ಸರ್ಕಾರದ 1.67 ಕೋಟಿ ರೂ. ರಾಜಸ್ವ ಗುಳುಂ ಮಾಡಿದ ವ್ಯಕ್ತಿ ಬಂಧನ
Team Udayavani, Jan 17, 2022, 12:26 PM IST
ಚಿತ್ರದುರ್ಗ: ಸರ್ಕಾರಿ ದಾಖಲೆ ಕೆ-2 ಚಲನ್‌ಗಳನ್ನು ತಿದ್ದಿ, ಚಿತ್ರದುರ್ಗ ಉಪನೋಂದಣಿ ಕಚೇರಿಗೆ 1.67 ಕೋಟಿ ರೂ. ಗಳಿಗೂ ಹೆಚ್ಚು ರಾಜಸ್ವ ಹಣ ವಂಚಿಸಿದ ಆರೋಪಿತನನ್ನು
ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಚಿತ್ರದುರ್ಗ ಉಪನೋಂದಣಿ ಕಚೇರಿಯ ದಾಸ್ತಾವೇಜು ಬರಹಗಾರ (ಸ್ಟಾಂಪ್ ವೆಂಡರ್) ಸಿ.ಮಂಜುನಾಥ ಯಾದವ್ (36) ಬಂಧಿತ.
ನಗರ ಠಾಣೆಯಲ್ಲಿ ಜಿಲ್ಲಾ ನೋಂದಣಾಧಿಕಾರಿ ರವೀಂದ್ರ ಪೂಜಾರ್ ನೀಡಿದ ದೂರಿನನ್ವಯ ಚಿತ್ರದುರ್ಗ ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿಸಲ್ಪಟ್ಟ 194 ದಾಸ್ತಾವೇಜುಗಳಿಂದ ಸರ್ಕಾರಕ್ಕೆ ಶುಲ್ಕ ಪಾವತಿಗೆ ಸಂಬಂಧಿಸಿದಂತೆ 2020 ಅಕ್ಟೋಬರ್ 28 ರಿಂದ 2021 ಆಗಸ್ಟ್ 31 ರವರೆಗಿನ ಅವಧಿಯಲ್ಲಿ ದಸ್ತಾವೇಜು ಸಿದ್ಧಪಡಿಸಿ ಸಹಿ ಮಾಡಿರುವ ಎಲ್ಲಾ ದಸ್ತಾವೇಜುಗಳು
ಕಾನೂನು ಬಾಹಿರವಾಗಿ ಸರ್ಕಾರಿ ದಾಖಲೆಗಳಾದ ಕೆ-2 ಚಲನ್‌ಗಳನ್ನು ತಿದ್ದಿಕೊಟ್ಟು, ಚಿತ್ರದುರ್ಗದ ಆಕ್ಸಿಸ್ ಮತ್ತು ಐಸಿಐಸಿ ಬ್ಯಾಂಕ್ ಖಾತೆಯಿಂದ ದಸ್ತಾವೇಜುಗಳ ಮೌಲ್ಯಕ್ಕೆ
ಅನುಗುಣವಾಗಿ ಶುಲ್ಕವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನಾನಾ ಲೆಕ್ಕ ಶೀರ್ಷಿಕೆಗಳಲ್ಲಿ ಇ-ಪೇಮೆಂಟ್ ಮೂಲಕ ಕಡಿಮೆ ಶುಲ್ಕ ಪಾವತಿಸುವ ಮೂಲಕ ಸರ್ಕಾರಕ್ಕೆ
1,67,71,170 ರೂ.ನಷ್ಟು ರಾಜಸ್ವ ವಂಚಿಸಿರುತ್ತಾರೆ.
ಕಲಂ 420, 465, 468, 471 ಐಪಿಸಿ ಮತ್ತು 362,64 ಕರ್ನಾಟಕ ಮುದ್ರಾಂಕ ಕಾಯ್ದೆ 1957 ಹಾಗೂ ಕಲಂ 83 ಭಾರತೀಯ ನೋಂದಣಿ ಕಾಯ್ದೆ 1908 ರಿತ್ಯಾ ಪ್ರಕರಣ ದಾಖಲಿಸಿದ್ದು, ಚಿತ್ರದುರ್ಗ ಡಿವೈಎಸ್ಪಿ ಎಸ್.ಪಾಂಡುರಂಗ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಪ್ರಭುದೇವ ಜತೆ ಡ್ಯಾನ್ಸ್ ಥ್ರಿಲ್ ಕೊಟ್ಟಿತು! ಕನಸು ನನಸಾದ ಖುಷಿಯಲ್ಲಿ ಸಂಯುಕ್ತಾ
ನ್ಯಾಯಾಲಯಕ್ಕೆ ಶರಣಾದ ಆರೋಪಿ: ಮಂಜುನಾಥ್ ಯಾದವ್ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿ ಚಿತ್ರದುರ್ಗ ಹಾಗೂ ಬೆಂಗಳೂರಿನ ಹೈಕೋರ್ಟ್ ಗಳಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಎರಡೂ ನ್ಯಾಯಾಲಯದಲ್ಲಿ ಜಾಮೀನು ಸಿಗದಿದ್ದಾಗ ಜ. 11 ರಂದು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಆರೋಪಿತನನ್ನು ಜ.14 ರಂದು ನ್ಯಾಯಾಲಯದಿಂದ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿ, ಆರೋಪಿತನ ಕಡೆಯಿಂದ 1 ಲ್ಯಾಪ್ ಟಾಪ್, 1 ಸಿಪಿಯು, 1 ಮೊಬೈಲ್ ಹಾಗೂ ಹೆಚ್ಚಿನ ತನಿಖೆಗಾಗಿ ಚಿತ್ರದುರ್ಗ ಜಿಲ್ಲಾ ಉಪನೋಂದಣಾಧಿಕಾರಿ ಕಚೇರಿಯ 3 ಸಿಪಿಯು ಕೂಡ ವಶಕ್ಕೆ ತೆಗೆದುಕೊಂಡಿದ್ದಾರೆ. ಜಫ್ತಿ ಮಾಡಿರುವ ಯಂತ್ರೋಪಕರಣಗಳನ್ನು ಹೆಚ್ಚಿನ ತನಿಖೆಗಾಗಿ ಎಫ್‌ಎಸ್ ಎಲ್ ಕೇಂದ್ರಕ್ಕೆ ಕಳಹಿಸಿದ್ದು, ತನಿಖೆ ಮುಂದುವರೆದಿದೆ.
ಆರೋಪಿತನ ಹಿನ್ನೆಲೆ: ಆರೋಪಿತ ಮಂಜುನಾಥ್ ಯಾದವ್ ಅ ಧಿಕೃತ ದಸ್ತಾವೇಜು ಬರಹಗಾರನಾಗಿದ್ದು (ಸ್ಟಾಂಪ್ ವೆಂಡರ್) ಚಿತ್ರದುರ್ಗ ನಗರದ ಸಬ್ ರಿಜಿಸ್ಟಾರ್ ಕಚೇರಿ ಹಿಂಭಾಗದಲ್ಲಿ ಐಶಾರಾಮಿ ಕಚೇರಿ ಮಾಡಿಕೊಂಡು ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಪ್ರಾಬಲ್ಯವಿರುವಂತೆ ವರ್ತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.