ಗ್ಯಾಸ್ ಸಿಲೆಂಡರ್ ಎತ್ತಿ ಹಾಕಿ ಪತ್ನಿ ಕೊಲೆ
Team Udayavani, Jan 15, 2022, 12:13 PM IST
ಕಲಬುರಗಿ: ಪತ್ನಿ ತಲೆ ಮೇಲೆ ಪತಿಯೇ ಗ್ಯಾಸ್ ಸಿಲೆಂಡರ್ ಎತ್ತಿ ಹಾಕಿ ಧಾರುಣವಾಗಿ ಕೊಲೆ ಮಾಡಿದ ಘಟನೆ ನಗರದ ಕೋಟನೂರ ಜಿಡಿಎ ಬಡಾವಣೆ ಹತ್ತಿರದ ಕುಬೇರಾ ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ.
ದಿನಾಲು ಕುಡಿದು ಪತ್ನಿಯೊಂದಿಗೆ ಜಗಳ ತೆಗೆಯುತ್ತಿದ್ದ. ಗುರುವಾರ ರಾತ್ರಿ ಎಂದಿನಂತೆ ಪತ್ನಿಯೊಂದಿಗೆ ಜಗಳ ತೆಗೆದಿದ್ದಲ್ಲದೇ ಮಾತಿಗೆ-ಮಾತು ಬೆಳೆದು ಹೊಡೆದು ಮನೆಯಲ್ಲಿದ್ದ ಗ್ಯಾಸ್ ಸಿಲೆಂಡರ್ ತಲೆ ಮೇಲೆ ಎತ್ತಿ ಹಾಕಿ ಧಾರುಣವಾಗಿ ಕೊಲೆ ಮಾಡಿ ಮೂವರು ಮಕ್ಕಳೊಂದಿಗೆ ಪರಾರಿಯಾಗಿದ್ದಾನೆ.
ಆರತಿ ತಾರಾಸಿಂಗ್ ರಾಠೊಡ (28) ಮಹಿಳೆ ಕೊಲೆಯಾದ ಗೃಹಿಣಿ. ಈಕೆಯ ಪತಿ ತಾರಾಸಿಂಗನೇ ಕೊಲೆ ಮಾಡಿದ ವ್ಯಕ್ತಿ. ತಾರಾಸಿಂಗ್‌ನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಘಟನೆ ವಿವರ
ಚಾಲಕನಾಗಿರುವ ತಾರಾಸಿಂಗ್ ಶಾಲೆಯ ವಿದ್ಯಾರ್ಥಿಗಳನ್ನು ವ್ಯಾನ್‌ದಲ್ಲಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಕುಬೇರಾ ನಗರದಲ್ಲಿ ಮನೆ ಬಾಡಿಗೆ ಹಿಡಿದಿದ್ದ. ತವರು ಮನೆಯಿಂದ ಹಣ ತರುವಂತೆ ಪತ್ನಿಯನ್ನು ಆಗಾಗ್ಗೆ ಪೀಡಿಸುತ್ತಿದ್ದ. ಆರತಿ ತಂದೆ ಸರ್ಕಾರಿ ನೌಕರರಾಗಿದ್ದರಿಂದ ಬ್ಯಾಂಕ್‌ನಲ್ಲಿ ಸಾಲ ಪಡೆದು ಮಗಳಿಗೆ ಹೌಸಿಂಗ್ ಬೋರ್ಡ್‌ನಲ್ಲಿ ಮನೆ ಕೊಡಿಸಿದ್ದರು. ಆದರೆ ತಾರಾಸಿಂಗ್ ಮನೆ ಕೊಡಿಸಿದರೆ ಸಾಲದು, ಮನೆ ತನ್ನ ಹೆಸರಿಗೆ ಇರಬೇಕೆಂದು ಜಗಳ ತೆಗೆಯುತ್ತಿದ್ದ. ಇದೇ ವಿಷಯಕ್ಕೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.
ಗುರುವಾರ ರಾತ್ರಿ ಕಳೆದಿದ್ದರೆ ಶುಕ್ರವಾರ ದಿನ ಸಂಕ್ರಾಂತಿ ಹಬ್ಬಕ್ಕೆಂದು ಆರತಿ ತವರು ಮನೆಗೆ ಹೊರಡುವವಳಿದ್ದಳು. ಆದರೆ ಪತಿ ತಾರಾಸಿಂಗ್ ಪತ್ನಿಯನ್ನು ಕೊಲೆ ಮಾಡಿ ಮಕ್ಕಳೊಂದಿಗೆ ಪರಾರಿಯಾಗಿದ್ದಾನೆ. ಆರತಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಕೊಲೆ ಮಾಡಿರುವ ತಾರಾಸಿಂಗ್‌ಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸಿಪಿ ಜೆ.ಎಚ್. ಇನಾಂದಾರ, ಗುಲ್ಬರ್ಗ ವಿವಿ ಠಾಣೆಯ ಇನ್ಸಪೆಕ್ಟರ್ ಶಿವಾನಂದ ಗಾಣಿಗೇರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
MUST WATCH
ಹೊಸ ಸೇರ್ಪಡೆ
45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.