ಕಂಗನಾ ರಣಾವುತ್ ಕೆನ್ನೆಗಿಂತ ನಯವಾದ ರಸ್ತೆ ಮಾಡುತ್ತೇವೆಂದು ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ
Team Udayavani, Jan 15, 2022, 5:32 PM IST
1. ಯಡಿಯೂರಪ್ಪ ಬೇಲ್ ಮೇಲೆ ಆಚೆ ಇರುವುದಲ್ಲವೇ ? ಡಿ.ಕೆ.ಶಿವಕುಮಾರ್ ಪ್ರಶ್ನೆ
ಶಿವಕುಮಾರ್ ಅವರು ಬೇಲ್ ಮೂಲಕ ಆಚೆ ಇದ್ದಾರೆ ಎಂಬ ಸಿ.ಟಿ ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬೇಲ್ ಮೇಲೆ ಆಚೆ ಇರುವುದಲ್ಲವೇ ? ಅವರು ಹೇಗೆ ಇದ್ದಾರಂತೆ?’ ಅವರೂ ಬೇಲ್ ಮೇಲೆ ಆಚೆ ಇರುವುದಲ್ಲವೇ ಎಂದು ಪ್ರಶ್ನಿಸಿದರು.
2. ರಾಜ್ಯದ 18 ಲಕ್ಷ ವಸತಿ ರಹಿತರಿಗೆ ಸಂಕ್ರಾತಿ ಕೊಡುಗೆ ನೀಡಿದ ಮೋದಿ ಸರ್ಕಾರ
ರಾಜ್ಯದ ವಸತಿ ರಹಿತರಿಗೆ ಕೇಂದ್ರ ಸರಕಾರ ಸಂಕ್ರಾತಿ ಕೊಡುಗೆ ನೀಡಿದ್ದು, 18 ಲಕ್ಷ ವಸತಿ ರಹಿತರಿಗೆ ಸಿಹಿ ಸುದ್ದಿ ನೀಡಿದೆ. ಕೇಂದ್ರ ವಸತಿ ಇಲಾಖೆಯ “ಆವಾಸ್ ಪ್ಲಸ್’ಪೋರ್ಟಲ್ನಲ್ಲಿ ರಾಜ್ಯದ 18 ಲಕ್ಷ ಫಲಾನುಭವಿಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯ ಘಟಕದಿಂದ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ.
3. ನಾರಾಯಣ ಗುರುಗಳ ಚಿತ್ರದ ಟ್ಯಾಬ್ಲೋವನ್ನು ಕೇಂದ್ರ ತಿರಸ್ಕರಿಸಿದ್ದು ಅಜ್ಞಾನದ ಪರಮಾವಧಿ: HDK
ಪರಮಪೂಜ್ಯರಾದ ಬ್ರಹ್ಮರ್ಷಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿರುವುದು ಅತ್ಯಂತ ಖಂಡನೀಯ ಹಾಗೂ ನಮ್ಮ ನೆಲದ ನಂಬಿಕೆಗಳಿಗೆ ಮಾಡಿರುವ ಅಪಮಾನ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
4. ಕಂಗನಾ ರಣಾವತ್ ಕೆನ್ನೆಗಿಂತ ನಯವಾದ ರಸ್ತೆ ಮಾಡುತ್ತೇವೆ: ಕಾಂಗ್ರೆಸ್ ಶಾಸಕ
ಜಾರ್ಖಂಡ್ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, “ಜಂತಾರಾದಲ್ಲಿ 14 ವಿಶ್ವ ದರ್ಜೆಯ ರಸ್ತೆಗಳ ನಿರ್ಮಾಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕೆನ್ನೆಗಿಂತ ರಸ್ತೆಗಳು ನಯವಾಗಿರುತ್ತವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
5. ಭಾರತದಲ್ಲಿ 2,68,833 ಕೋವಿಡ್ ಪ್ರಕರಣಗಳು ಪತ್ತೆ, ಒಮಿಕ್ರಾನ್ ಸಂಖ್ಯೆ 6,041ಕ್ಕೆ ಏರಿಕೆ
