ಭಾರತಕ್ಕೆ ಬವುಮ-ಡುಸೆನ್ ಶತಕದ ಏಟು
ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 31 ರನ್ ಸೋಲು; ಬವುಮ, ಡುಸೆನ್ ದ್ವಿಶತಕ ಜತೆಯಾಟ
Team Udayavani, Jan 19, 2022, 11:07 PM IST
ಪಾರ್ಲ್: ನಾಯಕ ಟೆಂಬ ಬವುಮ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ರಸ್ಸಿ ವಾನ್ ಡರ್ ಡುಸೆನ್ ಅವರ ಅಮೋಘ ಶತಕದ ಆಟ ಹಾಗೂ ದ್ವಿಶತಕದ ಜತೆಯಾಟದ ನೆರವಿನಿಂದ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ಆರಂಭ ಪಡೆದಿದೆ. ಬುಧವಾರ ನಡೆದ ಮೊದಲ ಮುಖಾಮುಖಿಯಲ್ಲಿ ಭಾರತವನ್ನು 31 ರನ್ನುಗಳಿಂದ ಮಣಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ 4 ವಿಕೆಟಿಗೆ 296 ರನ್ ಪೇರಿಸಿದರೆ, ಭಾರತ 8 ವಿಕೆಟಿಗೆ 265 ರನ್ ಮಾಡಿ ಶರಣಾಯಿತು.
ಪಾರ್ಲ್ “ಬೋಲ್ಯಾಂಡ್ ಪಾರ್ಕ್ ಸ್ಟೇಡಿಯಂ’ ಬ್ಯಾಟಿಂಗಿಗೆ ಉತ್ತಮ ರೀತಿಯಲ್ಲೇ ಸಹಕರಿಸುತ್ತಿತ್ತು. ಭಾರತದ ಚೇಸಿಂಗ್ ವೇಳೆಯೂ ಇದು ಸಾಬೀತಾಗಿತ್ತು. ನಾಯಕ ಕೆ.ಎಲ್. ರಾಹುಲ್ (12) ವಿಕೆಟ್ ಬೇಗನೇ ಉರುಳಿದರೂ “ಕಮ್ ಬ್ಯಾಕ್ ಮ್ಯಾಚ್’ನಲ್ಲಿ ಆಡುತ್ತಿದ್ದ ಶಿಖರ್ ಧವನ್ ಮತ್ತು ನಾಯಕತ್ವದ ಒತ್ತಡದಿಂದ ಮುಕ್ತರಾದ ವಿರಾಟ್ ಕೊಹ್ಲಿ ಸೇರಿಕೊಂಡು ಇನ್ನಿಂಗ್ಸ್ ಬೆಳೆಸಿದರು. 26ನೇ ಓವರ್ ತನಕ ಭಾರತ ಒಂದೇ ವಿಕೆಟಿಗೆ 138 ರನ್ ಗಳಿಸಿ ಹಿಡಿತ ಸಾಧಿಸಿತ್ತು. ಆದರೆ ಈ ಜೋಡಿ ಬೇರ್ಪಟ್ಟ ಕೂಡಲೇ ದಕ್ಷಿಣ ಆಫ್ರಿಕಾ ಬೌಲರ್ ಕೈ ಮೇಲಾಯಿತು. ಭಾರತದ ವಿಕೆಟ್ಗಳು ಪಟಪಟನೆ ಉದುರತೊಡಗಿದವು.
ಎಡಗೈ ಆರಂಭಕಾರ ಶಿಖರ್ ಧವನ್ ಸರ್ವಾಧಿಕ 79 ರನ್ ಬಾರಿಸಿದರು. 84 ಎಸೆತಗಳ ಈ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಒಳಗೊಂಡಿತ್ತು. ಕೊಹ್ಲಿ 63 ಎಸೆತ ನಿಭಾಯಿಸಿ 51 ರನ್ ಮಾಡಿದರು (3 ಬೌಂಡರಿ). ಕೊನೆಯಲ್ಲಿ ಶಾರ್ದೂಲ್ ಠಾಕೂರ್ ಸಿಡಿದು ನಿಲ್ಲುವಾಗ ಪಂದ್ಯ ಆಗಲೇ ಭಾರತದ ಕೈ ಜಾರಿತ್ತು. ಮಧ್ಯಮ ಕ್ರಮಾಂಕದಲ್ಲಿ ಪಂತ್ ಮತ್ತು ಅಯ್ಯರ್ದ್ವಯರು ಸ್ವಲ್ಪ ಹೊತ್ತು ಕ್ರೀಸ್ ಆಕ್ರಮಿಸಿಕೊಂಡಿದ್ದರೆ ಈ ಪಂದ್ಯದ ಫಲಿತಾಂಶವೇ ಬೇರೆ ಆಗುತ್ತಿತ್ತು. ಠಾಕೂರ್ 43 ಎಸೆತ ಎದುರಿಸಿ ಅಜೇಯ 50 ರನ್ ಬಾರಿಸಿದರು (5 ಬೌಂಡರಿ, 1 ಸಿಕ್ಸರ್).
