ಜಿಲೆಯಲ್ಲಿ 4 ಸಾವಿರ ಗಡಿದಾಟಿದ ಸಕ್ರೀಯ ಪ್ರಕರಣ : ಜನರಲ್ಲಿ ಆತಂಕ
Team Udayavani, Jan 20, 2022, 3:37 PM IST
ದೇವನಹಳ್ಳಿ: ಜಿಲ್ಲೆಯಲ್ಲಿ ಕೊರೊನಾ ಕಂಟ್ರೋಲ್ ತಪ್ಪುತ್ತಿದೆ. ಪ್ರತಿದಿನವೂ ಕೊರೊನಾ ಸೋಂಕಿನ ಪ್ರಕರಣ ಏರಿಕೆಯಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಪ್ರತಿನಿತ್ಯ ಕೊರೊನಾ ಸೋಂಕಿನ ಪ್ರಕರಣ ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿದೆ. ಇದರಿಂದ ನಾಲ್ಕು ತಾಲೂಕುಗಳಲ್ಲಿ ಕಂಟೈನ್ಮೆಂಟ್ ವಲಯ ಹೆಚ್ಚಾಗುತ್ತಿದೆ.
ಜಿಲ್ಲೆಯಲ್ಲಿ ಬುಧವಾರದವರೆಗೆ 4 ಸಾವಿರದ 728 ಸಕ್ರಿಯ ಪ್ರಕರಣ ಇವೆ. ಒಂದು ಸಾವಿರದ ಗಡಿ ಕೊರೊನಾ ಪ್ರಕರಣ ದಾಟಿದೆ. ಜನವರಿ 13ರಂದು 390 ಪ್ರಕರಣ, ಜನವರಿ 14ರಂದು 418 ಪ್ರಕರಣ, ಜ. 15ರಂದು 503 ಪ್ರಕರಣ, ಜ.16ರಂದು 722 ಪ್ರಕರಣ ಹಾಗೂ 18ರಂದು 1,116, ಬುಧವಾರ 785 ಪ್ರಕರಣಗಳು ಪತ್ತೆಯಾಗಿದೆ. ಜ.18ರ ಮಂಗಳವಾರ ನೆಲಮಂಗಲ 225, ಹೊಸಕೋಟೆ 307, ದೇವನಹಳ್ಳಿ ತಾಲೂಕು 113, ದೊಡ್ಡಬಳ್ಳಾಪುರ ತಾಲೂಕು 428 ಕೊರೊನಾ ಪ್ರಕರಣ ಒಂದೇ ದಿನದಲ್ಲಿ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಈಗಾಗಲೇ ಕಂಟೈನ್ಮೆಂಟ್ ವಲಯ ಸಕ್ರಿಯವಾಗಿದೆ. ಹೀಗೆ ಮುಂದುವರಿದರೆ ಮತ್ತಷ್ಟು ಕಂಟೈನ್ಮೆಂಟ್ ವಲಯಗಳ ಘೋಷಣೆ ಸಾಧ್ಯತೆ ಹೆಚ್ಚಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,129 ಗಡಿದಾಟಿದ್ದು ಎಚ್ಚರವಹಿಸಬೇಕಾಗಿದೆ. ಮೂರನೇ ಅಲೆ ಜಿಲ್ಲೆಯನ್ನು ಕಾಡಲು ಪ್ರಾರಂಭಿಸಿದೆ. ಜಿಲ್ಲಾದ್ಯಂತ ವೀಕೆಂಡ್ ಕರ್ಫ್ಯೂ ವೇಳೆಯಲ್ಲಿ ಜನರ ನಿರ್ಬಂಧ ನಡುವೆಯೂ
ಜನರ ಓಡಾಟ ಸರಿಯಾಗಿ ನಿಲ್ಲಿಸುತ್ತಿಲ್ಲ.
ಜಿಲ್ಲಾಡಳಿತ ಸೂಚನೆ: ಜಿಲ್ಲೆಯ ಆಸ್ಪತ್ರೆಗಳಲ್ಲಿ ಗುಂಪು ಸೇರುವುದನ್ನು ತಪ್ಪಿಸಲು ಹಾಗೂ ಆಸ್ಪತ್ರೆ ಮೇಲಾಗುವ ಒತ್ತಡವನ್ನು ತಪ್ಪಸಲು ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸಲುವಾಗಿ ಜ್ವರ ಮತ್ತು ತುರ್ತು ಆರೋಗ್ಯ ಚಿಕಿತ್ಸೆಯ ಅಗತ್ಯವಿರುವ ರೋಗಿಗಳು ಮಾತ್ರ ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸ್ವಾಯತ್ವ ಸಂಸ್ಥೆಗಳಿಗೆ ಭೇಟಿ ನೀಡಲು ಸೂಚಿಸಿದೆ. ಇನ್ನುಳಿದಂತೆ ಸಣ್ಣ ಪ್ರಮಾಣದ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಹೊರರೋಗಿಗಳು, ದಂತ ಚಿಕಿತ್ಸೆಯವರು ಎರಡು ವಾರ ಆಸ್ಪತ್ರೆಗೆ ಭೇಟಿ ನೀಡದಿರಲು ಜಿಲ್ಲಾಡಳಿತ ಸೂಚನೆ ನೀಡಿದೆ.
ಸೋಂಕು ಉಲ್ಬಣ: ಜಿಲ್ಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಗ್ರಾಮೀಣ ಭಾಗಗಳಲ್ಲೂ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಜಿಲ್ಲೆಯ ನಾಲ್ಕು ತಾಲೂಕು ಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಕಂಟೈನ್ಮೆಂಟ್ ವಲಯ ಘೋಷಣೆಯಾಗಿವೆ. ಜಿಲ್ಲೆಯಲ್ಲಿ ಕಳೆದ 15ದಿನಗಳ ಹಿಂದೆ ಕೊರೊನಾ ಸೋಂಕಿನ ಪ್ರಮಾಣ ಪ್ರತಿ ದಿನ ಒಂದಂಕಿಯಲ್ಲಿರುತ್ತಿದೆ. ಆದರೆ ಕಳೆದ, 10 ದಿನಗಳಿಂದ ಸೋಂಕು ಉಲ್ಬಣಗೊಂ ಡಿದೆ. ಬೆಂಗಳೂರಿಗೆ ನಾಲ್ಕು ತಾಲೂಕು ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುತ್ತದೆ. ದೇವನಹಳ್ಳಿ ತಾಲೂಕಿನಲ್ಲಿ ಕೆಂಪೇಗೌಡ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರತಿದಿನ ಅನೇಕ ವಿದೇಶಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಅಲ್ಲಿಯೇ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ
Temperature; ಮುಂದಿನ 20 ವರ್ಷ ಮಳೆ ಜಾಸ್ತಿ, ಉಷ್ಣಾಂಶ ಏರಿಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.