ಭಾರತದಲ್ಲಿ ಕಳೆದ 24ಗಂಟೆಯಲ್ಲಿ 2,68,833 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಕೋವಿಡ್ 19 ಸೋಂಕಿನಿಂದ 402 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶಾದ್ಯಂತ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 4,85,752ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
6. ಮುಂಬಯಿ: ರೈಲ್ವೇಯಲ್ಲಿ ಅಪರಾಧ ಸಂಖ್ಯೆ ಹೆಚ್ಚಳ
ಕೊರೊನಾ ಮತ್ತು ಲಾಕ್ಡೌನ್ನಿಂದಾಗಿ 2020ರಲ್ಲಿ ಹೆಚ್ಚಿನ ಸಮಯ ಮುಚ್ಚಲಾಗಿದ್ದ ರೈಲು ಸೇವೆ, 2021ರಲ್ಲಿ ಪೂರ್ಣವಾಗಿ ಪುನರಾರಂಭವಾಗಿದ್ದರೂ, ರೈಲ್ವೇಯಲ್ಲಿ ಹತ್ಯೆ ಮತ್ತು ಅತ್ಯಾಚಾರದಂತಹ ಗಂಭೀರ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ರೈಲ್ವೇಯಲ್ಲಿ ಒಟ್ಟು 6,720 ಪ್ರಕರಣಗಳು ದಾಖಲಾಗಿವೆ.
7. ಚಿರಂಜೀವಿ-ರಾಮ್ ಚರಣ್ ಅಭಿನಯದ ‘ಆಚಾರ್ಯ’ ಬಿಡುಗಡೆ ಮುಂದೂಡಿಕೆ
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ ‘ಆಚಾರ್ಯ’ ಚಿತ್ರದ ಬಿಡುಗಡೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಫೆಬ್ರವರಿ 4ರಂದು ಆಚಾರ್ಯ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಆದರೆ ಇದೀಗ ಕೋವಿಡ್ ಹೆಚ್ಚುತ್ತಿರುವ ಕಾರಣದಿಂದ, ಉಳಿದ ಚಿತ್ರತಂಡಗಳಂತೆ ಚಿತ್ರ ಬಿಡುಗಡೆಯನ್ನು ಮುಂದೂಡಿಕೆ ಮಾಡಿದೆ. ಮೂರನೇ ಅಲೆ ಕಡಿಮೆಯಾದ ಬಳಿಕ, ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
8. ಸರಣಿ ಸೋಲು: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಐದನೇ ಸ್ಥಾನಕ್ಕಿಳಿದ ಟೀಂ ಇಂಡಿಯಾ
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ಬಳಿಕ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಕುಸಿತ ಕಂಡಿದೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಟೆಸ್ಟ್ ಚಾಂಪಿಯನ್ ಶಿಪ್ ಯಾಂಕಿಂಗ್ ನಲ್ಲಿ ಐದನೇ ಸ್ಥಾನಕ್ಕಿಳಿದಿದೆ. ಇದುವರೆಗೆ ಮೂರು ಸರಣಿಗಳಲ್ಲಿ ನಾಲ್ಕು ಪಂದ್ಯ ಗೆದ್ದಿರುವ ಭಾರತ ತಂಡ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ. ಎರಡು ಪಂದ್ಯಗಳು ಡ್ರಾ ಆಗಿದೆ. ಭಾರತ ಸದ್ಯ ಅತೀ ಹೆಚ್ಚು ಅಂದರೆ 53 ಅಂಕ ಹೊಂದಿದ್ದರೂ, ಗೆಲುವಿನ ಪ್ರತಿಶತ ಕಡಿಮೆ ಇರುವ ಕಾರಣ ಐದನೇ ಸ್ಥಾನದಲ್ಲಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..