ಮಲಬದ್ಧತೆಯನ್ನು ದೂರ ಇರಿಸಲು ಆರೋಗ್ಯಕರ ಆಹಾರ ಸೇವಿಸಿ
Team Udayavani, Jan 16, 2022, 8:10 AM IST
ನೀವು ದೀರ್ಘಕಾಲಿಕ ಮಲಬದ್ಧತೆಯ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ನಿಮ್ಮ ಆಹಾರಾಭ್ಯಾಸ ಪ್ರಧಾನ ಕಾರಣವಿರಬಹುದು. ನಿಮ್ಮ ಆಹಾರಾಭ್ಯಾಸವನ್ನು ಸೂಕ್ತವಾಗಿ ಬದಲಾಯಿಸಿಕೊಂಡರೆ ಸಮಸ್ಯೆಯು ನಿವಾರಣಯಾಗಿ, ಚೆನ್ನಾಗಿ ಮಲ ವಿಸರ್ಜನೆಯಾಗಲು ಸಾಧ್ಯವಾಗುತ್ತದೆ. ಆಹಾರಾಭ್ಯಾಸದಲ್ಲಿ ಕೇವಲ ಸರಳ ಬದಲಾವಣೆಗಳಿಂದ ಮಲಬದ್ಧತೆಯ ಲಕ್ಷಣಗಳನ್ನು ದೂರ ಮಾಡಬಹುದು.
ಮಲಬದ್ಧತೆಗೆ ಕೆಲವು ಸಾಮಾನ್ಯ ಕಾರಣಗಳು ಎಂದರೆ:
– ಕಡಿಮೆ ನಾರಿನಂಶವುಳ್ಳ ಆಹಾರ
– ಶೌಚಾಲಯಕ್ಕೆ ಹೋಗುವುದನ್ನು ಪದೇಪದೆ ನಿರ್ಲಕ್ಷಿಸುವುದು
– ಸಾಕಷ್ಟು ನೀರು ಕುಡಿಯದೆ ಇರುವುದು
– ವ್ಯಾಯಾಮದ ಕೊರತೆ
– ಗರ್ಭಧಾರಣೆ
– ಖಿನ್ನತೆ, ಒತ್ತಡ
– ಜೀವನದಲ್ಲಿ ಜಡತ್ವ
ಆಹಾರಾಭ್ಯಾಸ
ಮಾರ್ಗದರ್ಶಿ ಸೂತ್ರಗಳು
– ನಾರಿನಂಶ ಹೆಚ್ಚು ಇರುವ ಆಹಾರವಸ್ತುಗಳನ್ನು ಸೇವಿಸಿ. ಅದರಲ್ಲೂ ಮಲ ಉತ್ಪಾದನೆಯನ್ನು ಹೆಚ್ಚಿಸುವ, ಮಲವನ್ನು ಮೃದುವಾಗಿಸುವ, ಮಲ ವಿಸರ್ಜನೆಗೆ ಸಹಕಾರಿಯಾಗುವ ಆಹಾರ ವಸ್ತುಗಳನ್ನು ಹೆಚ್ಚು ಸೇವಿಸಿ.
– ನಿಮ್ಮ ದೇಹತೂಕವನ್ನು ನಿಮ್ಮ ದೇಹದ ಮಾದರಿ ದೇಹತೂಕಕ್ಕೆ ಹತ್ತಿರದಲ್ಲಿ ಇರಿಸಿಕೊಳ್ಳಿ.
– ಜಂಕ್ ಆಹಾರ, ಅದರಲ್ಲೂ ಸಂಸ್ಕರಿತ ಹಿಟ್ಟಿನಿಂದ ತಯಾರಿಸಿರುವ ಆಹಾರಗಳ ಸೇವನೆಯನ್ನು ವರ್ಜಿಸಿ.
– ಸಾಕಷ್ಟು ದ್ರವಾಹಾರ ಸೇವಿಸಿ, ದಿನಕ್ಕೆ ಕನಿಷ್ಠ 10ರಿಂದ 12 ಲೋಟಗಳಷ್ಟು ನೀರು ಕುಡಿಯಿರಿ.