ಇದನ್ನೂ ಓದಿ:ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್ಗೆ ಮೊದಲ ಗೆಲುವು
ಬವುಮ, ಡುಸೆನ್ ಸಾಹಸ
ಶತಕದೊಂದಿಗೆ ಅಬ್ಬರಿಸಿದ ನಾಯಕ ಟೆಂಬ ಬವುಮ ಮತ್ತು ರಸ್ಸಿ ವಾನ್ ವಾನ್ ಡರ್ ಡುಸೆನ್ 4ನೇ ವಿಕೆಟಿಗೆ ದ್ವಿಶತಕದ ಜತೆಯಾಟ ದಾಖಲಿಸಿ ಭಾರತವನ್ನು ಕಾಡಿದರು. 10 ಓವರ್ ಮುಕ್ತಾಯಕ್ಕೆ ಒಂದಕ್ಕೆ 39 ರನ್, 18ನೇ ಓವರ್ ವೇಳೆ 3ಕ್ಕೆ 68 ರನ್ ಗಳಿಸಿ ಸಾಮಾನ್ಯ ಮೊತ್ತಕ್ಕೆ ನಿಲ್ಲಬಹುದಾಗಿದ್ದ ತಂಡದ ಮೊತ್ತವನ್ನು ಇವರಿಬ್ಬರು ಸೇರಿಕೊಂಡು ಮುನ್ನೂರರ ಗಡಿಯ ತನಕ ಕೊಂಡೊಯ್ದದ್ದು ಅಸಾಮಾನ್ಯ ಸಾಹಸವೆನಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಿರ್ಧಾರವನ್ನು ಸಮರ್ಥಿಸಿದರು.
ಮಾಲನ್ (6), ಟೆಸ್ಟ್ ನಿವೃತ್ತಿ ಘೋಷಿಸಿದ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ ಡಿ ಕಾಕ್ (27), ಮಾರ್ಕ್ ರಮ್ (4) ವಿಕೆಟ್ಗಳನ್ನು ಬೇಗನೇ ಕಿತ್ತ ಭಾರತ ಮೇಲುಗೈ ನಿರೀಕ್ಷೆಯಲ್ಲಿತ್ತು. ಆದರೆ ಬವುಮ-ಡುಸೆನ್ ಸೇರಿಕೊಂಡು ರಾಹುಲ್ ಬಳಗದ ಲೆಕ್ಕಾಚಾರವನ್ನೆಲ್ಲ ತಲೆ ಕೆಳಗಾಗಿಸಿತು. ಇಬ್ಬರೂ ಏಕದಿನದಲ್ಲಿ ದ್ವಿತೀಯ ಶತಕ ಬಾರಿಸಿ ಮೆರೆದರು.
ಬವುಮ ಅವರ ಶತಕ 45ನೇ ಓವರ್ನಲ್ಲಿ ಪೂರ್ತಿಗೊಂಡಿತು. ಇವರ ಗಳಿಕೆ 143 ಎಸೆತಗಳಿಂದ 110 ರನ್. ಕಪ್ತಾನನ ಈ ಜವಾಬ್ದಾರಿಯುತ ಇನ್ನಿಂಗ್ಸ್ನಲ್ಲಿ ಕೇವಲ 8 ಬೌಂಡರಿ ಒಳಗೊಂಡಿತ್ತು. ಇನ್ನೊಂದೆಡೆ ಡುಸೆನ್ ಅತ್ಯಂತ ಆಕ್ರಮಣಕಾರಿ ಮೂಡ್ನಲ್ಲಿದ್ದರು. ಕೇವಲ 96 ಎಸೆತಗಳಲ್ಲಿ 129 ರನ್ ಬಾರಿಸಿ ಅಜೇಯರಾಗಿ ಉಳಿದರು. ಸಿಡಿಸಿದ್ದು 8 ಫೋರ್ ಹಾಗೂ 4 ಸಿಕ್ಸರ್.
