ಭಾರತದಲ್ಲಿ ಹೂಡಿಕೆ ಮಾಡಿ: ದಾವೋಸ್‌ ಶೃಂಗ ಸಭೆಯಲ್ಲಿ ಉದ್ಯಮಿಗಳಿಗೆ ಪ್ರಧಾನಿ ಆಹ್ವಾನ


Team Udayavani, Jan 18, 2022, 7:01 AM IST

thumb 5

ಹೊಸದಿಲ್ಲಿ: “ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತ ತೋರುತ್ತಿರುವ ಉತ್ಸಾಹ ಹಾಗೂ ಅಭೀಪ್ಸೆಗಳು, ವಿಶ್ವ ವಾಣಿಜ್ಯ ರಂಗದಲ್ಲಿ ಭಾರತದೊಟ್ಟಿಗೆ ಕೈ ಜೋಡಿಸಿರುವ ಸಹಭಾಗಿಗಳಿಗೆ ಹೊಸ ಚೈತನ್ಯ ತಂದಿದೆ. ಹಾಗಾಗಿ, ಭಾರತದಲ್ಲಿ ಹೂಡಿಕೆ ಮಾಡಲು ಇದು ನಿಜಕ್ಕೂ ಸುವರ್ಣಾವಕಾಶವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ, ವಿಶ್ವ ವಾಣಿಜ್ಯೋ ದ್ಯಮಿಗಳಿಗೆ ಮುಕ್ತ ಆಹ್ವಾನ ನೀಡಿದ್ದಾರೆ.

“ವಿಶ್ವ ಆರ್ಥಿಕ ಶೃಂಗದ ದಾವೋಸ್‌ ಅಜೆಂಡಾ’ ಸಮ್ಮೇಳನದಲ್ಲಿ ವೀಡಿಯೋ ಕಾನ್ಫ ರೆನ್ಸ್‌ ಮೂಲಕ ಭಾಗಿಯಾಗಿ ಮಾತನಾಡಿದ ಅವರು, “ಭಾರತದಲ್ಲಿ ಯುವೋದ್ಯಮಿಗಳು ಹೆಚ್ಚಾಗಿ ಅಸ್ತಿತ್ವಕ್ಕೆ ಬರುತ್ತಿದ್ದಾರೆ. 2014ರ ಹೊತ್ತಿಗೆ ಭಾರತದಲ್ಲಿ ಕೇವಲ ನೂರಾರು ಮಾತ್ರವೇ ಇದ್ದ ಸ್ಟಾರ್ಟ್‌ಅಪ್‌ಗ್ಳು ಈಗ 60 ಸಾವಿರ ದಾಟಿದೆ. 2021ರಲ್ಲೇ 80 ಯೂನಿ ಕಾರ್ನ್ ಸ್ಟಾರ್ಟ್‌ಅಪ್‌ಗಳು ಸೃಷ್ಟಿಯಾಗಿರು ವುದು ನಿಜಕ್ಕೂ ಹೆಮ್ಮೆಯ ವಿಚಾರ. ಮತ್ತೊಂದೆಡೆ, ಭಾರತ ಸರಕಾರ‌ ಕೂಡ ಭಾರತೀಯ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಮುಂದಿನ 25 ವರ್ಷ ಗಳವರೆಗೆ ಯಾವುದೇ ಅಡೆತಡೆಯಾಗದಂಥ ಕಾನೂನು, ಶಾಸನಗಳನ್ನು ರೂಪಿಸುತ್ತಿದೆ. ಜತೆಗೆ ಭಾರತವನ್ನು ಮಾಲಿನ್ಯ ಮುಕ್ತ ರಾಷ್ಟ್ರ ವನ್ನಾಗಿಸಲು ಹಲವಾರು ಕ್ರಮ ಗಳನ್ನು ಜಾರಿ ಗೊಳಿಸಿದೆ. ಇದೆಲ್ಲವೂ ಹೂಡಿಕೆಗೆ ಪೂರಕವಾದ ವಾತಾವರಣವಾಗಿವೆ’ ಎಂದರು.

