979 ಸೋಂಕಿತರಿಗೆ ಹೋಂ ಐಸೋಲೇಷನ್
Team Udayavani, Jan 20, 2022, 2:33 PM IST
ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದುದಾವಣಗೆರೆ ಜಿಲ್ಲೆಯಲ್ಲಿ ಕೊರೊನಾದ ಮೂರನೇಅಲೆ ಊಹೆಗೂ ನಿಲುಕದಂತೆ ಬಹು ವೇಗವಾಗಿಹರಡುತ್ತಿದೆ. 10 ದಿನಗಳ ಅಂತರದಲ್ಲಿ ಸಕ್ರಿಯಪ್ರಕರಣಗಳ ಸಂಖ್ಯೆ ಸಾವಿರದ ಗಡಿ ದಾಟಿದ್ದರೂಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವರ ಸಂಖ್ಯೆ ಕಡಿಮೆಇರುವುದು ಸಮಾಧಾನದ ವಿಷಯ.ಹೊಸ ವರ್ಷದ ಪ್ರಾರಂಭದ ದಿನ ಜಿಲ್ಲೆಯಲ್ಲಿಯಾವುದೇ ಪ್ರಕರಣ ವರದಿಯಾಗಿರಲಿಲ್ಲ. 13ಸಕ್ರಿಯ ಪ್ರಕರಣಗಳಿದ್ದವು.
ಜ.8ರಂದು ಮೊದಲಬಾರಿಗೆ 18 ಜನರಲ್ಲಿ ಕೊರೊನಾ ದೃಢಪಟ್ಟಿದ್ದು,39 ಸಕ್ರಿಯ ಪ್ರಕರಣಗಳಿದ್ದವು. ಜ.13ರಂದು 92ಪ್ರಕರಣ ವರದಿಯಾದವು. ಸಕ್ರಿಯ ಪ್ರಕರಣಗಳಸಂಖ್ಯೆ ಏರುಮುಖವಾಗತೊಡಗಿ 362ಕ್ಕೆ ಏರಿತ್ತು.ಜ.15ರಂದು 253 ಹಾಗೂ ಜ.18 ರಂದು 257ಪ್ರಕರಣ ವರದಿಯಾದವು. ಈಗ ಸಕ್ರಿಯ ಪ್ರಕರಣಗಳಸಂಖ್ಯೆ 1036ರ ಗಡಿ ದಾಟಿದೆ.
ಶೇ. 12.26 ಪಾಸಿಟಿವಿಟಿ: ದಾವಣಗೆರೆ ಜಿಲ್ಲೆಯಲ್ಲಿಈಗ ಶೇ.12.26 ಪಾಸಿಟಿವಿಟಿ ದರ ಇದೆ. ಪ್ರತಿ 100ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ 12ಜನರಲ್ಲಿ ಪಾಸಿಟಿವ್ ಕಂಡು ಬರುತ್ತಿದೆ. ವಾರಾಂತ್ಯದಪಾಸಿಟಿವಿಟಿ ದರ ಶೇ.5.93 ಇದೆ. ಜ.2ರಿಂದ9ರವರೆಗೆ ಪಾಸಿಟಿವಿಟಿ ದರ ಶೇ.0.47ರಷ್ಟಿತ್ತು.ಜನವರಿ ಮೊದಲ ವಾರದಲ್ಲಿ 13,045 ಜನರಕೊರೊನಾ ಪರೀಕ್ಷೆ ನಡೆಸಿದಾಗ 61 ಜನರಲ್ಲಿಕೊರೊನಾ ದೃಢಪಟ್ಟಿತ್ತು. ಈಗ ಪಾಸಿಟಿವಿಟಿ ದರಹೆಚ್ಚಳವಾಗಿದೆ.
979 ಸೋಂಕಿತರು ಮನೆಯಲ್ಲಿ: ದಾವಣಗೆರೆಜಿಲ್ಲೆಯಲ್ಲಿ ಜ.18ರಂದು ಅಂತ್ಯಕ್ಕೆ 1036 ಸಕ್ರಿಯಪ್ರಕರಣ ವರದಿಯಾಗಿವೆ. ಸಮಾಧಾನದ ವಿಷಯಎಂದರೆ 1036 ಸಕ್ರಿಯ ಪ್ರಕರಣಗಳ ಪೈಕಿ 59 ಜನಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 39 ಸೋಂಕಿತರು ಸರ್ಕಾರಿ ಆಸ್ಪತ್ರೆಯಲ್ಲಿ,ವಿವಿಧ ಖಾಸಗಿ ಆಸ್ಪತ್ರೆಯಲ್ಲಿ 18 ಸೋಂಕಿತರಿದ್ದಾರೆ.ಸೌಮ್ಯ ಲಕ್ಷಣಗಳ ಹಿನ್ನೆಲೆಯಲ್ಲಿ 979 ಸೋಂಕಿತರುಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾದ ಸಂಭವನೀಯ ಮೂರನೇಅಲೆಯಲ್ಲಿ ಜಿಲ್ಲೆಯಲ್ಲಿ 640 ಮಕ್ಕಳಿಗೆ ಸೋಂಕುತಗುಲುವ ಸಾಧ್ಯತೆ ಇದೆ. ಅದರಲ್ಲಿ ಶೇ.5ರಷ್ಟುಅಂದರೆ 32 ಮಕ್ಕಳು ತೀವ್ರ ತರವಾದ ಸೋಂಕಿಗೆಒಳಗಾಗಬಹುದು ಎಂಬ ಲೆಕ್ಕಾಚಾರದಲ್ಲಿಜಿಲ್ಲಾಡಳಿತವು ಜಿಲ್ಲಾ ಚಿಟಗೇರಿ ಮತ್ತು ವಿವಿಧಖಾಸಗಿ ಆಸ್ಪತ್ರೆಯಲ್ಲಿ 444 ಸಾಮಾನ್ಯ ಬೆಡ್,37 ಐಸಿಯು, 16 ವೆಂಟಿಲೇಟರ್ ಬೆಡ್‌ಗಳಜತೆಗೆ ಹೆಚ್ಚುವರಿಯಾಗಿ 32 ಬೆಡ್ ಸಾಮರ್ಥ್ಯದಪಿಐಸಿಯು, 36 ಐಸಿಯು ಬೆಡ್ ಒಳಗೊಂಡಂತೆಅಗತ್ಯ ಸಿದ್ಧತೆ ಮಾಡಿಕೊಂಡಿತ್ತು.
ಕೊರೊನಾದ ಎರಡನೇ ಅಲೆಯಲ್ಲಿಜಿಲ್ಲಾಡಳಿತ ಹೋಂ ಐಸೋಲೇಷನ್‌ಗೆಅವಕಾಶ ನೀಡದೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿತ್ತು. ಈ ಬಾರಿತೀರಾ ಗಂಭೀರ ಲಕ್ಷಣಗಳು ಇಲ್ಲದೇ ಇದ್ದಂತಹವರುಆಸ್ಪತ್ರೆಗಳಿಗೆ ಬರದೆ ಮನೆಯಲ್ಲೇ ಚಿಕಿತ್ಸೆಪಡೆಯುವಂತೆ ಸರ್ಕಾರವೇ ಹೇಳಿರುವುದರಿಂದ 979ಸೋಂಕಿತರು ಹೋಂ ಐಸೋಲೇಷನ್‌ನಲ್ಲೇ ಇದ್ದಾರೆ.
ರಾ. ರವಿಬಾಬು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.