ಕುವೆಂಪು ಕಾದಂಬರಿಗಳು ವಿಶ್ವದ ಸರ್ವಕಾಲಿಕ ಶ್ರೇಷ್ಠ ಕಾದಂಬರಿಗಳು: ಸಾಹಿತಿ ಜಿ.ಎಸ್.ವಡಗಾವಿ
Team Udayavani, Jan 15, 2022, 7:47 PM IST
ರಬಕವಿ-ಬನಹಟ್ಟಿ: ರಾಷ್ಟ್ರಕವಿ ಕುವೆಂಪು ರಚಿಸಿದ ಕಾನೂರು ಹೆಗ್ಗಡತಿ ಮತ್ತು ಮಲೆಗಳನ್ನು ಮದುಮಗಳು ವಿಶ್ವದ ಸರ್ವಕಾಲಿಕ ಶ್ರೇಷ್ಠ ಕಾದಂಬರಿಗಳಾಗಿವೆ. ಕಾನೂರು ಹೆಗ್ಗಡತಿ ಕನ್ನಡದ ಪ್ರಥಮ ಪ್ರಾದೇಶಿಕ ಕಾದಂಬರಿಯಾಗಿದೆ ಎಂದು ಸಾಹಿತಿ ಜಿ.ಎಸ್.ವಡಗಾವಿ ತಿಳಿಸಿದರು.
ಅವರು ಶುಕ್ರವಾರ ತಾಲ್ಲೂಕಿನ ರಾಮಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡ ಪುಸ್ತಕಾವಲೋಕನ ಕಾರ್ಯಕ್ರಮದಲ್ಲಿ ಕಾನೂರು ಹೆಗ್ಗಡತಿ ಕುರಿತು ಮಾತನಾಡಿದರು.
ಕಾದಂಬರಿಗಳನ್ನು ಅಂಗೈಯೊಳಗಿನ ರಂಗಭೂಮಿ ಎಂದು ಕರೆಯುತ್ತಾರೆ. ಕಾದಂಬರಿಗಳನ್ನು ತಾಳ್ಮೆಯಿಂದ ಓದಬೇಕು. ಪ್ರಕೃತಿಯ ಮುಂದೆ ಮಾನವ ಕುಬ್ಜಾನಾಗಿ ಕಾಣುತ್ತಾನೆ. ಪ್ರಕೃತಿಯ ಪ್ರಭಾವದಿಂದಾಗಿಯೇ ಕುವೆಂಪು ಅವರಲ್ಲಿಯ ಸಾಕಷ್ಟು ನಯ ವಿನಯತೆಯು ಕಂಡು ಬಂದಿದೆ. ಕುವೆಂಪು ಅವರ ಕಾದಂಬರಿಗಳು ಅನೇಕ ಪಕ್ಷಿ ಮತ್ತು ಪ್ರಾಣಿ ವಿಜ್ಞಾನಿಗಳಿಗೆ ಸಹಾಯಕವಾಗಿವೆ. ಕಾದಂಬರಿಗಳಲ್ಲಿ ಅಷ್ಟೊಂದು ಪ್ರಾಣಿ,ಪಕ್ಷಿಗಳ ಹೆಸರುಗಳನ್ನು ಅವರು ಉಲ್ಲೇಖಿಸುತ್ತಾರೆ. ಕಾದಂಬರಿಯ ಹೂವಯ್ಯ ಮತ್ತು ಕುವೆಂಪು ಅವರ ಮಧ್ಯದಲ್ಲಿ ಅನೇಕ ಸಾಮಿಪ್ಯಗಳಿವೆ ಎಂಬುದು ವಿಮರ್ಶಕರ ಮಾತುಗಳಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಕುವೆಂಪು ಸ್ವಾಭಿಮಾನಿಯಾಗಿದ್ದರು ಎಂದು ಜಿ.ಎಸ್.ವಡಗಾವಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಸಮಾನ ಮನಸ್ಕಗಳ ಜೊತೆಗೆ ಸಮಾಧಾನ ಮನಸ್ಕರರು ಬೇಕಾಗಿದ್ದಾರೆ. ಜಾತಿ, ಮೂಢ ನಂಬಿಕೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅವರ ಕವನಗಳು ನಮಗೆ ಪ್ರೇರಣೆಯಾಗಿವೆ. ಕುವೆಂಪು ಅವರ ಕೃತಿಗಳನ್ನು ಓದುವುದರ ಮೂಲಕ ನಾವು ನಮ್ಮ ಆತ್ಮಾವಲೋಕನ ಮಾಡಿಕೊಳ್ಳಲು ಸಾಧ್ಯ ಎಂದರು.
ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಮಾತನಾಡಿದರು.
ಶಿವಾನಂದ ಬಾಗಲಕೋಟಮಠ, ಶಿವಾನಂದ ದಾಶ್ಯಾಳ, ಕೊಣ್ಣೂರ, ಮಲ್ಲಿಕಾರ್ಜುನ ನಾಶಿ, ಸದಾಶಿವ ದೊಡ್ಡಪ್ಪಗೋಳ, ಬಿ.ಎಂ.ಮಟ್ಟಿಕಲ್ಲಿ, ಶ್ರೀಶೈಲ ಬುರ್ಲಿ, ಚಂದ್ರಪ್ರಭಾ ಬಾಗಲಕೋಟ ಸೇರಿದಂತೆ ಆನೇಕರು ಇದ್ದರು.
ಎಂ.ಎಸ್.ಬದಾಮಿ ಸ್ವಾಗತಿಸಿದರು. ಗಂಗಾಧರ ಮೋಪಗಾರ ನಿರೂಪಿಸಿದರು. ಯಶವಂತ ವಾಜಂತ್ರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.