ಭೂಪಟ ಪೂಜೆ ದೇಶಪ್ರೇಮವಲ್ಲ: ಶಿವರಂಜನ್ ಸತ್ಯಂಪೇಟ
Team Udayavani, Jan 17, 2022, 12:14 PM IST
ಕಲಬುರಗಿ: ಅಪೂರ್ವ ಸನ್ಯಾಸಿ ಸ್ವಾಮಿ ವಿವೇಕಾನಂದರು ನೀಡಿದ ಸಂದೇಶ ಈಗಿನ ಕಾಲಮಾನಕ್ಕೆ ಬಹಳ ಪ್ರಸ್ತುತವಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ ಹೇಳಿದರು.
ನಗರದ ಆರಾಧನಾ ಪಿಯು ಕಾಲೇಜು ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ) ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಯುವ ಸಪ್ತಾಹ-2022, ಕೋವಿಡ್-19 ರೋಗದ 3ನೇ ಅಲೆಯ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವು ಜಾಗತಿಕ ತಾಪಮಾನ, ಪರಿಸರ ಹಾನಿಯಂತ ಅನೇಕ ಸವಾಲು-ಸಮಸ್ಯೆ ಎದುರಿಸುತ್ತಿದ್ದು, ಇವುಗಳನ್ನು ಮೆಟ್ಟಿ ನಿಂತು ಭಾರತ ವಿಶ್ವಗುರು ಆಗಲು ಯುವಕರ ಪಾತ್ರ ಅಗತ್ಯವಾಗಿದೆ. ಈಗಿನ ಸ್ಪರ್ಧಾತ್ಮಕ ಮತ್ತು ಮಾಹಿತಿ ತಂತ್ರಜ್ಞಾನಯುಗದಲ್ಲಿ ಯುವಕರು ವಿವೇಕಾನಂದರ ಕನಸು ನನಸು ಮಾಡಬೇಕು ಎಂದರು.
ಸ್ವಾಮಿ ವಿವೇಕಾನಂದರ ಬದುಕು-ಬರಹ ಕುರಿತು ಮುಖ್ಯ ಅತಿಥಿಯಾಗಿದ್ದ ಪ್ರಗತಿಪರ ಚಿಂತಕ ಡಾ| ಶಿವರಂಜನ್ ಸತ್ಯಂಪೇಟೆ ಮಾತನಾಡಿ, ದೇಶಪ್ರೇಮವೆಂದರೆ ಭೂಪಟ ಪೂಜಿಸುವುದಲ್ಲ. ಸಕಲ ಜನಕೋಟಿ ಪ್ರೀತಿಸುವುದು. ಅವರ ಸ್ಥಿತಿಗತಿ ಉತ್ತಮಪಡಿಸುವುದು. ಅವರಿಗೆ ವಿದ್ಯಾಬುದ್ಧಿ ಕೊಡುವುದು ಎಂಬುದನ್ನು ಅರಿತಿದ್ದ ವಿವೇಕಾನಂದರು, ಪರಸ್ಪರ ಪ್ರೀತಿ- ವಿಶ್ವಾಸ ಒಳಗೊಂಡ ಆಧ್ಯಾತ್ಮದ ತಳಹದಿ ಮೇಲೆ ಹಿಂದೂ ಧರ್ಮ ಕಟ್ಟಬಯಸಿದ್ದರು ಎಂದು ಹೇಳಿದರು.
ನಾವೆಲ್ಲರೂ ದೇವರನ್ನು ಹುಡುಕುತ್ತ ಕಲ್ಲು ಮಣ್ಣಿನ ಕಟ್ಟಡಗಳನ್ನು ಎಡತಾಕುತ್ತಿದ್ದರೆ, ಸ್ವಾಮಿ ವಿವೇಕಾನಂದರು ದರಿದ್ರ, ಅಮಾಯಕರ ನೋವಿನಲ್ಲಿ ದೇವರನ್ನು ಕಾಣುತ್ತಿದ್ದರು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸದೃಢ ಭಾರತ ಕಟ್ಟಬೇಕು ಎಂದು ಕರೆ ನೀಡಿದರು.
ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪಿಎಸ್‌ಐ ಯಶೋಧಾ ಕಟಕೆ, ಬಿ.ಎಚ್. ನಿರಗುಡಿ, ಜಿ. ಸತೀಶ ಅವರನ್ನು ಸನ್ಮಾನಿಸಲಾಯಿತು. ನಂತರ ನಗರದ ಮಣೂರ ಆಸ್ಪತ್ರೆ ಸಂಸ್ಥಾಪಕ ನಿರ್ದೇಶಕ ಡಾ| ಫಾರುಖ್ ಅಹ್ಮದ್, ಸಿಇಒ ಡಾ| ಲಕ್ಷ್ಮೀಕಾಂತ ಮೇತ್ರೆ ಹಾಗೂ ವೈದ್ಯ ಸಿಬ್ಬಂದಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು. ಆರಾಧನಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಚೇತನಕುಮಾರ ಗಾಂಗಜಿ ಅಧ್ಯಕ್ಷತೆ ವಹಿಸಿದ್ದರು. ಆನಂದ ಸ್ವಾಗತಿಸಿದರು, ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.