ಐಟಿ ರಂಗಕ್ಕೆ ಶ್ಲಾಘನೆ: ಕೊರೊನಾದ ಇಂಥ ಸಂಕಷ್ಟದ ಸಂದರ್ಭದಲ್ಲೂ ಭಾರತದ ಮಾಹಿತಿ ತಂತ್ರಜ್ಞಾನ ರಂಗವು ಹಗಲು – ರಾತ್ರಿ ದುಡಿ ಯುವ ಮೂಲಕ ವಿಶ್ವಕ್ಕೆ ತಂತ್ರಜ್ಞಾನದ ಕೊರತೆ ಯಾಗದಂತೆ ತನ್ನದೊಂದು ಕಾಣಿಕೆ ನೀಡಿದೆ. ಕಳೆದ ವರ್ಷ ಭಾರತ ರೂಪಿಸಿರುವ ಡಿಜಿಟಲ್‌ ಇನ್‌ಫ್ರಾ ಯೋಜನೆಯು ಭಾರತದ ಐಟಿ ರಂಗಕ್ಕೆ ಹೊಸ ಶಕ್ತಿಯನ್ನು ತುಂಬಿದೆ. ಈ ನಿಟ್ಟಿನಲ್ಲಿ ರೂಪಿಸಲಾಗಿರುವ ಕೋವಿನ್‌ ಹಾಗೂ ಆರೋಗ್ಯ ಸೇತು ಅಪ್ಲಿಕೇಶನ್‌ಗಳು ಭಾರತದ ಐಟಿ ರಂಗದ ಹಿರಿಮೆಗಳಾಗಿವೆ ಎಂದು ತಿಳಿಸಿದರು.

ಭಾರತ ಶತಪ್ರಯತ್ನ: ಇದೇ ವೇಳೆ, ಕೊರೊನಾ ಪರಿಸ್ಥಿತಿಯನ್ನು ವಿಶ್ಲೇಷಿಸಿದ ಅವರು, “ಕೊರೊ ನಾದ ಈ ಕಾಲಘಟ್ಟದಲ್ಲಿ ವಿಶ್ವದ ಹಲವಾರು ಬಡರಾಷ್ಟ್ರಗಳಿಗೆ ಆಹಾರ ಮತ್ತು ಕೊರೊನಾ ಔಷಧಿಗಳನ್ನು ಒದಗಿಸುವ ಮೂಲಕ ತನ್ನ ಶಕ್ತಿಯನ್ನು ಜಗತ್ತಿನ ಮುಂದೆ ಸಾಬೀತುಪಡಿ ಸಿದೆ. ನಾನಾ ದೇಶಗಳ ವಿಜ್ಞಾನಿಗಳು ಹಾಗೂ ಆರೋಗ್ಯ ಸೇವಕರು ಶ್ರಮಿಸುತ್ತಿ ದ್ದಾರೆ. ಭಾರತ ದಲ್ಲೂ ಈ ಹೋರಾಟ ಮಂಚೂಣಿಯಲ್ಲಿದ್ದು 160 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ’ ಎಂದರು.

ಒಂದು ಭೂಮಿ, ಒಂದು ಆರೋಗ್ಯ: “ಭಾರತದ ಮಹತ್ವಾಕಾಂಕ್ಷೆಯ ಪರಿಕಲ್ಪನೆ ಯಾದ ಒಂದು ಭೂಮಿ, ಒಂದು ಆರೋಗ್ಯ ದಡಿ, ವಿಶ್ವದ ವಿವಿಧ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆಗಳನ್ನು ರವಾನಿಸುವ ಮೂಲತ
ನಾವಿಂದು ಲಕ್ಷಾಂತರ ಜೀವಗಳನ್ನು ಉಳಿಸಿ ದ್ದೇವೆ. ನಮ್ಮ ವೈದ್ಯರು, ಶುಶ್ರೂಷಕರು ಜನರ ವಿಶೇಷ ಗೌರವಾದರಣೆಗಳನ್ನು ಪಡೆ ಯುತ್ತಿ ದ್ದಾರೆ’ ಎಂದರು.

ಟಾಪ್ ನ್ಯೂಸ್

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

London: ಶಂಕಾಸ್ಪದ ಲಗೇಜ್‌ ಪತ್ತೆ: ಲಂಡನ್‌ ಏರ್‌ಪೋರ್ಟ್‌ ಖಾಲಿ ಮಾಡಿಸಿ ತನಿಖೆ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Delhi: ಕೇಜ್ರಿವಾಲ್‌ಗಿಂತ ಆತಿಶಿ ಸಾವಿರಪಟ್ಟು ಉತ್ತಮ: ಲೆ.ಗ.ಸಕ್ಸೇನಾ!

Exam

VAO ಹುದ್ದೆ: ಅಂತಿಮ ಕೀ ಉತ್ತರ ಪ್ರಕಟ

highcourt

ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್‌ ಸೂಚನೆ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.