ಬ್ಯಾಂಕಿಂಗ್‌ನಿಂದ ಬಿ ಸ್ಕೂಲ್‌ಗೆ ನೆಗೆದ ದಿಗ್ಗಜ
Team Udayavani, Jan 17, 2022, 6:00 AM IST
ಸಿಂಡಿಕೇಟ್ ಬ್ಯಾಂಕ್ ಅಧ್ಯಕ್ಷರಾಗಿ ಟಿ.ಎ. ಪೈ ಅವರು ಹಲವು ಸಾಮಾಜಿಕ ಅಗತ್ಯದ ಉಪಕ್ರಮಗಳನ್ನು ಆರಂಭಿಸಿದರು. ಇದರಲ್ಲಿ ಒಂದು 1962ರಲ್ಲಿ ಮಹಿಳಾ ಸಬಲೀಕರಣ. ಬೆಂಗಳೂರಿನ ಶೇಷಾದ್ರಿಪುರಂ ಶಾಖೆಯಲ್ಲಿ ಮಹಿಳಾ ಶಾಖೆಯನ್ನು ತೆರೆದು ಎಲ್ಲ ಹುದ್ದೆಗಳಿಗೆ ಮಹಿಳೆಯರನ್ನು ನಿಯೋ ಜಿಸಿದರು. ಅನಂತರ ದೇಶದ ವಿವಿಧೆಡೆ ಒಂಬತ್ತು ಮಹಿಳಾ ಶಾಖೆಗಳು ತೆರೆದವು.
ವಿದೇಶಕ್ಕೆ ತೆರಳಿ ಶಿಕ್ಷಣ ಪಡೆಯುವವರಿಗೆ ಹಣಕಾಸು ಒದಗಣೆಯನ್ನು ಆರಂಭಿಸಿದ್ದು ಟಿ.ಎ. ಪೈಯವರು. ಸುಮಾರು 5,400 ವಿದ್ಯಾರ್ಥಿಗಳಿಗೆ ಯಾವುದೇ ಭದ್ರತೆ ಇಲ್ಲದೆ ವಿದೇಶದ ಶಿಕ್ಷಣ ಕೊಡಿಸಲು ಕಾರಣರಾದರು. ಆದರೆ ಇಷ್ಟೊಂದು ಸಾಲವೂ ಶೇ.100 ಮರುಪಾವತಿಯಾದ ದಾಖಲೆ ನಿರ್ಮಾಣವಾಯಿತು.
ಅವರು ಎಲ್ಲ ಶಾಖೆ ಗಳಿಗೆ ಭೇಟಿ ನೀಡಿ ದಾಗಲೂ “ಮಹಿಳೆಯರ ಶಕ್ತಿಯನ್ನು ಕೀಳಂದಾಜಿಸಬೇಡಿ’ ಎಂಬ ಒಂದು ವಾಕ್ಯದ ಬೀಜಮಂತ್ರವನ್ನು ಹೇಳುತ್ತಿದ್ದರು. ಬೆಳಗಾವಿಯ ತರಕಾರಿ ಮಾರುವ ಮಹಿಳೆಯರೇ ಇರಬಹುದು, ಕರಾ ವಳಿಯ ಮೀನು ಮಾರುವ ಮಹಿಳೆಯರೇ ಇರಬಹುದು, ಮಹಿಳೆಯರ ಈ ಶಕ್ತಿಯನ್ನು ಕುಟುಂಬದ ಅಭಿವೃದ್ಧಿಗೆ ಹೇಗೆ ಮಾರ್ಪಡಿಸಬಹುದು ಎಂಬ ಚಿಂತನೆ ಅವರಲ್ಲಿತ್ತು. ಮಹಿಳೆಯರು ಮತ್ತು ಯುವಜನರು ಸಮಾಜವನ್ನು ಪರಿವರ್ತಿಸುವ ಏಜೆಂಟರು ಎಂದು ಅವರು ಹೇಳುತ್ತಿದ್ದರು.
ಬ್ಯಾಂಕ್ ಒಂದು ಹಣಕಾಸು ಒದಗಿಸುವ ಸಂಸ್ಥೆ ಎಂದು ಪರಿಗಣಿಸದೆ, ಠೇವಣಿದಾರರು ಮತ್ತು ಮುಂಗಡ ಪಡೆಯುವ ವರನ್ನು ಸಂರಕ್ಷಿಸುವ ಸಂಸ್ಥೆ ಎಂದು ನಂಬಿದ್ದರು.
ಮಣ್ಣು ಪರೀಕ್ಷೆಯಂತಹ ಅನೇಕ ಪ್ರಗತಿಪರ ಉಪಕ್ರಮಗಳಿಗೆ ಮುಂದಾದ ಅವರು, ಮೀನುಗಾರಿಕೆ, ಬೇಸಾಯ, ಗ್ರಾಮ ಕೈಗಾರಿಕೆಗಳ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಟ್ಟರು. ಜಗತ್ತು ತಿಳಿಯುವ ಸಾಕಷ್ಟು ಮುನ್ನವೇ ಪ್ರಯೋಗವನ್ನು ಮಾಡಿದ್ದ ಸಾಧಕ ಇವರಾಗಿದ್ದರು.
