![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jan 17, 2022, 2:43 PM IST
ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಅಲಾ ವೈಕುಂಠಪುರಮುಲೂ’ ಚಿತ್ರದ ಹಿಂದಿ ಆವೃತ್ತಿ ಜನವರಿ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಲ್ಲು ಅರ್ಜುನ್ ರ ‘ಪುಷ್ಪ’ ಚಿತ್ರ ಗಳಿಸಿದ ಜನಪ್ರಿಯತೆ ಮತ್ತು ಯಶಸ್ಸಿನ ಲಾಭ ಪಡೆಯಲು, ‘ಅಲಾ ವೈಕುಂಠಪುರಮುಲು’ ನಿರ್ಮಾಪಕರು ಚಿತ್ರವನ್ನು ಹಿಂದಿಗೆ ಡಬ್ ಮಾಡಲು ನಿರ್ಧರಿಸಿದ್ದಾರೆ. ಅಲ್ಲು ಅರ್ಜುನ್ ಅವರ ಸೂಪರ್‌ಹಿಟ್ ಚಿತ್ರದ ಹಿಂದಿ ಆವೃತ್ತಿಯು ಜನವರಿ 26 ರಂದು ಭಾರತದಲ್ಲಿ ತೆರೆ ಕಾಣಲಿದೆ.
ಅಲ್ಲು ಅರ್ಜುನ್ ಅಭಿನಯದ ಅಲಾ ವೈಕುಂಠಪುರಮುಲು 2020 ರಲ್ಲಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಪ್ರಸ್ತುತ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಈ ಚಿತ್ರವು 2020 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ.
ಇದನ್ನೂ ಓದಿ:ಪ್ರಭುದೇವ ಜತೆ ಡ್ಯಾನ್ಸ್ ಥ್ರಿಲ್ ಕೊಟ್ಟಿತು! ಕನಸು ನನಸಾದ ಖುಷಿಯಲ್ಲಿ ಸಂಯುಕ್ತಾ
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಜೊತೆಗೆ ತಬು, ಜಯರಾಮ್, ಸುಶಾಂತ್, ನಿವೇತಾ ಪೇತುರಾಜ್, ನವದೀಪ್ ಮತ್ತು ರಾಹುಲ್ ರಾಮಕೃಷ್ಣ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಥಮನ್ ಎಸ್. ಸಂಗೀತ ನಿರ್ದೇಶನದ ಹಾಡುಗಳು ಹಿಟ್ ಲಿಸ್ಟ್ ಸೇರಿದ್ದವು. “ ಬುಟ್ಟಾ ಬೊಮ್ಮ..”, “ರಾಮುಲೋ ರಾಮುಲಾ..” ಹಾಡುಗಳು ದೊಡ್ಡ ಮಟ್ಟದ ಹಿಟ್ ಆಗಿದ್ದವು.
The *dubbed #Hindi version* of #AlaVaikunthapurramuloo will release across #Indian cinemas on [Wednesday] 26 Jan 2022… Directed by #Trivikram. #Goldmines #AAFilms
— taran adarsh (@taran_adarsh) January 17, 2022
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.