-ಧರ್ಮಗಳನ್ನು ಮಾಡಿದರೆ ಅತಿಶಯವಾದ ಪುಣ್ಯ ಪ್ರಾಪ್ತವಿದೆ.

ದೇಶದೆಲ್ಲೆಡೆ ಒಂದೇ ದಿನ ಸಂಕ್ರಾಂತಿ ಹಬ್ಬ ಆಚ ರಿಸುತ್ತಾರೆ. ಅದು ವೈವಿಧ್ಯಮಯ ಆಗಿರುತ್ತದೆ. ಆಯಾಯ ಪ್ರದೇಶ, ಸಮುದಾಯಗಳ ಸಂಪ್ರದಾಯ ಗಳಿಗನುಸಾರವಾಗಿ ವಿಭಿನ್ನ ಹೆಸರಿನಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಆಚರಣೆಯ ವಿಧಿವಿಧಾನಗಳು ಬೇರೆಬೇರೆಯಾದರೂ ಮಕರ ಸಂಕ್ರಾಂತಿ ಹಬ್ಬದ ಆಚರಣೆಯ ಹಿಂದಿನ ಉದ್ದೇಶ ಮಾತ್ರ ಸುಖ, ಸಮೃದ್ಧಿಯೇ ಆಗಿದೆ. ಕೆಲವೆಡೆ ಇದನ್ನು ಸುಗ್ಗಿಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ಜಾನುವಾರುಗಳಿಗೆ ವಿಶೇಷ ಪೂಜೆ, ಜಾನುವಾರುಗಳನ್ನು ಕಿಚ್ಚು ಹಾಯಿಸುವ ಮತ್ತು ಹೋರಿಗಳನ್ನು ಬೆದರಿಸುವುದು ಮತ್ತಿತರ ಆಚರಣೆ, ಸಂಪ್ರದಾಯಗಳೂ ಇವೆ.

ಪುರಾಣಗಳ ಪ್ರಕಾರ ಶ್ರೀ ರಾಮಚಂದ್ರ ಸ್ವಾಮಿ ರಾವಣಾಸುರನನ್ನು ಸಂಹರಿಸಿ, ಸೀತಾ ದೇವಿಯನ್ನು ಅಯೋಧ್ಯೆಗೆ ಕರೆದು ತಂದ ದಿನ ಈ ಮಕರ ಸಂಕ್ರಾಂತಿ ಎನ್ನಲಾಗಿದೆ. ಹಾಗಾಗಿ ಕೆಲವೆಡೆ ಶ್ರೀ ರಾಮ

ದೇವರಿಗೆ ವಿಶೇಷ ಅಲಂಕಾರ ಮಾಡಿ, ಪೂಜಿಸುವ ಸಂಪ್ರದಾಯವಿದೆ. ಸನಾತನ ಹಿಂದೂ ಧರ್ಮದ ಪ್ರತಿಯೊಂದೂ ಹಬ್ಬ, ಹರಿದಿನಗಳ ಆಚರಣೆ ಕೇವಲ ನಂಬಿಕೆಗೆ ಸೀಮಿತವಾಗಿರದೆ ಆಧ್ಯಾತ್ಮಿಕ, ನೈಸರ್ಗಿಕ ಮತ್ತು ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿದೆ. ಮಕರ ಸಂಕ್ರಾಂತಿ ಹಬ್ಬ ಇದಕ್ಕೊಂದು ಉತ್ತಮ ಉದಾಹರಣೆ. ಮಾನವ ಮತ್ತು ಪ್ರಕೃತಿ ನಡುವಣ ಸಂಬಂಧವನ್ನು ಮತ್ತಷ್ಟು ಸದೃಢಗೊಳಿಸುವ ಆಶಯದೊಂದಿಗೆ ಎಳ್ಳು-ಬೆಲ್ಲದ ಸವಿರುಚಿ ನಮ್ಮ ಜೀವನದುದ್ದಕ್ಕೂ ಮೇಳೈಸಲಿ ಎಂಬ ಉದಾತ್ತ ಚಿಂತನೆ ಈ ಹಬ್ಬದ ಆಚರಣೆ ಹಿಂದಿದೆ. ಶುಭಕಾರ್ಯಗಳಿಗೆ ಮುನ್ನುಡಿ ಬರೆಯುವ ಈ ಮಕರ ಸಂಕ್ರಾಂತಿ ಹಬ್ಬ ಸುಖ, ಸಮೃದ್ಧಿಯ ಜತೆಜತೆಯಲ್ಲಿ ನಮ್ಮೆಲ್ಲರಲ್ಲೂ ಧನಾತ್ಮಕ ಪರಿವರ್ತನೆಗೆ ನಾಂದಿ ಹಾಡಲಿ. ಶ್ರೀ ಸೂರ್ಯನಾರಾ ಯಣರು ಸಮಸ್ತ ಜೀವಿಗಳ ಬದುಕಿಗೆ ಆಧಾರ, ಮಕರಸಂಕ್ರಾಂತಿ-ಉತ್ತರಾಯಣ ಆರಂಭದ ಈ ದಿನದಂದು ಶ್ರೀ ಸೂರ್ಯದೇವರನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸಿ, ಸೂರ್ಯಾನುಗ್ರಹಕ್ಕೆ ಎಲ್ಲರೂ ಪಾತ್ರರಾಗೋಣ. ಲೋಕಾಃ ಸಮಸ್ತಾಃ  ಸುಖೀನೋ ಭವಂತು.

 

-ವೈ.ಎನ್‌.ವೆಂಕಟೇಶಮೂರ್ತಿ ಭಟ್ಟ,

ಕೋಟೇಶ್ವರ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.