ಸೇವಿಸಬೇಕಾದ ಆಹಾರಗಳು
– ತೊಗರಿ ಬೇಳೆ, ಕುಚ್ಚಲಕ್ಕಿ ಅನ್ನ, ಬಾರ್ಲಿ, ಇಡೀ ಗೋಧಿಯಂತಹ ಸಂಪೂರ್ಣ ಬೇಳೆಕಾಳುಗಳು
– ಓಟ್‌ಮೀಲ್
– ಇಡೀ ಧಾನ್ಯಗಳು, ಹುರುಳಿ, ಸೋಯಾಬೀನ್
– ನಾರಿನಂಶ ಅಧಿಕವಿರುವ ಪೇರ್, ಕಿವಿ, ಬಾಳೆಹಣ್ಣು, ಸಿಪ್ಪೆ ಸಹಿತ ಸೇಬು, ಎಲ್ಲ ವಿಧದ ಬೆರಿಗಳಂಥವುಗಳು.
– ತರಕಾರಿಗಳು ಅದರಲ್ಲೂ ಹಸುರು ಸೊಪ್ಪು ತರಕಾರಿಗಳು. ತರಕಾರಿಗಳನ್ನು ಸಲಾಡ್‌ಗಳು, ಸೂಪ್‌ಗ್ಳು, ಬೇಯಿಸಿದ ರೂಪದಲ್ಲಿ ಸೇವಿಸಬಹುದು.
– ಫ್ಲಾಕ್ಸ್ ಬೀಜಗಳು, ಚಿಯಾ ಬೀಜಗಳು
– ವಾಲ್‌ನಟ್, ಬಾದಾಮಿ, ದ್ರಾಕ್ಷಿಯಂತಹ ಒಣ ಹಣ್ಣುಗಳು
ಕಡ್ಡಾಯವಾಗಿ ವರ್ಜಿಸಬೇಕಾದ ಆಹಾರಗಳು
– ಮೈದಾದಿಂದ ಮಾಡಿರುವ ಬೇಕರಿ ಆಹಾರಗಳು
-ಚೀಸ್, ಐಸ್‌ಕ್ರೀಂನಂತಹ ಹೈನು ಉತ್ಪನ್ನಗಳು
– ಕೆಂಪು ಮಾಂಸ, ಮೊಟ್ಟೆಗಳು
– ಫ್ರೈಡ್, ಫಾಸ್ಟ್ ಫುಡ್ ಮತ್ತು ಜಂಕ್ ಫುಡ್
– ಆಲ್ಕೊಹಾಲ್
– ಮಸಾಲೆಯುಕ್ತ ಆಹಾರಗಳು, ತುಂಬಾ ಎಣ್ಣೆ ಹಾಕಿ ಮಾಡಿರುವ ಪದಾರ್ಥಗಳು
ಜೀವನ ವಿಧಾನ ಬದಲಾವಣೆ
– ಊಟ -ಉಪಾಹಾರ ಸೇವನೆಯ ವಿಚಾರದಲ್ಲಿ ಸರಿಯಾದ ವೇಳಾಪಟ್ಟಿಯನ್ನು ಅನುಸರಿಸಿ. ಆಗಾಗ ಕಿರು ಪ್ರಮಾಣದ ಊಟ ಉಪಾಹಾರಗಳನ್ನು ಸಾಕಷ್ಟು ದ್ರವಾಹಾರದೊಂದಿಗೆ ಸೇವಿಸಿ
– ನಿಮ್ಮ ಆಹಾರದಲ್ಲಿ ಸಾಕಷ್ಟು ಹಣ್ಣು ತರಕಾರಿಗಳು ಇದ್ದು, ಸಮತೋಲಿತವಾಗಿರಲಿ.
– ನಿಯಮಿತವಾದ ವ್ಯಾಯಾಮ ವೇಳಾಪಟ್ಟಿಯನ್ನು ಅನುಸರಿಸಿ. ಸುಮಾರು 20 ನಿಮಿಷ, ವಾರದಲ್ಲಿ 3 ದಿನಗಳ ವ್ಯಾಯಾಮದೊಂದಿಗೆ ಆರಂಭಿಸಿ. ನಿಧಾನವಾಗಿ ಅದನ್ನು ದಿನಕ್ಕೆ 30 ನಿಮಿಷಗಳ ಕಾಲ, ವಾರದಲ್ಲಿ ಐದು ದಿನಗಳಿಕೆ ಹೆಚ್ಚಿಸಿ.
– ಮಲವಿಸರ್ಜನೆ ಮಾಡಬೇಕು ಎಂಬ ಅನುಭವವನ್ನು ನಿರ್ಲಕ್ಷಿಸಬೇಡಿ.
– ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.
-ಸುಷ್ಮಾ ಐತಾಳ್
ಪಥ್ಯಾಹಾರ ತಜ್ಞೆ,
ಕೆಎಂಸಿ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.