ಬಿಬಿಎಂಪಿಗೆ ಬೂಸ್ಟ್ ನೀಡಿದ ತೆರಿಗೆ ಡೋಸ್!
Team Udayavani, Jan 18, 2022, 12:24 PM IST
ಬೆಂಗಳೂರು: ಕೊರೊನಾ ಅಲೆಯಿಂದ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಜನ “ತೆರಿಗೆಯ ಡೋಸ್’ ನೀಡಿದ್ದಾರೆ!
ಕೋವಿಡ್-19 ಎರಡನೇ ಮತ್ತು ಮೂರನೇಅಲೆಗಳ ನಡುವೆಯೂ ಕಳೆದೆರಡು ವರ್ಷಗಳಿಗೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿಬಿಬಿಎಂಪಿಯಲ್ಲಿ ಗರಿಷ್ಠ ಪ್ರಮಾಣದ ತೆರಿಗೆ ಸಂಗ್ರಹವಾಗಿದೆ. ಇದು ಪಾಲಿಕೆಗೆ “ಬೂಸ್ಟ್’ ನೀಡಿದಂತಾಗಿದೆ.
2021ರ ಏಪ್ರಿಲ್‌ನಿಂದ ಇದುವರೆಗೆ ಪಾಲಿಕೆವ್ಯಾಪ್ತಿಯಲ್ಲಿ 2,674 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕರೊನಾ ಸೋಂಕು ಬರುವುದಕ್ಕಿಂತಮುನ್ನ ಅಂದರೆ 2019-20ನೇ ಸಾಲಿನಲ್ಲಿ ಮಾರ್ಚ್ ಅಂತ್ಯದವರೆಗೆ 2,681 ಕೋಟಿ ರೂ. ಮತ್ತು 2020-21ನೇ ಸಾಲಿನಲ್ಲಿ 2,777 ಕೋಟಿ ರೂ. ತೆರಿಗೆಸಂಗ್ರಹವಾಗಿತ್ತು. ಆದರೆ, ಈ ಬಾರಿ ಆರ್ಥಿಕ ವರ್ಷಅಂತ್ಯಗೊಳ್ಳಲು ಇನ್ನೂ ಎರಡೂವರೆ ತಿಂಗಳು ಬಾಕಿಇರುವಾಗಲೇ ಈ ಗುರಿ ತಲುಪಿರುವುದು ಅಧಿಕಾರಿಗಳಲ್ಲಿ ಖುಷಿ ಇಮ್ಮಡಿಗೊಳಿಸಿದೆ.
ಸಂಗ್ರಹವಾದ ಒಟ್ಟಾರೆ ತೆರಿಯಲ್ಲಿ ಆನ್‌ಲೈನ್ ಮೂಲಕ 1,405.33 ಕೋಟಿ ರೂ., ಬ್ಯಾಂಕ್ ಚಲನ್1,225.80 ಕೋಟಿ ರೂ. ಹಾಗೂ ನೇರ ಪಾವತಿ 43ಕೋಟಿ ರೂ. ಸೇರಿ ಒಟ್ಟು 2,674 ಕೋಟಿ ರೂ. ಆಸ್ತಿತೆರಿಗೆ ಪಾವತಿಯಾಗಿದೆ. ಆದರೆ, ವಾರ್ಷಿಕ ತೆರಿಗೆ ಸಂಗ್ರಹ ಗುರಿ ನಾಲ್ಕು ಸಾವಿರ ಕೋಟಿ ರೂ. ಆಗಿದೆ.
