ಗಂಗಾವತಿ : ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಗುಂಡಮ್ಮನಕ್ಯಾಂಪ್ ಮಳಿಗೆಗಳ ಹರಾಜು
Team Udayavani, Jan 19, 2022, 7:06 PM IST
ಗಂಗಾವತಿ : ದಶಕಗಳ ಹಿಂದೆ ನಿರ್ಮಿಸಿ ನೆನಗುದಿಗೆ ಬಿದ್ದಿದ್ದ ಗುಂಡಮ್ಮನ ಕ್ಯಾಂಪ್ ನೂತನ ಮಾರ್ಕೆಟ್‌ನ 41 ವಾಣಿಜ್ಯ ಮಳಿಗೆಗಳ ಪೈಕಿ 25 ಮಳಿಗೆಗಳ ಹರಾಜು ಮಾಡಿ ವ್ಯವಹಾರ ಮಾಡಲು ನಿಗದಿತ ಠೇವಣಿ ಹಾಗೂ ಬಾಡಿಗೆ ನಿಗದಿಯೊಂದಿಗೆ ವರ್ತಕರಿಗೆ ವಿತರಿಸಲಾಯಿತು.
ಹರಾಜು ಪ್ರಕ್ರಿಯೆಗೂ ಮುಂಚೆ ಪೌರಾಯುಕ್ತ ಅರವಿಂದ ಜಮಖಂಡಿ ಮಾತನಾಡಿ, ಕೆಲ ಕಾರಣಕ್ಕಾಗಿ ಕೋಟ್ಯಾಂತರ ರೂ.ಖರ್ಚಿನಲ್ಲಿ ನಿರ್ಮಿಸಿದ ಗುಂಡಮ್ಮ ಕ್ಯಾಂಪ್ ನೂತನ ಮಾರ್ಕೆಟ್ ಹಾಗೂ 41ವ ಮಳಿಗೆಗಳನ್ನು ಮುಚ್ಚಲಾಗಿತ್ತು. ಆಡಳಿತ ಮಂಡಳಿ ಹಾಗೂ ಎಲ್ಲಾ ಸದಸ್ಯರ ಶಾಸಕ ಆಸಕ್ತಿಯಿಂದ ನೂತನ ಮಾರ್ಕೆಟ್‌ಗೆ ನಗರದ ಎಲ್ಲಾ ಬೀದಿ ಬದಿಯ ವ್ಯಾಪಾರಿಗಳು ಆಗಮಿಸಿ ವ್ಯಾಪಾರ ಮಾಡುತ್ತಿದ್ದಾರೆ.ಇದೇ ಮಾರ್ಕೆಟ್‌ಗೆ ಹೊಂದಿ ಕೊಂಡಿರುವ 41 ಮಳಿಗೆಗಳನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸರಕಾರದ ಮೀಸಲಾತಿ ಅನ್ವಯ ಹರಾಜು ಮಾಡಲಾಗಿದೆ.
ಸದ್ಯ 25 ಮಳಿಗೆಗಳಿಗೆ 7.5 ಲಕ್ಷ ಠೇವಣಿಗೆ ಬಂದಿದೆ. ಪ್ರತಿ ಮಳಿಗೆಗೆ 2100-6700 ರೂ. ವರೆಗೆ ಬಾಡಿಗೆ ನಿಗದಿ ಮಾಡಲಾಗಿದೆ. ಉಳಿದ ಮಳಿಗೆಗಳನ್ನು ಶೀಘ್ರವೇ ಹರಾಜು ಮಾಡಲಾಗುತ್ತದೆ. ನಗರದಲ್ಲಿರುವ ಬಾಡಿಗೆ ಅವಧಿ ಮುಗಿದ ನಗರಸಭೆಯ ಮಳಿಗೆಗಳನ್ನು ಆಶಡಳಿತ ಮಂಡಳಿ ಮತ್ತು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಹೊಸದಾಗಿ ಹರಾಜು ನಡೆಸಲಾಗುತ್ತದೆ. ನಗರದಲ್ಲಿ ಸ್ಚಚ್ಛತೆ ಕಾಪಾಡಲು ವ್ಯಾಪಾರಿಗಳು ಜನರು ಪ್ರತಿನಿಧಿಗಳು ಕಾಳಜಿ ವಹಿಸಬೇಕು. ಮಾಂಸದ ನೂತನ ಮಾರ್ಕೆಟ್ ಗೆ ಎಲ್ಲಾ ಮಾಂಸ ಮಾರಾಟಗಾರರನ್ನು ಸ್ಥಳಾಂತರ ಮಾಡಲು ಸೂಚನೆ ಇದ್ದು ಶೀಘ್ರ ಅನುಷ್ಠಾನ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಗದ್ವಾಲ್ ಕಾಶಿಂಸಾಬ, ಉಮೇಶ ಸಿಮಗನಾಳ, ಸಂತೋಷ ದಂಡಿನ್, ಸಲ್ಮಾನ್ ಬಿಚ್ಚಗತ್ತಿ, ಮೌಲಸಾಬ, ಅಜಯ್ ಬಿಚ್ಚಾಲಿ ಸೇರಿ ನಗರಸಭೆಯ ಅಧಿಕಾರಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ:ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶನ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.