ಸಿದ್ದರಾಮೇಶ್ವರರ ತತ್ವ ಪಾಲನೆಯಿಂದ ಆಪತ್ತು ದೂರ
Team Udayavani, Jan 16, 2022, 10:57 PM IST
ಶಿಗ್ಗಾವಿ: ಸಿದ್ದರಾಮೇಶ್ವರರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರಿಗೆ ಯಾವ ಆಪತ್ತು ಬಾರದು ಎಂದು ಭೋವಿ(ವಡ್ಡರ) ಸಮಾಜದ ತಾಲೂಕು ಅಧ್ಯಕ್ಷ ಅರ್ಜುನ ಹಂಚಿನಮನಿ ಹೇಳಿದರು. ಶನಿವಾರ ಪಟ್ಟಣದ ತಾಲೂಕು ಭೋವಿ(ವಡ್ಡರ) ಸಮಾಜದ ವತಿಯಿಂದ ಹಮ್ಮಿಕೊಂಡ ಕಾಯಕಯೋಗಿ ಗುರು ಸಿದ್ದರಾಮೇಶ್ವರರ 849ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋವಿಡ್ ಕಾರಣದಿಂದ ಸರಳವಾಗಿ ಆಚರಿಸುತ್ತಿದ್ದೇವೆ.
ಗುರು ಸಿದ್ದರಾಮೇಶ್ವರರು ನಾಡಿಗೆ ಕಾಯಕದ ಮಹತ್ವ ಸಾರಿ ಹೇಳಿದ್ದಾರೆ. ಅವರ ಕಾಯಕ ನಿಷ್ಠೆ ಇಂದು ಎಲ್ಲ ಸಮುದಾಯದವರಿಗೂ ಮಾದರಿಯಾಗಿದೆ. ನಮ್ಮ ಸಮಾಜದವರು ಸಮಾಜದ ಕಾರ್ಯಗಳಲ್ಲಿ ಒಗ್ಗಟ್ಟಾಗಿ ದುಡಿದು ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನಮ್ಮ ಸಮಾಜ ಹಲವಾರು ರಂಗಗಳಲ್ಲಿ ಇನ್ನೂ ಮುಂದೆ ಬರಬೇಕಿದೆ. ಆ ದಿಸೆಯಲ್ಲಿ ನಾವು ಇನ್ನಷ್ಟು ಸಂಘಟಿತರಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ. ಕಾಯಕವೇ ದೇವರು ಎಂದು ಬಾಳ್ಳೋಣ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಕಾಯಕ ನಿಷ್ಠೆಯಿಂದ ಹೆಸರಾದವರು ಗುರು ಸಿದ್ದರಾಮೇಶ್ವರರು. ಅವರು ವಿಶ್ವಕ್ಕೆ ಮಾದರಿಯಾಗಿದ್ದಾರೆ ಮತ್ತು ಅವರು ಇಡೀ ವಿಶ್ವಕ್ಕೆ ಬೇಕಾದವರು ಎಂದು ಹೇಳಿದರು. ಬಂಕಾಪುರ ಪುರಸಭೆ ಸದಸ್ಯ ಆಂಜನೇಯ ಗುಡಗೇರಿ ಮಾತನಾಡಿ, ಸಿದ್ದರಾಮೇಶ್ವರರು ಮಾನವತ್ವದ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು. ಅವರು ಬಸವಣ್ಣನವರ ಸಮಕಾಲೀನರು. ನಮ್ಮ ತಾಲೂಕಿನಲ್ಲಿ ಸಿದ್ದರಾಮೇಶ್ವರರ ವಿಶ್ವ ವಿದ್ಯಾಲಯ ಸ್ಥಾಪನೆಯಾಗಬೇಕು.
ಇಂದು ನಮ್ಮ ಸಮಾಜ ನಿರ್ಣಾಯಕ ಕಾಲಗಟ್ಟಕ್ಕೆ ಬಂದು ತಲುಪಿದೆ. ನಮ್ಮನ್ನು ದುರಪಯೋಗಪಡಿಸಿಕೊಳ್ಳುತ್ತಿರುÊ ವರೆ ಹೆಚ್ಚಾಗಿದ್ದಾರೆ. ಆದರಿಂದ, ನಾವೆಲ್ಲರೂ ಜಾಗೃತರಾಗಬೇಕಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ವೈಚಾರಿಕತೆಯ ಚಿಂತನೆ ಬೆಳೆಸಿಕೊಳ್ಳಬೇಕಾಗಿದೆ ಎಂದರು. ಹಡಪದ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹಡಪದ ದೈವಜ್ಞ ಸಮಾಜದ ತಾಲೂಕು ಅಧ್ಯಕ್ಷ ಸುಧಾಕರ ದೈವಜ್ಞ, ಮುಖಂಡರಾದ ನರಹರಿ ಕಟ್ಟಿ, ಶೇಕಣ್ಣ ಹಾದಿಮನಿ, ವಿಶ್ವನಾಥ ವಾಲಿಶೆಟ್ಟರ, ಹನಮಂತಪ್ಪ ಗುಳೇದ, ದುರಗಪ್ಪ ವಡ್ಡರ, ಹನಮಂತಪ್ಪ ತೆಮ್ಮಿನಕೊಪ್ಪ, ರಾಮು ಪೂಜಾರ, ಮಂಜುನಾಥ ಗುಡಗೇರಿ, ಮಹೇಶ ಕುರಂದವಾಡ, ಶೆಟ್ಟಪ್ಪ ವಡ್ಡರ, ಹನುಮಂತ ಬಾರಂಗಿ, ಹನಮಂತಪ್ಪ ಬಡ್ನಿ, ತಿಮ್ಮಣ್ಣ ವಡ್ಡರ, ನಾಗರಾಜ ವಡ್ಡರ, ವೆಂಕಟೇಶ ಬಂಡಿವಡ್ಡರ ಶಿವಾನಂದ ಬೊಮ್ಮನಹಳ್ಳಿ, ಹನಮಂತಪ್ಪ ಸಂಶಿ, ಯಲ್ಲಪ್ಪ ವಡ್ಡರ, ಬಸವರಾಜ ವಡ್ಡರ, ಸಂತೋಷ ಬಂಡಿವಡ್ಡರ, ನಿಂಗಪ್ಪ ಶಿವಳ್ಳಿ, ಶಂಕರ ಶಿವಳ್ಳಿ, ಮಂಜುನಾಥ ವಡ್ಡರ, ವೇಂಕಟೇಶ ಬಂಡಿವಡ್ಡರ, ಹನಮಂತ ಶಿವಳ್ಳಿ, ವಿಶ್ವನಾಥ ಬಂಡಿವಡ್ಡರ, ಹಾಲಪ್ಪ ವಡ್ಡರ, ಹನಮಂತಪ್ಪ ವಡ್ಡರ ಸೇರಿದಂತೆ ಸಮಾಜದ ಬಾಂಧವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.