ಡೀಸಿ ಗೈರು, 2 ಗಂಟೆಗೆ ಸೀಮಿತ ಗ್ರಾಮ ವಾಸ್ತವ್ಯ
Team Udayavani, Jan 18, 2022, 12:55 PM IST
ಯಳಂದೂರು: ತಾಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಸೋಮವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಕಾರ್ಯಕ್ರಮದಲ್ಲಿ ಸುಮಾರು 70 ಅಹವಾಲು ಸ್ವೀಕರಿಸಲಾಯಿತು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಖುದ್ದು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಡೆಸಬೇಕಿತ್ತು. ಆದರೆ, ಅವರ ಗೈರಾಗಿದ್ದರಿಂದ ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿ ನೇತೃತ್ವದಲ್ಲಿ ಸಭೆ ನಡೆಯಿತು.
ಕೇವಲ ಎರಡು ಗಂಟೆಯಷ್ಟೇ ನಡೆದ ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗೌಡಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ 9 ಹಳ್ಳಿಗಳಿಂದ ಆಗಮಿಸಿದ್ದನೂರಾರು ಸಾರ್ವಜನಿಕರು ಸುಮಾರು 70 ಅಹವಾಲು ಸಲ್ಲಿಸಿದರು. ಜೊತೆಗೆ ಹಲವಾರು ಮಂದಿ ತಮ್ಮಅಹವಾಲುಗಳನ್ನು ಮೌಖೀಕವಾಗಿ ಸಲ್ಲಿಸಿಅಧಿಕಾರಿಗಳಿಂದ ಸ್ಥಳದÇÉೇ ಉತ್ತರವನ್ನು ಬಯಸಿದರು.
ಸೌಲಭ್ಯ: ವೃದ್ಧಾಪ್ಯ ವೇತನ, ಸಾರಿಗೆ ವ್ಯವಸ್ಥೆ, ಗ್ರಾಮನೈರ್ಮಲ್ಯ, ಜಮೀನು ವಿವಾದಗಳು, ಕಾಲುವೆಒತ್ತುವರಿ, ಆರೋಗ್ಯ ಸಿಬ್ಬಂದಿ ನೇಮಕ ಸೇರಿದಂತೆಹಲವು ಮೂಲಭೂತ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಹೇಳಿಕೊಂಡರು.
ಗೋಲ್‌ಮಾಲ್: ರಾಮಾಪುರ ಗ್ರಾಮದಲ್ಲಿಅಂಗನವಾಡಿ ಕಾರ್ಯಕರ್ತೆಯರ ಹುದ್ದೆಯಲ್ಲಿಗೋಲ್‌ಮಾಲ್ ನಡೆದಿದೆ. ಹಿಂದಿನ ಸಿಡಿಪಿಒತಾಲೂಕಿನ ಹಲವೆಡೆ ಇಂತಹ ತಪ್ಪುಗಳನ್ನು ಎಸಗಿದ್ದಾರೆ.ಸೂಕ್ತ ವ್ಯಕ್ತಿಗಳ ಆಯ್ಕೆ ನಡೆದಿಲ್ಲ. ಈ ಬಗ್ಗೆ ಕ್ರಮವಹಿಸಬೇಕು ಎಂದು ಮನವಿ ಸಲ್ಲಿಸಲಾಯಿತು. ಆಮೆಕೆರೆ ರೈತರಿಗೆ ಕಳೆದ 7 ವರ್ಷಗಳಿಂದಲೂಪರಿಹಾರ ನೀಡಿಲ್ಲ. ಇತ್ತ ವ್ಯವಸಾಯಕ್ಕೆ ಅವಕಾಶವೂಮಾಡಿಕೊಟ್ಟಿಲ್ಲ. ಈ ಬಗ್ಗೆ ಕ್ರಮ ವಹಿಸಿ ಎಂದು ರೈತರು ಕೋರಿದರು.
