ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ
ಸುಮಾರು 2 ಲಕ್ಷ ರೂ. ಮೌಲ್ಯದ ಸೇವಾ ಬೆಳೆ ಕಾಣಿಕೆ ಸಮರ್ಪಣೆಗೆ ಸಿದ್ಧತೆ
Team Udayavani, Jan 17, 2022, 1:15 AM IST
ಕಟಪಾಡಿ: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಮಹೋತ್ಸವದ ಸುಗ್ರಾಸ ಭೋಜನಕ್ಕೆ ಸುಮಾರು ಎರಡು ಲಕ್ಷ ರೂ. ಮೌಲ್ಯದ ಮಟ್ಟುಗುಳ್ಳವು ಸಮರ್ಪಣೆಗೆ ಸಿದ್ಧಗೊಳ್ಳುತ್ತಿದೆ.
ಈ ಬಾರಿಯ ಕೃಷ್ಣಾಪುರ ಮಠದ ಪರ್ಯಾಯೋತ್ಸವದ ಕಾಲದ ಸುಗ್ರಾಸ ಭೋಜನಕ್ಕೆ ಸವಿರುಚಿ ನೀಡುವ ಮಟ್ಟುಗುಳ್ಳವು ಮಟ್ಟು ಪ್ರದೇಶದ ಬೆಳೆಗಾರರ ಪರಿಶ್ರಮದ ಸೇವಾ ಬೆಳೆ ಕಾಣಿಕೆಯಾಗಿದೆ.
ಈ ಬಾರಿ ಪ್ರಾಕೃತಿಕ ವಿಕೋಪದಡಿ ಬೆಳೆಗಾರರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದರೂ, ಅತ್ಯಂತ ಉತ್ಸಾಹದಿಂದ ಮರುನಾಟಿಗೊಳಿಸಿ ಬೆಳೆಸಿದ ಇದನ್ನು ಪರ್ಯಾಯೋತ್ಸವಕ್ಕೆಬೆಳೆಕಾಣಿಕೆಯಾಗಿ ಸಮರ್ಪಿಸಲು ಅಣಿಯಾಗಿದ್ದಾರೆ.
ಕಳೆದ 2020ರ ಸಾಲಿನ ಅದಮಾರು ಮಠದ ಪರ್ಯಾಯಕ್ಕೆ ಸುಮಾರು 3,000 ಕಿಲೋ ಮಟ್ಟುಗುಳ್ಳವು ಹೊರೆಕಾಣಿಕೆಯ ರೂಪದಲ್ಲಿ ಶ್ರೀ ಮಠಕ್ಕೆ ಸಮರ್ಪಿಸಲಾಗಿತ್ತು. 2018ರ ಪರ್ಯಾಯಕ್ಕೆ 3800 ಕಿಲೋ ಮಟ್ಟುಗುಳ್ಳ ಹೊರೆ ಕಾಣಿಕೆ ರೂಪದಲ್ಲಿ ನೀಡಲ್ಪಟ್ಟಿತ್ತು. 2016ರ ಪರ್ಯಾಯದ ಸಂದರ್ಭ ಮಟ್ಟುಗುಳ್ಳ ಬೆಳೆ ಅಭಾವ ಆಗಿದ್ದು, 2,300 ಕಿಲೋ ಸಂದಾಯ ಆಗಿದೆ.
ಸುಮಾರು 1,500 ಕಿಲೋಗೂ ಅಧಿಕ ಪೂರೈಕೆ
ಶ್ರೀ ಮಠಕ್ಕೆ ಈ ಬಾರಿ ಮಟ್ಟುಗುಳ್ಳ ಬೆಳೆ ಗಾರರ ಸಂಘದ ಮೂಲಕ 210 ಬೆಳೆಗಾರರು ಬೆಳೆದ ಮಟ್ಟುಗುಳ್ಳದ ಬೆಳೆಯಿಂದ ಮತ್ತು ಇತರ ಸೇವಾರ್ಥಿಗಳ ಮತ್ತು ಶ್ರೀ ಮಠದ ಅನುಯಾಯಿಗಳ ಸಹಕಾರದಿಂದ ಒಟ್ಟು
ಸುಮಾರು 1,500 ಕಿಲೋವಿಗೂ ಅಧಿಕ ಮಟ್ಟುಗುಳ್ಳ ಸಂದಾಯವಾಗಲಿದೆ.