ಉರುಳಿದ 4 ವಿಕೆಟ್ಗಳಲ್ಲಿ ಎರಡು ಬುಮ್ರಾ ಪಾಲಾಯಿತು. ಇನ್ನೊಂದು ವಿಕೆಟ್ ಅಶ್ವಿನ್ ಉರುಳಿಸಿದರು. ಮಾರ್ಕ್ರಮ್ ರನೌಟಾದರು. ಭುವನೇಶ್ವರ್, ಠಾಕೂರ್, ಚಹಲ್ ಯಾವುದೇ ಪರಿಣಾಮ ಬೀರಲಿಲ್ಲ. ಪದಾರ್ಪಣ ಪಂದ್ಯವಾಡಿದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ಗೆ ಬೌಲಿಂಗ್ ಅವಕಾಶವನ್ನೇ ನೀಡಲಿಲ್ಲ. ಠಾಕೂರ್ ಎಸೆದ ಅಂತಿಮ ಓವರ್ನಲ್ಲಿ 17 ರನ್ ಸೋರಿ ಹೋಯಿತು.
ಸ್ಕೋರ್ ಪಟ್ಟಿ
ದಕ್ಷಿಣ ಆಫ್ರಿಕಾ
ಕ್ವಿಂಟನ್ ಡಿ ಕಾಕ್ ಬಿ ಅಶ್ವಿನ್ 27
ಜಾನೆಮನ್ ಮಲಾನ್ ಸಿ ಪಂತ್ ಬಿ ಬುಮ್ರಾ 6
ಟೆಂಬ ಬವುಮ ಸಿ ರಾಹುಲ್ ಬಿ ಬುಮ್ರಾ 110
ಐಡನ್ ಮಾರ್ಕ್ರಮ್ ರನೌಟ್ 4
ವಾನ್ಡರ್ ಡುಸೆನ್ ಔಟಾಗದೆ 129
ಡೇವಿಡ್ ಮಿಲ್ಲರ್ ಔಟಾಗದೆ 2
ಇತರ 18
ಒಟ್ಟು (4 ವಿಕೆಟಿಗೆ) 296
ವಿಕೆಟ್ ಪತನ: 1-19, 2-58, 3-68, 4-272.
ಬೌಲಿಂಗ್;
ಜಸ್ಪ್ರೀತ್ ಬುಮ್ರಾ 10-0-48-2
ಭುವನೇಶ್ವರ್ ಕುಮಾರ್ 10-0-64-0
ಶಾರ್ದೂಲ್ ಠಾಕೂರ್ 10-1-72-0
ಆರ್.ಅಶ್ವಿನ್ 10-0-53-1
ಯಜುವೇಂದ್ರ ಚಹಲ್ 10-0-53-0
ಭಾರತ
ಕೆ.ಎಲ್. ರಾಹುಲ್ ಸಿ ಡಿ ಕಾಕ್ ಬಿ ಮಾರ್ಕ್ರಮ್ 12
ಶಿಖರ್ ಧವನ್ ಬಿಹಾರಾಜ್ 79
ವಿರಾಟ್ ಕೊಹ್ಲಿ ಸಿ ಟೆಂಬ ಬವುಮ ಬಿ ತಬ್ರೇಜ್ ಶಮ್ಸಿ 51
ರಿಷಭ್ ಪಂತ್ ಸ್ಟಂಪ್ಡ್ ಡಿ ಕಾಕ್ ಬಿ ಫೆಲುಕ್ವಾಯೊ 16
ಶ್ರೇಯಸ್ ಅಯ್ಯರ್ ಸಿ ಡಿ ಕಾಕ್ ಬಿ ಎನ್ಗಿಡಿ 17
ವೆಂಕಟೇಶ್ ಅಯ್ಯರ್ ಸಿ ಡುಸೆನ್ ಬಿ ಎನ್ಗಿಡಿ 2
ಆರ್. ಅಶ್ವಿನ್ ಬಿ ಫೆಲುಕ್ವಾಯೊ 7
ಶಾರ್ದೂಲ್ ಠಾಕೂರ್ ಔಟಾಗದೆ 50
ಭುವನೇಶ್ವರ್ ಸಿ ಬವುಮ ಬಿ ಶಮ್ಸಿ 4
ಜಸ್ಪ್ರೀತ್ ಬುಮ್ರಾ ಔಟಾಗದೆ 14 ಇತರ 13
ಒಟ್ಟು ( 8 ವಿಕೆಟಿಗೆ) 265
ವಿಕೆಟ್ ಪತನ: 1-46, 2-138, 3-152, 4-181, 5-182, 6-188, 7-199, 8-214.
