ವಸತಿ ಫಲಾನುಭವಿ ಆಯ್ಕೆಗೆ ಮಾರ್ಗಸೂಚಿ ಪಾಲಿಸಿ
Team Udayavani, Jan 15, 2022, 3:10 PM IST
ಯಾದಗಿರಿ: ಬಸವ, ಅಂಬೇಡ್ಕರ್ ವಸತಿ ಯೋಜನೆಯಡಿ ಪ್ರತಿ ಗ್ರಾಪಂಗೆ ನಿಗದಿಪಡಿಸಿದ ಗುರಿಗೆ ಅನುಗುಣವಾಗಿ ಗ್ರಾಮಸಭೆಗಳ ಮೂಲಕ ಅರ್ಹ ಫಲಾನುಭವಿಗಳ ಆಯ್ಕೆ ಮಾಡುವಾಗ ಸರಕಾರದ ವಸತಿ ಯೋಜನೆಯ ಮನೆ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ವಸತಿ ನೋಡಲ್ ಅಧಿಕಾರಿ ಎನ್. ಕೆ ಭಗಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ತಾಪಂ ಸಾಮರ್ಥ್ಯ ಸೌಧದಲ್ಲಿ ವಸತಿ ಯೋಜನೆಯಡಿ ಯಾದಗಿರಿ, ಗುರುಮಠಕಲ್ ತಾಲೂಕಿನ ಗ್ರಾಪಂಗಳಿಗೆ ನಿಗದಿತ ಗುರಿಗೆ ಅನುಗುಣವಾಗಿ ಫಲಾನುಭವಿಗಳ ಆಯ್ಕೆ ಮಾಡುವ ಪ್ರಕ್ರಿಯೆ ಕುರಿತು ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ವಸತಿ ಇಲಾಖೆ ಈಗಾಗಲೇ ಗ್ರಾಪಂಗಳಿಗೆ ವರ್ಗವಾರು ಎ ವರ್ಗ-50, ಬಿ ವರ್ಗ-40 ಹಾಗೂ ಸಿ ವರ್ಗ-30 ಗುರಿ ನಿಗದಿಪಡಿಸಿದೆ. ಆ.17-18ರಂದು ಎರಡು ದಿನಗಳಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಜ.20ರೊಳಗೆ ತಾಪಂಗೆ ವರದಿ ಸಲ್ಲಿಸಬೇಕು ಎಂದು ಹೇಳಿದರು.
ಯಾದಗಿರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೆ„ ಮಾತನಾಡಿ, ಸರಕಾರ 2021-22ನೇ ಸಾಲಿನಲ್ಲಿ 5 ಲಕ್ಷ ವಸತಿ ಮನೆಗಳ ನಿರ್ಮಾಣಕ್ಕೆ ಅವಕಾಶ ನೀಡಿ, ಯಾದಗಿರಿ ತಾಲೂಕಿನ 22 ಗ್ರಾಪಂಗಳಿಗೆ 910 ಹಾಗೂ ಗುರುಮಿಠಕಲ್ ತಾಲೂಕಿನ 18 ಗ್ರಾಪಂಗಳಿಗೆ 690 ವಸತಿ ಮನೆಗಳ ನಿರ್ಮಾಣದ ಗುರಿ ನೀಡಿದೆ ಎಂದ ಅವರು, ಸಂಬಂಧಪಟ್ಟ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅರ್ಹ ಫಲಾನುಭವಿಗಳನ್ನು ಗ್ರಾಮಸಭೆ ಮೂಲಕ ಆಯ್ಕೆ ಮಾಡಿ, ನಿಗದಿತ ಅವಧಿಯಲ್ಲಿ ಆಯ್ಕೆ ಪಟ್ಟಿಯ ವರದಿಯನ್ನು ತಾಲೂಕು ಪಂಚಾಯತಿಗೆ ನೀಡಬೇಕು ಎಂದು ತಿಳಿಸಿದರು.
ವಸತಿ ಯೋಜನೆಯ ಮನೆ ಮಾರ್ಗಸೂಚಿ ಪ್ರಕಾರ ಅರ್ಜಿದಾರರು ಕಡ್ಡಾಯವಾಗಿ ಮಹಿಳೆ ಆಗಿರಬೇಕು. ಈ ಮೊದಲು ಯಾವುದೇ ವಸತಿ ಯೋಜನೆಯ ಫಲಾನುಭವಿ ಆಗಿರಬಾರದು. ವಿಕಲಚೇತನರಿಗೆ ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದರು.
ಯಾದಗಿರಿ ತಾಪಂ ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಪವಾರ, ಖಲೀಲ್ ಅಹಮ್ಮದ್, ಗುರುಮಿಠಕಲ್ ತಾಪಂ ಸಹಾಯಕ ನಿರ್ದೇಶಕರಾದ ರಾಮಚಂದ್ರ ಬಸೂದೆ, ಮಲ್ಲಣ್ಣ, ತಾಪಂ ವಸತಿ ವಿಷಯ ನಿರ್ವಾಹಕ ಅನಸರ ಪಟೇಲ್, ತಾಲೂಕು ವಸತಿ ನೋಡಲ್ ಅಧಿಕಾರಿ ಮಲ್ಲಿಕಾರ್ಜುನ ರೆಡ್ಡಿ, ತಾಪಂ ಲೆಕ್ಕಾಧಿಕಾರಿ ಕಾಶಿನಾಥ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.