ಆ್ಯಶಸ್ ಗೆಲುವಿನ ಸಂತಸದಲ್ಲೂ ಒಂದು ನಡೆಯಿಂದ ಹೃದಯ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್
Team Udayavani, Jan 17, 2022, 2:14 PM IST
ಹೊಬಾರ್ಟ್: ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕನಾಗಿ ಮೊದಲ ಆ್ಯಶಸ್ ಸರಣಿಯಲ್ಲೇ ಜಯಭೇರಿ ಬಾರಿಸಿದ ಪ್ಯಾಟ್ ಕಮಿನ್ಸ್ ಸಂಭ್ರಮಾಚರಣೆಯಲ್ಲೂ ಜನರ ಮನಸ್ಸು ಗೆದ್ದಿದ್ದಾರೆ.
ಹೊಬಾರ್ಟ್ ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯವನ್ನೂ ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಸರಣಿಯನ್ನು 4-0 ಅಂತರದಿಂದ ಗೆದ್ದ ಆಸೀಸ್ ತಂಡ ನಂತರ ಸಹಜವಾಗಿಯೇ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಈ ವೇಳೆ ನಾಯಕ ಕಮಿನ್ಸ್ ತೋರಿದ ಕಳಕಳಿ ಮೆಚ್ಚುಗೆಗೆ ಪಾತ್ರವಾಗಿದೆ.
ಟ್ರೋಫಿಯನ್ನು ಹಸ್ತಾಂತರಿಸಿದ ನಂತರ, ಆಸೀಸ್ ಆಟಗಾರರು ಪರಸ್ಪರ ಸ್ಪ್ರೇ ಮಾಡಲು ಶಾಂಪೇನ್ ಬಾಟಲಿಗಳನ್ನು ತೆರೆದರು. ಆದರೆ ಉಸ್ಮಾನ್ ಖವಾಜಾ ಇದರ ಭಾಗವಾಗಲು ಸಾಧ್ಯವಾಗುವುದಿಲ್ಲ ಎಂದ ಅರಿತ ಕಮಿನ್ಸ್, ಕೂಡಲೇ ಶಾಂಪೇನ್ ಬಾಟಲಿಗಳನ್ನು ದೂರವಿಡಲು ತಮ್ಮ ತಂಡದ ಸಹ ಆಟಗಾರರಿಗೆ ಸೂಚಿಸಿದರು. ನಂತರ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಖವಾಜಾ ಅವರನ್ನು ಕಮಿನ್ಸ್ ಕರೆದರು.
ಇದನ್ನೂ ಓದಿ:ಪ್ರಭುದೇವ ಜತೆ ಡ್ಯಾನ್ಸ್ ಥ್ರಿಲ್ ಕೊಟ್ಟಿತು! ಕನಸು ನನಸಾದ ಖುಷಿಯಲ್ಲಿ ಸಂಯುಕ್ತಾ
ಪಾಕಿಸ್ಥಾನ ಮೂಲದ ಮುಸ್ಲಿಂ ಕುಟುಂಬದ ಉಸ್ಮಾನ್ ಖವಾಜಾ ಅವರಿಗೆ ಮದ್ಯ ನಿಷಿದ್ಧ. ಹೀಗಾಗಿ ಶಾಂಪೇನ್ ಜೊತೆಗಿನ ಸಂಭ್ರಮಾಚರಣೆಯಲ್ಲಿ ಅವರು ಭಾಗವಹಿಸುವುದಿಲ್ಲ.
Pat Cummins realizing that Khawaja had to stand away because of the alcohol so he tells his team to put it away and calls Khawaja back immediately. A very small but a very beautiful gesture❤️pic.twitter.com/KlRWLprbWM
— Kanav Bali? (@Concussion__Sub) January 16, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.