ನಿಯಮ ಮೀರಿದ ಅಧಿಕಾರಿಗಳಿಗೆ ತರಾಟೆ: ಒಮಿಕ್ರಾನ್ ಇದೆ ಗುಂಪುಗೂಡಬೇಡಿ, ಮಾಸ್ಕ್ ಧರಿಸಿ. ತಪ್ಪಿದ್ದಲ್ಲಿ ದಂಡ ವಿಧಿಸಲಾಗುವುದು ಎಂದುಅಧಿಕಾರಿಗಳೇ ಹೇಳುತ್ತಾರೆ. ಆದರೆ, ನೂರಾರುಜನರನ್ನು ಸೇರಿಸಿ ನೀವೇ ಗ್ರಾಮ ವಾಸ್ತವ್ಯಮಾಡುತ್ತಿರುವುದು ಎಷ್ಟು ಸರಿ ಎಂದು ಅಧಿಕಾರಿಗಳನ್ನು ಸರ್ವಾಜನಿಕರು ತರಾಟೆಗೆ ತೆಗೆದುಕೊಂಡರು.ಗೌಡಹಳ್ಳಿ ದೊಡ್ಡ ಗ್ರಾಮ ಪಂಚಾಯತಿ. ಇಲ್ಲಿಗೆ ನೂರಾರು ಸಾರ್ವಜನಿಕರು ಬರುತ್ತಾರೆ. ಆದರೆಎಲ್ಲರಿಗೂ ಕುರ್ಚಿ ವ್ಯವಸ್ಥೆ ಮಾಡಿಲ್ಲ. ನೂಕುನುಗ್ಗಲಿನಲ್ಲಿಎಲ್ಲರೂ ಒತ್ತೂತ್ತಾಗಿ ನಿಂತಿದ್ದಾರೆ. ಇದರಿಂದ ಕೋವಿಡ್‌ಹರಡುವುದಿಲ್ಲವೇ ಎಂದು ಅಧಿಕಾರಿಗಳನ್ನುಪ್ರಶ್ನಿಸಿದರು. ಸಾರ್ವಜನಿಕರ ಈ ಪ್ರಶ್ನೆಗೆ ನೆರೆದಿದ್ದಅಧಿಕಾರಿಗಳೆಲ್ಲರೂ ನಿರುತ್ತರವಾದ ಘಟನೆಯೂ ಜರುಗಿತು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಗಿರೀಶ್ ಬದೌಲೆ, ತಹಶೀಲ್ದಾರ್‌ಜಯಪ್ರಕಾಶ್, ಡಿವೈಎಸ್ಪಿ ನಾಗರಾಜ್, ಡಿಎಚ್‌ಒವಿಶ್ವೇಶ್ವರಯ್ಯ ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷರಘು, ಸದಸ್ಯರಾದ ಶಾಂತಮಲ್ಲು, ಚಂದ್ರಶೇಖರ್‌ಉಪತಹಶೀಲ್ದಾರ್ ಪುಷ್ಪವತಿ, ರಾಜಸ್ವ ನಿರೀಕ್ಷಕರಾಜಶೇಖರ್, ಗ್ರಾಮಲೆಕ್ಕಾಧಿಕಾರಿ ನಂಜುಂಡಸ್ವಾಮಿ, ಡಾ. ತನುಜಾ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ಜ್ಯೂಸ್ ಅಂಗಡಿಯಲ್ಲಿ ಮದ್ಯ ಮಾರಾಟ ಕಾಣುತ್ತಿಲ್ಲವೇ? :
ಮಲಾರಪಾಳ್ಯ ಹಾಗೂ ಆಲ್ಕೆರೆ ಅಗ್ರಹಾರ ಗ್ರಾಮಗಳ ನಡುವೆ ಇರುವ ರೇಣುಕಾ ಬಾರ್ ಆ್ಯಂಡ್ ರೆಸ್ಟೋರೆಂಟ್ ಅನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಮಧುಮತಿ, ಸುಂದರ್ ಸೇರಿದಂತೆ ಮಲಾರಪಾಳ್ಯ, ಆಲ್ಕೆರೆ ಅಗ್ರಹಾರ ಗ್ರಾಮದ ಯುವಜನತೆ ಆಗ್ರಹಿಸಿದರು. ಪ್ರೌಢಶಾಲೆಗೆ ತೆರಳುವ ವಿದ್ಯಾರ್ಥಿಗಳನ್ನು ಬಾರ್ ಮುಂಭಾಗ ಕುಡುಕರು ಚುಡಾಯಿಸುತ್ತಾರೆ. ಅಕ್ಕಪಕ್ಕದ ಜಮೀನುಗಳಲ್ಲಿ ಕುಡುಕರು ಬಾಟಲಿಗಳನ್ನು ಒಡೆಯುತ್ತಾರೆ. ಬಾರ್ ಮುಂಭಾಗವೇ ಬಸ್ ನಿಲ್ದಾಣ ಸಹ ಇದ್ದು, ಪ್ರಯಾಣಿಕರಿಗೂ ಕಿರಿಕಿರಿಯಾಗುತ್ತಿದೆ. ಕೇವಲ ಮುನ್ನೂರು ಮೀಟರ್ ದೂರದಲ್ಲೇ ಶಾಲೆ ಇದ್ದರೂ ಸಹ ಬಾರ್‌ಗೆ ಹೇಗೆ ಅನುಮತಿ ನೀಡಲಾಯಿತು ಎಂದು ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು, ಬಾರ್ ಗೆಂದು ಅನುಮತಿ ನೀಡಿಲ್ಲ. ಜ್ಯೂಸ್ ಅಂಗಡಿ ತೆರೆಯಲು ಮಾತ್ರ ಅನುಮತಿ ನೀಡಿದ್ದೇವೆ ಎಂದರು. ಈ ವೇಳೆ ಕೆರಳಿದ ಸಾರ್ವಜನಿಕರು ಮಧ್ಯ ಪ್ರವೇಶಿಸಿ, 3 ವರ್ಷಗಳಿಂದ ಬಾರ್ ಕಾರ್ಯನಿರ್ವಹಿಸುತ್ತಿದೆ. ಇದು ನಿಮಗೆ ಕಣ್ಣಿಗೆ ಕಾಣೋದಿಲ್ಲವೇ ಎಂದು ಪ್ರಶ್ನಿಸಿ, ಇಂದೇ ಬಾರ್ ನಿಲ್ಲಿಸಲು ಆದೇಶಿಸಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಪ್ರತಿಕ್ರಿಯಿಸಿದ ಎಡಿಸಿ ಕಾತ್ಯಾಯಿನಿ, ಕೂಡಲೇ ಅಬಕಾರಿ ಅಧಿಕಾರಿಗಳಿಂದ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.