ಈ ಪೈಕಿ ಶೇ. 67ರಷ್ಟು ಗುರಿ ಸಾಧನೆಯಾಗಿದೆ. 2021-22ನೇ ಸಾಲಿನ ಬಜೆಟ್ ವೇಳೆ 3,500 ಕೋಟಿರೂ. ಗುರಿ ಇತ್ತು. ನಂತರದಲ್ಲಿ ಸರ್ಕಾರದ ಸೂಚನೆ ಮೇರೆಗೆ ಇದನ್ನು ಹೆಚ್ಚಿಸಲಾಗಿತ್ತು. ವಾರ್ಷಿಕವಾಗಿ ಆರ್ಥಿಕ ವರ್ಷದ ಆರಂಭದ ತಿಂಗಳಲ್ಲಿಯೇ (ಏ. 31ರ ಒಳಗೆ) ಆಸ್ತಿ ತೆರಿಗೆ ಪಾವತಿಸುವವರಿಗೆ ಶೇ.5 ರಿಯಾಯಿತಿನೀಡಲಾಗುತ್ತದೆ. ಆದರೆ, 2021-22ನೇ ಸಾಲಿನಲ್ಲಿ ಕೋವಿಡ್ 2ನೇ ಅಲೆಯ ವೇಳೆ ಲಾಕ್‌ಡೌನ್‌ಜಾರಿಗೊಳಿಸಿದ್ದರಿಂದ 2021ರ ಜೂ. 30ರವರೆಗೆ ಶೇ.5ರ ರಿಯಾಯಿತಿ ನೀಡಲಾಗಿತ್ತು. ಈ ಅವಧಿಯಲ್ಲಿ ಹೆಚ್ಚಿನ ಶೇ. 40ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದೆ.
ಇದಾದ ನಂತರ ಪಾಲಿಕೆ ಕಂದಾಯ ಸಿಬ್ಬಂದಿತೆರಿಗೆ ಬಾಕಿ ಉಳಿಸಿಕೊಂಡ ಸುಸ್ತಿದಾರರಿಗೆ ನಿರಂತರ ನೊಟೀಸ್ ಜಾರಿಗೊಳಿಸಿದ್ದಾರೆ. ನಂತರ, ಚರಾಸ್ತಿಗಳಮುಟ್ಟುಗೋಲಿಗೆ ನೋಟೀಸ್ ನೀಡುತ್ತಿದ್ದಂತೆ ತೆರಿಗೆಸಂಗ್ರಹ ಹೆಚ್ಚಳವಾಗಿದೆ. ಇದಕ್ಕೆ ಉದಾಹರಣೆಗೆ ಕಳೆದನಾಲ್ಕು ವರ್ಷಗಳಿಂದ 33 ಕೋಟಿ ರೂ. ಆಸ್ತಿ ತೆರಿಗೆಬಾಕಿ ಉಳಿಸಿಕೊಂಡಿದ್ದ ಮಂತ್ರಿ ಮಾಲ್‌ಗೆ ಬೀಗ ಹಾಕಿಕಠಿಣ ಕ್ರಮ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲುಲಾಕ್‌ಡೌನ್, ಕರ್ಫ್ಯೂ ಸೇರಿ ಇತರೆ ನಿರ್ಬಂಧಗಳನಡುವೆ ಆಸ್ತಿ ತೆರಿಗೆ ವಸೂಲಿ ಕಷ್ಟವೆಂದು ಪಾಲಿಕೆ ನಿರೀಕ್ಷಿಸಿತ್ತು. ಆದರೆ, ಸಾರ್ವಜನಿಕರು ಸಮರ್ಪಕವಾಗಿ ಆಸ್ತಿ ತೆರಿಗೆ ಪಾವತಿಸಿದ್ದಾರೆ.
2021-22ರ ತಿಂಗಳುವಾರು
ಆಸ್ತಿ ತೆರಿಗೆ ಸಂಗ್ರಹ ವಿವರ
ತಿಂಗಳು ತೆರಿಗೆ ಸಂಗ್ರಹ (ಕೋಟಿ
ರೂ. ಗಳಲ್ಲಿ)
ಏಪ್ರಿಲ್ 796
ಮೇ 478
ಜೂನ್ 433
ಜುಲೈ 195
ಆಗಸ್ಟ್ 151
ಸೆಪ್ಟೆಂಬರ್ 213
ಅಕ್ಟೋಬರ್ 111
ನವೆಂಬರ್ 86
ಡಿಸೆಂಬರ್ 126
ಜನವರಿ
(12ರವರೆಗೆ)
85
ಒಟ್ಟು 2,674 ಕೋಟಿ ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.