ಟಿ.ಎ. ಪೈಯವರು ಸಿಂಡಿಕೇಟ್ ಬ್ಯಾಂಕ್‌ನೊಂದಿಗೆ 20 ದೊಡ್ಡಮತ್ತು ಸಣ್ಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ್ದರು. ಆಗ ಉದ್ಭವಿಸಿದ ಅನೇಕ ವ್ಯಾಜ್ಯಗಳನ್ನು ಪರಿಹರಿಸುವಲ್ಲಿ ಅವರ ಮುನ್ನೋಟ, ತಾಳ್ಮೆ ಗಮನೀಯವಾಗಿದೆ. ಸಿಂಡಿಕೇಟ್ ಬ್ಯಾಂಕ್‌ನ ಸಂಸ್ಕೃತಿಗೆ ಒಗ್ಗಿ ಜನ ಸೇವೆ ಮಾಡಲು ಅವರು ಸಿಬಂದಿಗೆ ವಿಶೇಷ ತರಬೇತಿ ಕೊಡುತ್ತಿದ್ದರು.
1969ರಲ್ಲಿ ಸಿಂಡಿಕೇಟ್ ಬ್ಯಾಂಕ್ ರಾಷ್ಟ್ರೀಕರಣವಾದ ಬಳಿಕ ಬ್ಯಾಂಕ್‌ನ ಕಸ್ಟೋಡಿಯನ್ ಆಗಿ ಎಂಟು ತಿಂಗಳು ಕರ್ತವ್ಯ ನಿರ್ವಹಿಸಿದ್ದರು. ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದ ಬ್ಯಾಂಕ್ ರಾಷ್ಟ್ರ ಮಟ್ಟದಲ್ಲಿ ಛಾಪು ಮೂಡಿಸುವಲ್ಲಿ ವಿಶೇಷವಾಗಿ ಡಾ| ಟಿ.ಎಂ.ಎ. ಪೈ ಮತ್ತು ಟಿ.ಎ. ಪೈಯವರ ದೂರದೃಷ್ಟಿ ಉಲ್ಲೇಖನೀಯ.
ಜನಜೀವನವನ್ನು ಬಲಗೊಳಿಸುವ ಬ್ಯಾಂಕಿಂಗ್ ವ್ಯವಸ್ಥೆ ಬಗೆಗೆ ಅಭಿಪ್ರಾಯಹೊಂದಿದ್ದ ಸ್ವಾತಂತ್ರ್ಯ ಹೋರಾಟ
ಗಾರ ಸಿ. ರಾಜ ಗೋಪಾಲಾಚಾರಿ ಅವರ ಆಶಯವನ್ನು ಟಿ.ಎ. ಪೈ ಸುಪುಷ್ಟಿಗೊಳಿಸಿದ್ದರು.
1970ರ ಬಳಿಕ ಟಿ.ಎ. ಪೈಯವರು ಭಾರತೀಯ ಜೀವವಿಮಾ ನಿಗಮದಅಧ್ಯಕ್ಷತೆ ವಹಿಸಿಕೊಂಡು ಹಣಕಾಸು
ಸೇವೆಯನ್ನು ಮುಂದುವರಿಸಿದರು. 1980 ರಲ್ಲಿ ಅವರು ಇನ್ನಿಲ್ಲವಾಗುವ ಮುನ್ನ ಬಿಸಿನೆಸ್ ಸ್ಕೂಲ್ ಆರಂಭಿಸಿದ್ದು ಜೀವಿತದ ಕೊನೆಯ ಕೊಡುಗೆ ಯಾಗಿದೆ. ಸ್ಥಾಪಕರ ಸದಾಶಯದಂತೆ ಟಿ.ಎ. ಪೈ ಮ್ಯಾನೇಜ್ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ) ಮಣಿಪಾಲ ಹೊರವಲಯದ 80 ಬಡಗಬೆಟ್ಟು ಗ್ರಾಮದಲ್ಲಿ ನೆಲೆ ನಿಂತು ಬ್ಯಾಂಕಿಂಗ್, ಫೈನಾನ್ಶಿಯಲ್ ಸರ್ವಿಸಸ್‌ನಲ್ಲಿ ಸ್ನಾತಕೋತ್ತರ ಪದವಿ (ಎಂಬಿಎ) ನೀಡುವ ಭಾರತದ ಶ್ರೇಷ್ಠ ಬಿ ಸ್ಕೂಲ್ ಆಗಿ ಹೊರಹೊಮ್ಮಿದೆ.
-ಪ್ರೊ| ಮಧು ವೀರರಾಘವನ್
(ಟ್ಯಾಪ್ಮಿ ನಿರ್ದೇಶಕರು. ಹಣಕಾಸು, ನಿರ್ವಹಣ ವಿಷಯ ತಜ್ಞರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.