ಬೌಲಿಂಗ್;
ಐಡನ್ ಮಾರ್ಕ್ರಮ್ 6-0-30-1
ಮಾರ್ಕೊ ಜೆನ್ಸೆನ್ 9-0-49-0
ಕೇಶವ್ ಮಹಾರಾಜ್ 10-0-42-1
ಲುಂಗಿ ಎನ್ಗಿಡಿ 10-0-64-2
ತಬ್ರೇಜ್ ಶಮ್ಸಿ 10-1-52-2
ಆ್ಯಂಡಿಲ್ ಫೆಲುಕ್ವಾಯೊ 5-0-26-2
ಇದನ್ನೂ ಓದಿ:ಐಸಿಸಿ ವರ್ಷದ ಟಿ20 ತಂಡ: ಮಂಧನಾ ಭಾರತದ ಏಕೈಕ ಕ್ರಿಕೆಟರ್
ಎಕ್ಸ್ಟ್ರಾ ಇನ್ನಿಂಗ್ಸ್
– ಕೆ.ಎಲ್. ರಾಹುಲ್ ತಮ್ಮ 39ನೇ ಪಂದ್ಯದಲ್ಲೇ ಏಕದಿನ ತಂಡದ ನಾಯಕತ್ವ ವಹಿಸಿದರು. ಇವರಿಗೂ ಮೊದಲು 50 ಪಂದ್ಯಗಳಿಗೂ ಮುನ್ನ ನಾಯಕತ್ವ ವಹಿಸಿದ ಭಾರತೀಯನೆಂದರೆ ಮೊಹಿಂದರ್ ಅಮರನಾಥ್. 1984ರಲ್ಲಿ ಅವರು 35ನೇ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು.
– ವೆಂಕಟೇಶ್ ಅಯ್ಯರ್ ಮತ್ತು ಮಾರ್ಕೊ ಜಾನ್ಸೆನ್ ಈ ಪಂದ್ಯದ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಅಡಿ ಇರಿಸಿದರು.
– ಬವುಮ-ಡುಸೆನ್ ಭಾರತದ ವಿರುದ್ಧ 4ನೇ ವಿಕೆಟಿಗೆ ಅತ್ಯಧಿಕ 204 ರನ್ ಒಟ್ಟುಗೂಡಿಸಿದ ದಕ್ಷಿಣ ಆಫ್ರಿಕಾ ಜೋಡಿ ಎನಿಸಿತು. 2013ರ ಸೆಂಚುರಿಯನ್ ಪಂದ್ಯದಲ್ಲಿ ಡಿ ಕಾಕ್-ಡಿ ವಿಲಿಯರ್ 171 ರನ್ ಒಟ್ಟುಗೂಡಿಸಿದ್ದು ಹಿಂದಿನ ದಾಖಲೆ.
– ಬವುಮ-ಡುಸೆನ್ 4ನೇ ವಿಕೆಟಿಗೆ ಭಾರತದ ವಿರುದ್ಧ 2ನೇ ಅತ್ಯಧಿಕ ರನ್ ಪೇರಿಸಿದರು (204). 2009ರ ಸೆಂಚುರಿಯನ್ ಪಂದ್ಯದಲ್ಲಿ ಪಾಕಿಸ್ಥಾನದ ಶೋಯಿಬ್ ಮಲಿಕ್-ಮೊಹಮ್ಮದ್ ಯೂಸುಫ್ 206 ರನ್ ಒಟ್ಟುಗೂಡಿಸಿದ್ದು ದಾಖಲೆ.
– ಬವುಮ-ಡುಸೆನ್ ಭಾರತದ ವಿರುದ್ಧ ಎಲ್ಲ ವಿಕೆಟ್ಗಳಿಗೆ ಅನ್ವಯಿಸುವಂತೆ 2ನೇ ದೊಡ್ಡ ಜತೆಯಾಟ ನಡೆಸಿದ ದಕ್ಷಿಣ ಆಫ್ರಿಕಾದ ಜೋಡಿ ಎನಿಸಿತು. 2000ದ ಕೊಚ್ಚಿ ಪಂದ್ಯದಲ್ಲಿ ಗ್ಯಾರಿ ಕರ್ಸ್ಟನ್-ಹರ್ಶಲ್ ಗಿಬ್ಸ್ ಮೊದಲ ವಿಕೆಟಿಗೆ 235 ರನ್ ಗಳಿಸಿದ್ದು ದಾಖಲೆ.
– ಭಾರತದ ವಿರುದ್ಧ 4ನೇ ವಿಕೆಟಿಗೆ 4ನೇ ದ್ವಿಶತಕದ ಜತೆಯಾಟ ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.