ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್
Team Udayavani, Jan 16, 2022, 10:49 PM IST
ಬೆಂಗಳೂರು: ಹ್ಯಾಟ್ರಿಕ್ ಗೆಲುವಿನ ಇರಾದೆಯೊಂದಿಗೆ ಆಡಲಿಳಿದ ಬೆಂಗಳೂರು ಬುಲ್ಸ್ ಕನ್ನಡಿಗ ಪ್ರಶಾಂತ್ ಕುಮಾರ್ ರೈ ಸಾರಥ್ಯದ ಪಾಟ್ನಾ ಪೈರೇಟ್ಸ್ ವಿರುದ್ಧ 38-31ಅಂತರದಿಂದ ಸೋಲನುಭವಿಸಿತು.
ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಡವಾಡಿದ ಪಾಟ್ನಾ ರೈಡಿಂಗ್ ಮತ್ತು ಟ್ಯಾಕಲ್ಸ್‌ನಲ್ಲಿ ಸರ್ವಾಂಗಿಣ ಪ್ರದರ್ಶನ ತೋರಿತು. ಪಾಟ್ನಾ ಪರ ಸುನೀಲ್ (9), ಸಚಿನ್ (8) ಗುಮಾನ್ ಸಿಂಗ್(7) ಅಂಕ ಗಳಿಸಿ ಮಿಂಚಿದರು.
ಬುಲ್ಸ್ ನಾಯಕ ಪವನ್ ಹೆಚ್ಚು ಕಾಲ ಅಂಕಣದಲ್ಲಿ ಇರ ದಿದ್ದುದು ತಂಡದ ಸೋಲಿಗೆ ಪ್ರಮುಖ ಕಾರಣ. ಅವರು 40 ನಿಮಿಷದ ಆಟದಲ್ಲಿ ಕೇವಲ 15 ರೈಡ್‌ಗಳನ್ನು ಮಾಡಿ ಹತ್ತು ಅಂಕಕ್ಕಷ್ಟೆ ಸೀಮಿತರಾದರೂ ಇನ್ನೋರ್ವ ರೈಡರ್ ಚಂದ್ರನ್ ರಂಜಿತ್ (3) ಕೂಡ ರೈಡಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು.
ಟೈ ಮಾಡಿಕೊಂಡ ಜೈಪುರ್
ಸತತ 4ನೇ ಗೆಲುವಿನ ಕನಸು ಕಾಣುತ್ತಿದ್ದ ಜೈಪುರ್ ಪಿಂಕ್ ಪ್ಯಾಂಥರ್ ರವಿವಾರದ ಮೊದಲ ಪ್ರೊ ಕಬಡ್ಡಿ ಮುಖಾಮುಖೀಯಲ್ಲಿ ತಮಿಳ್ ತಲೈವಾಸ್ ವಿರುದ್ಧ 31-31 ಅಂತರದಿಂದ ಟೈ ಸಾಧಿಸಿದೆ. ಜೈಪುರಕ್ಕೆ ಇದು ಮೊದಲ ಟೈ ಫಲಿತಾಂಶವಾದರೆ, ತಲೈವಾಸ್‌ಗೆ ಐದನೆಯದು.
ತಮಿಳ್ ಕೊನೆಯ ಹಂತದಲ್ಲಿ 2 ಅಂಕಗಳ ಮುನ್ನಡೆಯಲ್ಲಿತ್ತು. ಅಂತಿಮ ಡು ಆರ್ ಡೈನಲ್ಲಿ ರೈಡ್ ಮಾಡಿದ ಮನ್‌ಜಿàತ್ ಸೂಪರ್ ಟ್ಯಾಕಲ್‌ಗೆ ಸಿಲುಕಿದ್ದರಿಂದ ಜೈಪುರಕ್ಕೆ 2 ಅಂಕ ಸಿಕ್ಕಿತು. ಪಂದ್ಯ ಸಮಬಲಗೊಂಡಿತು. ಮನ್‌ಜಿàತ್ ಅತೀ ಹೆಚ್ಚು 9 ಅಂಕ ಗಳಿಸಿ ಕೊಟ್ಟಿದ್ದರು. ಅವರ 18 ರೈಡ್‌ಗಳಲ್ಲಿ 6 ಯಶಸ್ಸು ಕಂಡಿತ್ತು. ಎಲ್ಲವೂ ಟಚ್ ಪಾಯಿಂಟ್‌ಗಳಾಗಿದ್ದವು. ಜೈಪುರ್ ಪರ ರೈಡರ್‌ಗಳಾದ ಅರ್ಜುನ್ ದೇಶ್ವಾಲ್ ಮತ್ತು ನವೀನ್ ಗಮನಾರ್ಹ ಪ್ರದರ್ಶನ ನೀಡಿ ತಲಾ 6 ಅಂಕ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್ ನಿಧನ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ
Kannada Cinema: ಕ್ಲೈಮ್ಯಾಕ್ಸ್ ನತ್ತ ʼಕುಲದಲ್ಲಿ ಕೀಳ್ಯಾವುದೋʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.