ಜಿಐ ಮಾನ್ಯತೆ
ಇಲ್ಲಿನ ಕೃಷಿಕರು ಭತ್ತ ಬೆಳೆಯನ್ನು ಗದ್ದೆಯಲ್ಲಿ ಪ್ರತೀವರ್ಷ ಗುಳ್ಳ ಕೃಷಿ ಮಾಡುತ್ತಾರೆ. ಅನೇಕರು ಜೂನ್, ಜುಲೆ„ ತಿಂಗಳಲ್ಲಿ ಬೆಳೆಯಲಾಗುವ ಕಾರ್ತಿ ಭತ್ತದ ಬೆಳೆಯನ್ನು ಮೊಟಕುಗೊಳಿಸಿ ಗುಳ್ಳಕೃಷಿಗಾಗಿ ಗದ್ದೆ ಹಡಿಲುಬಿಟ್ಟು ಸೆಪ್ಟೆಂಬರ್ ತಿಂಗಳಲ್ಲಿ ಗುಳ್ಳದ ಬಿತ್ತನೆ ನಡೆಸುತ್ತಾರೆ. ಮೂರು ತಿಂಗಳ ಕಾಲಾವಕಾಶದಲ್ಲಿ ಸಸಿ ಬಲಿತು ಸಮƒದ್ಧ ಗುಳ್ಳದ ಬೆಳೆಯಾಗುತ್ತದೆ. ಇದೀಗ ಜಿಐ ಮಾನ್ಯತೆಯೊಂದಿಗೆ ಪೇಟೆಂಟ್ ಪಡೆದು ಲಾಂಛನ (ಸ್ಟಿಕ್ಕರ್)ದೊಂದಿಗೆ ಮುಂಬಯಿ, ಬೆಂಗಳೂರು ಸೇರಿದಂತೆ ದೇಶವಿದೇಶಗಳಲ್ಲಿ ಮಟ್ಟುಗುಳ್ಳ ಪ್ರಿಯರಿದ್ದು, ಅಲ್ಲಿಗೂ ಕಾಲಕಾಲಕ್ಕೆ ಸರಬರಾಜು ಮಾಡಲಾಗುತ್ತದೆ.
250 ಎಕರೆ ಪ್ರದೇಶದಲ್ಲಿ ಬೆಳೆ
ಮಟ್ಟು , ಪಾಂಗಾಳ, ಕೋಟೆ, ಕೈಪುಂಜಾಲು, ಬ್ಯಾರಿ ತೋಟ, ಮಟ್ಟುಕೊಪ್ಲ, ಅಂಬಾಡಿ ಬೈಲು ಪ್ರದೇಶದ ಸುಮಾರು 250 ಎಕರೆ ಪ್ರದೇಶದ ಗದ್ದೆಯ ಮಟ್ಟುಗುಳ್ಳ ಈ ಬಾರಿ ಶ್ರೀ ಮಠದ ಬೇಡಿಕೆಯನ್ವಯ ಮಟ್ಟು ಬೆಳೆಗಾರರ ಸಂಘದ ಮೂಲಕ ಸಮರ್ಪಿಸಲಾಗುತ್ತಿದೆ. ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಇಳುವರಿ ಕುಂಠಿತವಾಗಿದ್ದರೂ ವಾಡಿಕೆಯಂತೆ ಮಟ್ಟುಗುಳ್ಳದ ಬೆಳೆಕಾಣಿಕೆಯನ್ನು ನೀಡಲಾಗುತ್ತಿದೆ .
– ಸುನಿಲ್ ಡಿ. ಬಂಗೇರ,
ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.